ತರೀಕೆರೆಸಮುದಾಯದ ಹಿರಿಯರ ಮಾರ್ಗದರ್ಶನ, ಯುವಕರ ಪ್ರೋತ್ಸಾಹ, ಸಮಿತಿ ಪದಾಧಿಕಾರಿಗಳ ಹಾಗೂ ಸದಸ್ಯರ ಸಹಕಾರದಿಂದ ಇನ್ನೂ ಹೆಚ್ಚು ಹೆಚ್ಚು ಸಮುದಾಯದ ಕಾರ್ಯಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತೇನೆ ಎಂದು ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷರು ಆರ್.ಎನ್.ಶ್ರೀಧರ್ ಹೇಳಿದ್ದಾರೆ.

ಬ್ರಾಹ್ಮಣ ಸೇವಾ ಸಮಿತಿಯಿಂದ ಪತ್ರಕರ್ತ ಅನಂತ ನಾಡಿಗ್ ಗೆ ಸನ್ಮಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಮುದಾಯದ ಹಿರಿಯರ ಮಾರ್ಗದರ್ಶನ, ಯುವಕರ ಪ್ರೋತ್ಸಾಹ, ಸಮಿತಿ ಪದಾಧಿಕಾರಿಗಳ ಹಾಗೂ ಸದಸ್ಯರ ಸಹಕಾರದಿಂದ ಇನ್ನೂ ಹೆಚ್ಚು ಹೆಚ್ಚು ಸಮುದಾಯದ ಕಾರ್ಯಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತೇನೆ ಎಂದು ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷರು ಆರ್.ಎನ್.ಶ್ರೀಧರ್ ಹೇಳಿದ್ದಾರೆ.

ಬ್ರಾಹ್ಮಣ ಸೇವಾ ಸಮಿತಿಯಿಂದ ಪಟ್ಟಣದ ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇಗುಲದಲ್ಲಿ ಕರ್ನಾಟಕ ಮಾದ್ಯಮ ಅಕಾಡಮಿ ಪ್ರಶಸ್ತಿಗೆ ಭಾಜನರಾಗಿರುವ ಪತ್ರಕರ್ತ ಅನಂತ ನಾಡಿಗ್ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತ ಅನಂತ ನಾಡಿಗ್ ಅವರು ನನಗೆ ಹಿರಿಯ ಸಹೋದರರ ಸಮಾನರು. ಅವರು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವುದು ನಮಗೆಲ್ಲರಿಗೂ ಸಂತೋಷವಾಗಿದೆ. ಅವರ ಸೇವೆಗೆ ಇನ್ನೂ ಹೆಚ್ಚು ಪ್ರಶಸ್ತಿಗಳು ದೊರಕುವಂತಾಗಲಿ ಎಂದು ಶುಭ ಕೋರಿದರು.

ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎನ್.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪತ್ರಕರ್ತ ಅನಂತ ನಾಡಿಗ್ ಅವರ ಕಾರ್ಯತತ್ಪರತೆ ಹಾಗೂ ಆಸಕ್ತಿ ಮೆಚ್ಚುವಂತಹದ್ದು ಕಳೆದ 40 ವರ್ಷಗಳಿಂದ ಸುದೀರ್ಘ ಪತ್ರಿಕಾ ಕ್ಷೇತ್ರದಲ್ಲಿ ಅವಿರತವಾಗಿ ವಸ್ತುನಿಷ್ಠವಾಗಿ ಸುದ್ದಿಗಳನ್ನು ಬರೆದು ಮಾದರಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಭಾಷಾ ಪ್ರಯೋಗ ಮಾಡುವ ಅವರು ಅತ್ಯಂತ ಸರಳ ಹಾಗೂ ಆಕರ್ಷಣೀಯವಾಗಿ ಸುಲಭ ಗ್ರಾಹ್ಯ ರೂಪದಲ್ಲಿ ಬರೆವ ಸುದ್ದಿ, ವಿಮರ್ಶೆ ವಿಶೇಷತೆಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿ ಶುಭಕೋರಿದರು.

ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ನಾಡಿಗ್ ಅವರ ವಿಶೇಷ ಗುಣ ಅವರ ಸರಳತೆ, ಸಭ್ಯತೆ ಹಾಗೂ ಕರ್ತವ್ಯನಿಷ್ಠೆ ಹಾಗಾಗಿಯೇ ಇಂತಹ ಮಹತ್ವದ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಪ್ರಾಮಾಣಿಕತೆಯೇ ಪ್ರಾಜ್ಞರ ಶ್ರೇಷ್ಠ ಗುಣ ಎಂಬಂತೆ ನಡೆ ನುಡಿಯಲ್ಲಿ ಒಂದಾಗಿದ್ದಾರೆ. ಈ ಶ್ರೇಷ್ಠ ವ್ಯಕ್ತಿಯನ್ನು ಪ್ರಶಸ್ತಿಯೇ ಹುಡುಕಿಕೊಂಡು ಬಂದಿದೆ ಎಂದು ಶ್ಲಾಘಿಸಿದರು.

ಹಿರಿಯ ತೆರಿಗೆ ಸಲಹೆದಾರ ಆರ್.ಎನ್.ಶ್ರೀನಿವಾಸ್ ಮಾತನಾಡಿ ಮೊದಲಿನಿಂದಲೂ ಅನಂತ ನಾಡಿಗ್‌ ಅವರ ಸಾಮಾಜಿಕ ಚಟುವಟಿಕೆಗಳಲ್ಲಿ ಬಾಗಿಯಾಗಿ ಜನರ ಒಳಿತು ಬಯಸುವ ವ್ಯಕ್ತಿತ್ವ ಎಲ್ಲರಿಗೂ ಅನುಕರಣೀಯ ಎಂದರು.

ನಿವೃತ್ತ ಉಪನ್ಯಾಸಕ ಡಾ.ಬಿ.ಎಚ್.ಕುಮಾರಸ್ವಾಮಿ ಮಾತನಾಡಿ ನಾಡಿಗ್ ಅವರು ಪತ್ರಕರ್ತರಾಗಿ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ನೇರ ಬರಹಗಳಿಂದ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆ ಎನಿಸಿದೆ ಎಂದು ಹೇಳಿದರು.

ಪತ್ರಕರ್ತ ಅನಂತ ನಾಡಿಗ್ ಮತ್ತು ನಾನು ಬಾಲ್ಯದಿಂದಲೂ ಹತ್ತಿರದ ಒಡನಾಡಿಗಳು. ಒಂದೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿದವರು ಇವರಿಗೆ ಮಾದ್ಯಮ ಪ್ರಶಸ್ತಿ ದೊರಕಿದ್ದು ಸಮಾಜಕ್ಕೆ ದೊರಕಿರುವ ದೊಡ್ಡ ಉಡುಗೊರೆ. ಅವರಿಗೆ ಭಗವಂತ ಇನ್ನೂ ಹೆಚ್ಚಿನ ಪ್ರಶಸ್ತಿಗಳನ್ನು ಕರುಣಿಸಲಿ ಎಂದು ಬ್ರಾಹ್ಮಣ ಸೇವಾ ಸಮಿತಿ ಉಪಾಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ ಹಾರೈಸಿದರು.

ಬ್ರಾಹ್ಮಣ ಸೇವಾ ಸಮಿತಿ, ಸ್ಕಂದ ಮಾತಾ ವಿಪ್ರ ಮಹಿಳಾ ಸಂಘ ಅಧ್ಯಕ್ಷೆ ಬಾಮಾ ಸುಬ್ರಹ್ಮಣ್ಯ, ತರೀಕೆರೆ ಶ್ರೀ ಶೃಂಗೇರಿ ಶಾರದಾ ಪೀಠ ಶಾಖಾ ಮಠದ ವತಿಯಿಂದ ಧರ್ಮದರ್ಶಿ ಆರ್.ಕೃಷ್ಣಮೂರ್ತಿ ಪತ್ರಕರ್ತ ಅನಂತ ನಾಡಿಗ್ ಅವರನ್ನು ಸನ್ಮಾನಿಸಿದರು.

ಬ್ರಾಹ್ಮಣ ಸೇವಾ ಸಮಿತಿ ಕಾರ್ಯದರ್ಶಿ ಡಿ.ಸಿ.ಶ್ರೀನಿವಾಸ ಮೂರ್ತಿ, ಸಮಿತಿ ನಿರ್ದೇಶಕ ಟಿ.ಎಸ್..ರವಿಕುಮಾರಸ್ವಾಮಿ, ಎನ್.ಕೆ.ಸುಬ್ರಹ್ಮಣ್ಯ , ಸಮಿತಿ ಖಚಾಂಚಿ ಡಿ.ಜಿ.ಸಚಿನ್, ಶಾರದ ಎನ್.ಮಂಜುನಾಥ್, ಸಮಿತಿ ನಿರ್ದೇಶಕರು ಭಾಗವಹಿಸಿದ್ದರು.

-

27ಕೆಟಿಆರ್.ಕೆ.6ಃ

ತರೀಕೆರೆಯಲ್ಲಿ ಬ್ರಾಹ್ಣಣ ಸೇವಾ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ಅನಂತ ನಾಡಿಗ್ ಅವರನ್ನು ಸನ್ಮಾನಿಸಲಾಯಿತು. ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್, ಉಪಾಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಡಿ.ಸಿ.ಶ್ರೀನಿವಾಸಮೂರ್ತಿ,.ಮಾಜಿ ಪುರಸಭಾಧ್ಯಕ್ಷ ಎನ್.ಮಂಜುನಾಥ್, ಹಿರಿಯ ತೆರಿಗೆ ಸಲಹೆದಾರರಾದ ಆರ್.ಎನ್. ಶ್ರೀನಿವಾಸ್ ಮತ್ತಿತರರು ಇದ್ದರು.