ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನನ್ನ ಗೆಲುವಿನಲ್ಲಿ ಉಪ್ಪಾರ ಸಮಾಜದ ಬಂಧುಗಳ ಪಾತ್ರವೂ ಮಹತ್ತರವಾಗಿದ್ದು ಈ ನಿಟ್ಟಿನಲ್ಲಿ ಸಮಾಜಕ್ಕೆ ನನ್ನ ಕೈಲಾದ ಕೊಡುಗೆ ನೀಡಲು ಸಿದ್ಧನಾಗಿದ್ದೇನೆ. ಸಮಾಜದ ಹಲವರಿಗೆ ಸೂಕ್ತ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ಮುಂದಾಗಿರುವೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಭಗೀರಥ ಜಯಂತಿ ವೇದಿಕೆ ಸಮಾರಂಭದಲ್ಲಿ ಮಾತನಾಡಿ, ಯಳಂದೂರಿನಲ್ಲಿ ಉಪ್ಪಾರ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದು ಕೊಳ್ಳಗಾಲದಲ್ಲಿ ಜಾಗ ಸಿಕ್ಕ ಕೊಡಲೆ ಭವನ ನಿರ್ಮಾಣಕ್ಕೆ ಅನುದಾನ ನೀಡುವೆ. ಅಂಬೇಡ್ಕರ್ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಮೂಲಕ ಸಾರ್ಥಕ ಜೀವನ ನಡೆಸುವಂತಾಗಬೇಕು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೆ ಕಡ್ಡಾಯ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಮುಂದಾಗಬೇಕು ಮಹರ್ಷಿಗಳು ಛಲಬಿಡದ ತ್ರಿವಿಕ್ರಮರು, ಅವರ ಜಯಂತಿ ಆಚರಣೆ ವೇಳೆ ಅವರ ಆಶಯ ಈಡೇರಿಸುವ ನಿಟ್ಟಿನಲ್ಲಿ ಸಮಾಜದ ಮುಖಂಡರು ಮುಂದಾಗಬೇಕು ಎಂದರು.
ಉಪ್ಪಾರ ಸಮಾಜ ನನಗೆ ಈ ಚುನಾವಣೆಯಲ್ಲಿ 33ಸಾವಿರಕ್ಕೂ ಅಧಿಕ ಮತ ನೀಡಿ ಗೆಲುವಿಗೆ ಸಹಕರಿಸಿದ್ದಾರೆ, 19 ವರುಷ ಸೋಲಿನ ಸುಳಿವಿಗೆ ಸಿಲುಕಿದ್ದ ನನ್ನನ್ನು ಹೆಚ್ಚಿನ ರೀತಿ ಬೆಂಬಲಿಸಿದ್ದಾರೆ, ಉಪ್ಪಾರ ಸಮಾಜದ ಮುಖಂಡರು ಬಾಲ್ಯವಿವಾಹಕ್ಕೆ ಇತಿಶ್ರೀ ಹಾಡಬೇಕು, ಹೆಣ್ಣು ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸುವಂತಾಗಬೇಕು ಎಂದರು.ಈ ವೇಳೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಯಡಮೋಳೆಯ ಮುಖ್ಯ ಶಿಕ್ಷಕ ಗೋವಿಂದರಾಜು ಮಾತನಾಡಿ, ಭಗೀರಥ ಜಯಂತಿ ಆಚರಣೆಗೆ ಅರ್ಥ ಬರಬೇಕಾದರೆ ಸಮಾಜದ ಬಂಧುಗಳು ಮಕ್ಕಳನ್ನು ಸುಶೀಕ್ಷಿತರನ್ನಾಗಿಸುವ ಹೊಣೆ ಹೊರಬೇಕು, ಈ ಸಮಾಜಕ್ಕೆ ವಿದ್ಯೆಯೇ ಆಸ್ತಿಯಾಗಬೇಕು ಎಂದರು. ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ರಾಜೇಂದ್ರ ಕುಂತೂರು ಮೋಳೆ, ಯಳಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಭು ಪ್ರಸಾದ್, ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಶಿವಕುಮಾರ್, ತಾಲೂಕು ಭಗೀರಥ ಉಪ್ಪಾರ ಸಂಘ ಅಧ್ಯಕ್ಷ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರಸಭೆ ಅಧ್ಯಕ್ಷೆ ರೇಖಾ, ಸದಸ್ಯರು ಧರಣೇಶ್, ರಾಘವೇಂದ್ರ, ಮಂಜುನಾಥ್, ಉಪವಿಭಾಗಾಧಿಕಾರಿ ಮಹೇಶ್.ಬಿ.ಆರ್, ತಹಸೀಲ್ದಾರ್ ಬಸವರಾಜು.ಐ.ಈ ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ನಗರಸಭೆ ಪ್ರಭಾರಿ ಪೌರಯುಕ್ತ ಪರಮಶಿವಯ್ಯ, ಚೆಸ್ಕಾಂ ಎಇಇ ರಾಜು ಇನ್ನಿತರರಿದ್ದರು.