ಕುರುಹಿನಶೆಟ್ಟಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ

| Published : Dec 30 2024, 01:00 AM IST

ಸಾರಾಂಶ

ಸಮಾಜ ಅಭಿವೃದ್ಧಿಗೆ ಸಂಘಟನೆ ಅತೀ ಮುಖ್ಯವಾಗಿದ್ದು, ಈ ದಿಶೆಯಲ್ಲಿ ತಾಲೂಕು ನೇಕಾರ ಕುರುಹಿನಶೆಟ್ಟಿ ಸಂಘ ರಚನಾಯಾಗಿದ್ದು ಉತ್ತಮ ಬೆಳವಣಿಗೆಯಾಗಿದೆ

ರೋಣ: ನೇಕಾರ ಕುರುಹಿನಶೆಟ್ಟಿ ಸಮಾಜದ ಆಶೀರ್ವಾದ ನನ್ನ ಮೇಲೆ ಸಾಕಷ್ಟಿದ್ದು, ಯಾವುದೇ ಸಂದರ್ಭದಲ್ಲಿ ಸಮಾಜದ ಅಭಿವೃದ್ಧಿ ಹಾಗೂ ಹಿತ ಕಾಪಾಡಲು ಸದಾ ಪ್ರಾಮಾಣಿಕವಾಗಿರುತ್ತೇನೆಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಅವರು ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಟಪದಲ್ಲಿ ರೋಣ ತಾಲೂಕು ನೇಕಾರ ಕುರುಹಿನಶೆಟ್ಟಿ ಸಂಘ ಉದ್ಘಾಟನಾ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಸಮಾಜ ಅಭಿವೃದ್ಧಿಗೆ ಸಂಘಟನೆ ಅತೀ ಮುಖ್ಯವಾಗಿದ್ದು, ಈ ದಿಶೆಯಲ್ಲಿ ತಾಲೂಕು ನೇಕಾರ ಕುರುಹಿನಶೆಟ್ಟಿ ಸಂಘ ರಚನಾಯಾಗಿದ್ದು ಉತ್ತಮ ಬೆಳವಣಿಗೆಯಾಗಿದೆ. ಕುರುಹಿನಶೆಟ್ಟಿ ಸಮಾಜ ಬಾಂಧವರ ಆರ್ಥಿಕ, ಸಾಮಾಜಿಕ,ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಲು ಶ್ರಮಿಸುತ್ತೆನೆ ಹಾಗೂ ರೋಣ ತಾಲೂಕು ನೇಕಾರ ಕುರುಹಿನಶೆಟ್ಟಿ ಸಂಘಕ್ಕೆಪಟ್ಟಣದಲ್ಲಿ 10ಗುಂಟೆ ಜಾಗೆ ಹಾಗೂ ಶಾಸಕರ ಅನುದಾನದಡಿಯಲ್ಲಿ ಈ ಸಂಘದ ಅಭಿವೃದ್ಧಿಗೆ ಅನುದಾನ ನೀಡುತ್ತೇನೆ ಎಂದರು.

ಮಾಜಿ ಶಾಸಕ, ಬೆಂಗಳೂರ ನೇಕಾರ ಸಮುದಾಯಗಳ ಒಕ್ಕೂಟ ಗೌರವಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿ, ಕುರುಹಿನಶೆಟ್ಟಿ ಸಮಾಜದ ಮಕ್ಕಳು ರೋಣ ತಾಲೂಕಿನ ಯಾವುದೇ ಗ್ರಾಮದಲ್ಲಿ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳನ್ನು ದತ್ತು ತೆಗೆದುಕೊಂಡು ಒಳ್ಳೆಯ ಶಿಕ್ಷಣ ಕೊಡಿಸಿದರೆ. ಆ ಮಗು ಐಎಎಸ್, ಐಪಿಎಸ್ ಆಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ನೇಕಾರ ಕುರುಹಿನಶೆಟ್ಟಿ ಸಮಾಜದವರು ಮಕ್ಕಳಿಗೆ ಉತ್ತಮ‌ಶಿಕ್ಷಣ ಕಲ್ಪಿಸುವಲ್ಲಿ ಗಮನ ಹರಿಸಬೇಕು ಎಂದರು.

ಮಾಜಿ ಸಚಿವ ಎಂ.ಮಲ್ಲಕಾರ್ಜುನ ನಾಗಪ್ಪ ಮಾತನಾಡಿ, ಸಮಾಜದ ಏಳ್ಗೆಗಾಗಿ ನಾನು ಸದಾ ಶ್ರಮಿಸಿವೆ ಹಾಗೂ ನಮ್ಮ ಸಮಾಜದ ಯಾವುದೇ ವ್ಯಕ್ತಿ ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಶ್ರಮಿಸಿವೆ ಎಂದರು.

ಇದೇ ಸಂದರ್ಭದಲ್ಲಿ ಕುರುಹಿನಶೆಟ್ಟಿ ಕೇಂದ್ರ ಸಂಘದ ಉಪಾಧ್ಯಕ್ಷ ಮುರಿಗೆಪ್ಪ ಬನ್ನಿ ಅವರು, ರೋಣ ತಾಲೂಕು ಕುರುಹಿನಶೆಟ್ಟಿ ಸಂಘದ ಎಲ್ಲ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿ ಪ್ರಮಾಣ ಪತ್ರ ವಿತರಿಸಿದರು.

ಸಾನ್ನಿಧ್ಯವನ್ನು ಶ್ರೀಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ನಾಲ್ವಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮೀಜಿ, ಶ್ರೀಯತೀಶ್ವರಾನಂದ ಮಹಾಸ್ವಾಮಿ, ಗುಲಗಂಜಿಮಠ ಗುರಿಪಾದ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಾಹಿತಿ ಸುಭಾಸಚಂದ್ರ ಬ. ಸಂಗಳದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಶಾಸಕ ಜಿ.ಎಸ್.ಪಾಟೀಲ, ಪ್ರಭಾವತಿ ಮಸ್ತಮರಡಿ (ಚವಡಿ), ಮುರಗೇಪ್ಪ ಬನ್ನಿ ಜಿ.ಸೋಮಶೇಖರ ,ಗುರುಶಾಂತಪ್ಪ ಹಂ.ದಂಡಿ, ಸಿದ್ದಣ್ಣ ಪ.ಡಂಬಳ, ತಾಲೂಕು ಗೌರವಾಧ್ಯಕ್ಷ ಡಾ. ಎಂ.ಬಿ.ಇಟಗಿ, ಅಧ್ಯಕ್ಷ ಕೂಡ್ಲೆಪ್ಪಗೌಡ ಪ್ಯಾಟಿಗೌಡ್ರ, ಸುಧಾಕರಗೋಟೂರ, ಕಳಕಪ್ಪ ಸೂಡಿ, ಅಶೋಕ ಗಟ್ಟಿ, ಮಂಜುನಾಥ ಹೂವಿನಹಾಳ, ಬಸವರಾಜ ಸೂರೇಬಾನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.