ಪ್ರಜ್ವಲ್ ಪ್ರಕರಣದ ತೀರ್ಪಿನ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ : ಡಾ.ಸಿ.ಎನ್.ಮಂಜುನಾಥ್

| N/A | Published : Aug 03 2025, 01:30 AM IST / Updated: Aug 03 2025, 10:16 AM IST

ಪ್ರಜ್ವಲ್ ಪ್ರಕರಣದ ತೀರ್ಪಿನ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ : ಡಾ.ಸಿ.ಎನ್.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಅಧಿಕಾರಕ್ಕೆ ಬರುವಾಗ ಮತ ಯಂತ್ರಗಳು ಮಾತ್ರ ಸರಿಯಾಗಿರುತ್ತವೆ. ಆದರೆ, ಪಕ್ಷ ಸೋತಾಗ ಮತ ಯಂತ್ರಗಳು ಸರಿ ಇಲ್ಲ ಎಂಬ ವಾದ ಸರಿಯಲ್ಲ. ರಾಜ್ಯದ ಕಳೆದ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆಗ ಕಳವು ಆಗಿರಲಿಲ್ಲವೇ..?

 ಮದ್ದೂರು :  ಯಾವುದೇ ಪ್ರಕರಣದಲ್ಲೂ ನ್ಯಾಯಾಲಯದ ತೀರ್ಪು ಅಂತಿಮ. ಎಲ್ಲರೂ ಅದನ್ನು ಕಡ್ಡಾಯವಾಗಿ ಪಾಲಿಸಿ ಗೌರವಿಸಬೇಕು. ಪ್ರಜ್ವಲ್ ಪ್ರಕರಣದ ತೀರ್ಪಿನ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಎಂದು ಪ್ರತಿಕ್ರಿಯಿಸಿದರು.

ತಾಲೂಕಿನ ಸೋಮನಹಳ್ಳಿ ವಿದ್ಯಾಸಂಸ್ಥೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ತೀರ್ಪು ಕೊಟ್ಟ ಮೇಲೆ ಅದರ ಬಗ್ಗೆ ಮಾತನಾಡಲು ಏನೂ ಇಲ್ಲ. ಶಿಕ್ಷೆ ವಿಧಿಸಿದ ಮೇಲೆ ಮುಗಿಯುತು. ಮುಂದೆ ಏನಾಗುತ್ತೋ ಎನ್ನುವುದನ್ನು ಕಾದು ನೋಡೋಣ ಎಂದರು.

ಮತಗಳ್ಳತನ ಕೈ ನಾಯಕರಿಗೆ ತಿರುಗೇಟು:

ಮತಗಳ್ಳತನ ಮೂಲಕ ಯಾರು ಅಧಿಕಾರಕ್ಕೆ ಬಂದಿರುತ್ತಾರೋ ಅವರೇ ಇಂತಹ ಗಂಭೀರ ಆರೋಪ ಮಾಡಲು ಸಾಧ್ಯ.

ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಗಳ್ಳತನ ನಡೆದಿದೆ ಎಂಬ ಕಾಂಗ್ರೆಸ್ ನಾಯಕರು ಆರೋಪಕ್ಕೆ ತಿರುಗೇಟು ನೀಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವಾಗ ಮತ ಯಂತ್ರಗಳು ಮಾತ್ರ ಸರಿಯಾಗಿರುತ್ತವೆ. ಆದರೆ, ಪಕ್ಷ ಸೋತಾಗ ಮತ ಯಂತ್ರಗಳು ಸರಿ ಇಲ್ಲ ಎಂಬ ವಾದ ಸರಿಯಲ್ಲ. ರಾಜ್ಯದ ಕಳೆದ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆಗ ಕಳವು ಆಗಿರಲಿಲ್ಲವೇ ಎಂದು ಪ್ರಶ್ನೆ ಮಾಡಿದರು.

ವಿಧಾನಸಭಾ ಚುನಾವಣೆ ವೇಳೆ ಇದ್ದಂತ ಮತದಾನ ಪಟ್ಟಿಯಂತೆ ಲೋಕಸಭಾ ಚುನಾವಣೆ ನಡೆದಿದೆ. ಚುನಾವಣಾ ಅಧಿಸೂಚನೆ ಹೊರಡಿಸಿದ ನಂತರ ನಾನು ಅಭ್ಯರ್ಥಿಯಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದೆ. ನಾನು 2.70 ಲಕ್ಷ ಅಂತರದಿಂದ ಗೆದ್ದೆ. ನಮ್ಮ ಪರ ಒಲವಿದ್ದ ಕಾರಣ ಇಷ್ಟು ಅಂತರದ ಗೆಲುವಿಗೆ ಕಾರಣವಾಯಿತು. ಇಷ್ಟು ಮತಗಳನ್ನು ಕಳವು ಮಾಡಲು ಸಾಧ್ಯವೇ ಕೈ ನಾಯಕರಿಗೆ ತಿರುಗೇಟು ನೀಡಿದರು.

8.5 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆ:

ರಸಗೊಬ್ಬರ ಸಮಸ್ಯೆ ಕುರಿತು ರಾಜ್ಯದ ಎಲ್ಲಾ ಸಂಸದರು ಹೋಗಿ ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾರನ್ನು ಭೇಟಿ ಮನವರಿಕೆ ಮಾಡಿದ್ದೇವೆ. ರಾಜ್ಯಕ್ಕೆ ಕೇಂದ್ರದಿಂದ ಇದುವರೆಗೂ ಯೂರಿಯಾ, ಡಿಎಪಿ 8.5 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ರೈತರಿಗೆ ಪೂರೈಕೆ ಮಾಡಲಾಗಿದೆ ಎಂದರು.

ಈ ಬಾರಿ ಮುಂಗಾರು ಬೇಗ ಬಂದು ಉತ್ತಮ ಮಳೆಯಾಗಿದೆ. ಕೃಷಿ ಚಟುವಟಿಕೆಯೂ ವೇಗ ಪಡೆದುಕೊಂಡಿದೆ. ನಮ್ಮ ರಾಜ್ಯದ ರಸಗೊಬ್ಬರ ಬೇಡಿಕೆ 7 ಲಕ್ಷ ಮೆಟ್ರಿಕ್ ಟನ್ ಇತ್ತು. ಈಗಾಗಲೇ 8.5 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಇನ್ನು ರಾಜ್ಯಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಬೇಕಿದೆ. ಪ್ರತಿ ದಿನ 16 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ ಎಂದರು.

ಪ್ರತಿ ವರ್ಷ ರಸಗೊಬ್ಬರ ಕೊರತೆ ಸಮಸ್ಯೆ ಎದುರಾಗುತ್ತಿದೆ. ಇದನ್ನು ತಪ್ಪಿಸಲು ಮೊದಲು ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡುವುದನ್ನು ತಪ್ಪಿಸಿ ರೈತರಿಗೆ ಸಮರ್ಪಕವಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕು. ಇದನ್ನು ಬಿಟ್ಟು ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಡಾ.ಸಿ.ಎನ್.ಮಂಜುನಾಥ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

Read more Articles on