ಈಗಾಗಲೇ ರೈತರು ಭತ್ತದ ಬೆಳೆ ಒಕ್ಕಣೆ ಮಾಡಿದ್ದು, ಹೊಸ ವರ್ಷ ಮತ್ತು ಸಂಕ್ರಾಂತಿ ರೈತರ ಬಾಳಲಿ ಹೊಸ ತನ್ನು ತಂದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿ. ಈ ಬಾರಿ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಲಿ ನಾಲೆಗಳಲ್ಲಿ ನೀರು ಬಂದು ಬೆಳೆಗಳು ಸಮೃದ್ಧಿಯಾಗಲಿ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಛತ್ರದಹೊಸಹಳ್ಳಿ ನನ್ನ ತಂದೆ ದಿ.ಜಿ.ಮಾದೇಗೌಡರಿಗೆ ದತ್ತು ಗ್ರಾಮವಾಗಿತ್ತು. ಅವರು ಇಟ್ಟಿದ್ದ ಪ್ರೀತಿ ಅಪಾರ. ಈ ಗ್ರಾಮದ ಅಭಿವೃದ್ಧಿಗೆ ನಾನು ನಿಷ್ಟೆಯಿಂದ ಶ್ರಮಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಸಮೀಪದ ಛತ್ರದಹೊಸಹಳ್ಳಿಯಲ್ಲಿ 8 ಲಕ್ಷ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ತಂದೆ ಮೇಲೆ ಇಟ್ಟಿದ್ದ ಪ್ರೀತಿ, ವಿಶ್ವಾಸ ನನ್ನ ಮೇಲು ಇರಲಿ. ನಿಮ್ಮಗಳ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ ಎಂದರು.

ಛತ್ರದಹೊಸಹಳ್ಳಿ, ತವರು ಗ್ರಾಮ ಗುರುದೇವರಹಳ್ಳಿಗೂ ಅವಿನಭಾವ ಸಂಬಂಧವಿದೆ. ಪರಿಷತ್ ಸದಸ್ಯನಾದ ನಂತರ ನನ್ನ ವ್ಯಾಪ್ತಿಯ ಕ್ಷೇತ್ರಗಳಿಗೆ ನನ್ನ ಅನುದಾನದಲ್ಲಿ ಸಾಕಷ್ಟು ಹಣ ನೀಡಿ ಅಭಿವೃದ್ಧಿ ಪಡಿಸಿದ್ದೇನೆ. ಇನ್ನು ಉಳಿದ ಮೂರು ವರ್ಷಗಳಲ್ಲಿ ಮತ್ತಷ್ಟು ಹಣ ನೀಡಿ ಗ್ರಾಮಗಳ ಅಭಿವೃದ್ಧಿಗೆ ನನ್ನ ಕೈಲಾದ ನೆರವು ನೀಡುವುದಾಗಿ ಭರವಸೆ ನೀಡಿದರು.

ಈಗಾಗಲೇ ರೈತರು ಭತ್ತದ ಬೆಳೆ ಒಕ್ಕಣೆ ಮಾಡಿದ್ದು, ಹೊಸ ವರ್ಷ ಮತ್ತು ಸಂಕ್ರಾಂತಿ ರೈತರ ಬಾಳಲಿ ಹೊಸ ತನ್ನು ತಂದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿ. ಈ ಬಾರಿ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಲಿ ನಾಲೆಗಳಲ್ಲಿ ನೀರು ಬಂದು ಬೆಳೆಗಳು ಸಮೃದ್ಧಿಯಾಗಲಿ ಎಂದು ಆಶಿಸಿದರು.

ತಾಪಂ ಮಾಜಿ ಸದಸ್ಯ ಭರತೇಶ್ ಮಾತನಾಡಿ, ಮಾಜಿ ಸಂಸದ ದಿ.ಜಿ.ಮದೇಗೌಡರಿಗೆ ಈ ಗ್ರಾಮವು ಸಂಪೂರ್ಣ ಬೆಂಬಲಕ್ಕೆ ನಿಲ್ಲುತಿತ್ತು. ಅದೇ ರೀತಿ ಎಂಎಲ್ಸಿ ಮಧು ಜಿ.ಮಾದೇಗೌಡರೊಂದಿಗೆ ಸದಾ ನಿಲ್ಲುತ್ತೇವೆ. ಹಿಂದುಳಿದ ವರ್ಗದವರು ಹೆಚ್ಚು ಇರುವ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಭರವಸೆ ನೀಡಿದರು.

ಈ ವೇಳೆ ಎಂಎಲ್ಸಿ ಮಧು ಜಿ.ಮಾದೇಗೌಡರಿಗೆ ಗ್ರಾಮಸ್ಥರು ಅಭಿನಂದಿಸಿ ಗೌರವಿಸಿದರು. ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಜಿಲ್ಲಾ ಕಾರ್ಯದರ್ಶಿ ಮಣಿಗೆರೆ ಕೆ.ಕಬ್ಬಾಳಯ್ಯ, ಗ್ರಾಪಂ ಅಧ್ಯಕ್ಷೆ ಕಮಲಮ್ಮ ಬೋರೇಗೌಡ, ಮಾಜಿ ಅಧ್ಯಕ್ಷೆ ರಂಜಿನಿ ಭರತೇಶ್, ಮಾಜಿ ಉಪಾಧ್ಯಕ್ಷೆ ಮಣಿಲಾ ವೆಂಕಟಸ್ವಾಮಿ, ಮಾಜಿ ಸದಸ್ಯರಾದ ಎಚ್.ಎಂ.ಶಿವಕುಮಾರ್, ಸಿ.ಕೆ.ನಾಗರಾಜು, ಯಜಮಾನರಾದ ಚಿಕ್ಕಣ್ಣ, ಮರಿಗೌಡ, ಬಿರೇಶ್, ಪುಟ್ಟಸ್ವಾಮಿ, ಚಿಕ್ಕಮರೀಗೌಡ, ಕೆ.ಬೀರಪ್ಪ, ಮುಖಂಡರಾದ ಕರಿಚಿಕ್ಕ ಹೆಗ್ಡೆ, ಶಿವು, ವೀರಯ್ಯ, ಎಂ.ಲೋಕೇಶ್, ಸಿ.ಪಿ.ನಾಗರಾಜು, ಚೇತನ್ ಎಚ್.ಬಿ.ಸಿದ್ದಯ್ಯ ಸೇರಿದಂತೆ ಮತ್ತಿತರಿದ್ದರು.