ನನ್ನ ತಂಟೆಗೆ ಬಂದ್ರೆ ಬಟ್ಟೆ ಬಿಚ್ಚಿ ಬೆತ್ತಲು ಮಾಡ್ತೇನೆ: ಶಾಸಕ ರಾಜು ಕಾಗೆ

| Published : Sep 03 2024, 01:30 AM IST

ನನ್ನ ತಂಟೆಗೆ ಬಂದ್ರೆ ಬಟ್ಟೆ ಬಿಚ್ಚಿ ಬೆತ್ತಲು ಮಾಡ್ತೇನೆ: ಶಾಸಕ ರಾಜು ಕಾಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಗವಾಡದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಸೋಮವಾರ ಶಾಸಕ ರಾಜು ಕಾಗೆ ಅವರು ಮಾಜಿ ಸಚಿವ ಶ್ರೀಮಂತ ಪಾಟೀಲರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದು, ನನ್ನ ತಂಟೆಗೆ ಬಂದರೆ ನಿನ್ನ ಬಟ್ಟೆ ಬಿಚ್ಚಿ ಬೆತ್ತಲೆ ಮಾಡುವೆ ಎಂದು ಗುಡುಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಕಾಗವಾಡದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಸೋಮವಾರ ಶಾಸಕ ರಾಜು ಕಾಗೆ ಅವರು ಮಾಜಿ ಸಚಿವ ಶ್ರೀಮಂತ ಪಾಟೀಲರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದು, ನನ್ನ ತಂಟೆಗೆ ಬಂದರೆ ನಿನ್ನ ಬಟ್ಟೆ ಬಿಚ್ಚಿ ಬೆತ್ತಲೆ ಮಾಡುವೆ ಎಂದು ಗುಡುಗಿದ್ದಾರೆ.

ಭಾನುವಾರ ಶಿರಗುಪ್ಪಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು, ಕಾಗವಾಡ ಮತಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಪೊಲೀಸ್ ಠಾಣೆ ಏಜೆಂಟರ ಅಡ್ಡೆಗಳಾಗಿ ಪರಿಣಮಿಸಿವೆ. ಕ್ಷೇತ್ರದಲ್ಲೀಗ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಮಗಾರಿಗಳೆಲ್ಲಾ ಕಳಪೆಯಾಗಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದರು.

ಸೋಮವಾರ ಐನಾಪುರ ಪಟ್ಟಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ನಿರ್ದೆಶನಾಲಯ ಸಂಯುಕ್ತ ಆಶ್ರಯದಲ್ಲಿ ಅಮೃತ 2.0 ಯೋಜನೆಯಡಿ ಮೊದಲ ಹಂತದಲ್ಲಿ ₹44ಕೋಟಿ ವೆಚ್ಚದಲ್ಲಿ ಐನಾಪುರ ಪಟ್ಟಣದಲ್ಲಿ ಪಟ್ಟಣಗಳಿಗೆ ನೀರು ಸರಬರಾಜು ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಕಾಗೆ ಮಾತನಾಡಿದರು.ಮಾಜಿ ಸಚಿವ ಶ್ರೀಮಂತ ಪಾಟೀಲ ಆರೋಪಕ್ಕೆ ತಿರುಗೇಟು ನೀಡಿದ ಶಾಸಕ ಕಾಗೆ, ನನ್ನ ಬಗ್ಗೆ ಮಾತನಾಡಲು ನಿನಗೆ ಯೋಗ್ಯತೆ ಇಲ್ಲ. ಜನರು ನಿನ್ನನ್ನು ತಿರಸ್ಕರಿಸಿದ್ದಾರೆ. ಬಸವೇಶ್ವರ ಏತ ನೀರಾವರಿಯಲ್ಲಿ ಹಲವು ಕಳಪೆ ಕಾಮಗಾರಿಗಳಿಗೆ ಹಾಗೂ ತಾಂತ್ರಿಕ ದೋಷಗಳಿಗೆ ನೀನೇ ಕಾರಣ. ರಾಜಕೀಯ ಪಾರದರ್ಶಕವಾಗಿರಲಿ. ನನಗೆ ಜನರು ಆಶೀರ್ವದಿಸಿದ್ದಾರೆ. ನೀನು ನನ್ನ ಬಗ್ಗೆ ಮಾತನಾಡಬೇಡ. ಅಪ್ಪಿ ತಪ್ಪಿ ಮಾತನಾಡಿದರೆ ನಾನು ನಿನ್ನ ಬಟ್ಟೆ ಬಿಚ್ಚುವೆ ಎಂದು ಏಕವಚನದಲ್ಲಿಯೇ ತಿರುಗೇಟು ನೀಡಿದರು.

ಈ ವೇಳೆ ಪಪಂ ಅಧ್ಯಕ್ಷೆ ಸರೋಜನಿ ಗಾಣಿಗೇರ, ಉಪಾಧ್ಯಕ್ಷೆ ರತ್ನವ್ವಾ ಮಾದರ, ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಬಿರಡಿ, ಸಂಜಯ ಕುಚನೂರೆ, ಕುಮಾರ ಜಯಕರ, ಮುಖಂಡರಾದ ಸುಭಾಷಗೌಡ ಪಾಟೀಲ, ಚಮನರಾವ ಪಾಟೀಲ, ಗೋಪಾಲರಾವ ಕಟ್ಟಿ, ಸುರೇಶ ಗಾಣಿಗೇರ, ಡಾ.ಅರವಿಂದರಾವ್ ಕಾರ್ಚಿ, ಅನುಪ ಶೆಟ್ಟಿ, ಯಶವಂತ ಪಾಟೀಲ, ಪ್ರಕಾಶ ಚಿನಗಿ, ಮಹೇಶ ಸೊಲ್ಲಾಪುರೆ, ಪ್ರಕಾಶ ಕೋರ್ಬು,ಪಾಯಪ್ಪ ಕುಡವಕ್ಕಗಿ, ಸತೀಶ ಗಾಣಿಗೇರ, ಅಧಿಕಾರಿಗಳಾದ ಪಪಂ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ವಿಠ್ಠಲ ನಾಗನಕೇರಿ, ಉಮೇಶ ಆರ್.ಕೆ, ಅಜೀತಕುಮಾರ ಚೌಗುಲಾ, ಹೈದರಾಬಾದ್‌ ಸಿವೆಟ್ ಪ್ರೊಜೆಕ್ಟ್‌ ಮ್ಯಾನೇಜರ್‌ ಸೇರಿದಂತೆ ಅನೇಕರು ಇದ್ದರು.ಜನಪ್ರಿಯ ಶಾಸಕ, ಬಡ ಜನರ ಕಣ್ಮಣಿ ಎಂದು ಹೇಳಿಕೊಳ್ಳುವ ನೀವು ಪೊಲೀಸ್ ಠಾಣೆಗಳಲ್ಲಿ ಸುಳ್ಳು ದೂರು ಕೊಟ್ಟು ಬಡವರ ರಕ್ತ ಹೀರಿದ್ದೀರಿ. ಬಡವರನ್ನು ಶೋಷಣೆ ಮಾಡಿದ್ದೀರಿ. ಒಂದು ವೇಳೆ ನಾನು ಯಾರ ವಿರುದ್ಧವಾದರೂ ಒಂದು ಸುಳ್ಳು ದೂರು ಕೊಟ್ಟಿದ್ದನ್ನು ಸಾಬೀತು ಮಾಡಿದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವೆ. ನೀವು ಸತ್ಯಹರಿಶ್ಚಂದ್ರರಾಗಿದ್ದರೆ, ಅಭಿವೃದ್ಧಿ ಮಾಡಿದ್ದರೆ ಜನ ನಿಮ್ಮನ್ಯಾಕೆ ತಿರಸ್ಕರಿಸಿ ನನಗೆ ಆಶೀರ್ವದಿಸಿದರು. ನನ್ನ ಬಗ್ಗೆ ಮಾಡನಾಡುವಾಗ ಎಚ್ಚರವಿರಲಿ.

- ರಾಜು ಕಾಗೆ ಶಾಸಕ ಕಾಗವಾಡ