ಮುಂದಿನ ದಿನಗಳಲ್ಲಿ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತೇನೆ: ಟಿ.ಎಂ.ಹರೀಶ್

| Published : Jul 28 2025, 12:30 AM IST

ಮುಂದಿನ ದಿನಗಳಲ್ಲಿ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತೇನೆ: ಟಿ.ಎಂ.ಹರೀಶ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಮುಂದಿನ ದಿನಗಳಲ್ಲಿ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸುವುದಾಗಿ ಪಟ್ಟಣದ ಲಯನ್ಸ್ ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಎಂ. ಹರೀಶ್ ಹೇಳಿದ್ದಾರೆ.

ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಮುಂದಿನ ದಿನಗಳಲ್ಲಿ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸುವುದಾಗಿ ಪಟ್ಟಣದ ಲಯನ್ಸ್ ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಎಂ. ಹರೀಶ್ ಹೇಳಿದ್ದಾರೆ.

ಲಯನ್ಸ್ ಇಂಟರ್ ನ್ಯಾಶನಲ್ ಲಯನ್ಸ್ ಮತ್ತು ಲಿಯೋ ಕ್ಲಬ್ ತರೀಕೆರೆಯಿಂದ ಶನಿವಾರ ಪಟ್ಟಣದ ಬಿ. ಎಂ, ಶ್ರೀಕಂಠಯ್ಯ ರಸ್ತೆ ಹೊಸಬಾವಿ ಆವರಣ ಕಾಳಿದಾಸ ನಗರದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. 2025-26 ನೇ ಸಾಲಿನ ತಮ್ಮ ಪ್ರಥಮ ಈ ರೀತಿಯ ಸಮಾರಂಭ ನಡೆಸಿ ಕೊಟ್ಟಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮಕ್ಕೆ ಇಷ್ಟೊಂದು ಮಾನಸಿಕ, ಆರ್ಥಿಕ ಮತ್ತು ನನ್ನ ಜೊತೆ ಕೈಜೋಡಿಸಿ ಈ ಕಾರ್ಯಕ್ರಮ ಯಶಸ್ವಿ ಗೊಳಿಸಲು ಸಹಾಯಹಸ್ತ ನೀಡಿದ ಎಲ್ಲ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್ ಮಾತನಾಡಿ ಮುಂದಿನ ದಿನಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುವುದು. ಹೀಗೆಯೇ ಎಲ್ಲರೂ ಸಹಕರಿಸಬೇಕಂದು ತಿಳಿಸಿದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಟ್ಟಣದ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭ ನಡೆಸಲಾಯಿತು. ಕ್ಯಾಪ್ಟನ್ ಟಿ. ಪಾಲಾಕ್ಷನ್,ಸಿ ಎಲ್ ಸಿದ್ದಪ್ಪ, ಸುಬೇದಾರ್ ದೇವೆಂದ್ರ ಡಿ, ಜಗನ್ನಾಥ್, ವೀರರಾಜು ಜಿ ಎನ್, ಮಿಲ್ಟ್ರಿ ಶ್ರೀನಿವಾಸ್ ಇವರುಗಳು ತಮ್ಮ ಸೇನೆಯಲ್ಲಿ ಸಲ್ಲಿಸಿದ ಕೆಲವೂಂದು ಘಟನೆಗಳನ್ನು ವಿವರಿಸಿದರು.

ಖಜಾಂಚಿ ನವೀನ್ ಕಾರ್ಗಿಲ್ ವಿಜಯ್ ದಿವಸ್ ಬಗ್ಗೆ ವಿವರಣೆ ನೀಡಿದಾಗ ನೆರೆದಿದ್ದ ಎಲ್ಲರೂ ಬೊಲೋ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದರು.

ಪುರಸಭೆ ಸದಸ್ಯರು ವಸಂತ ರಮೇಶ್ ಟಿ.ಎಸ್. ಮಾತನಾಡಿ ಲಯನ್ ಸಂಸ್ಥೆ ಈ ದಿನದಂದು ನೇತ್ರ ತಪಾಸಣಾ ಶಿಬಿರದಲ್ಲಿ ಉಚಿತವಾಗಿ ಕನ್ನಡಕ ನೀಡಿದ್ದಕ್ಕಾಗಿ ಶ್ಲಾಘಿಸಿದರು.ಟಿ.ಎಂ ಆನಂದ್ ಮಾಜಿ ಸೇನಾನಿಗಳ ಕಿರು ಪರಿಚಯ ಮಾಡಿಕೊಡುವ ಮೂಲಕ ನೆರೆದಿದ್ದ ಸಾರ್ವಜನಿಕರಲ್ಲಿ ಭಾರತೀಯ ಸೇನೆಯ ಬಗ್ಗೆ ಅರಿವು ಮೂಡಿಸಿದರು. ಪುರಸಭೆ ಸದಸ್ಯರು ಗೀತಾ ಗಿರಿರಾಜ್ ಟಿ.ವಿ. ಕಾರ್ಯದರ್ಶಿ ಏಜಾಜ್ ಪಾಶ, ಮೊಹಮ್ಮದ್ ಯೂಸುಫ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರು ಎ.ಎಸ್.ಸಾಯಿಕುಮಾರ್, ಲಯನ್ಸ್ ಕ್ಲಬ್ ಪದಾದಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.105 ಜನರು ತಮ್ಮ ಕಣ್ಣು ಪರೀಕ್ಷೆ ಮಾಡಿಸಿಕೊಂಡರು ಇದರಲ್ಲಿ ಸುಮಾರು 60 ಉಚಿತ ಕನ್ನಡಕಗಳನ್ನು ನೀಡಲಾಯಿತು..--------------ಫೋಟೋ ಇದೆಃ27ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಲಯನ್ಸ್ ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಉಚಿತ ನೇತ್ರಶಸ್ತ್ರ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರು ಟಿ.ಎಂ.ಹರೀಶ್, ಉಪಾಧ್ಯಕ್ಷರು ಪ್ರದೀಪ್ ಕುಮಾರ್, ಪದಾದಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.