ಸಾರಾಂಶ
ಹೊಳಲ್ಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.
ಅಮೃತಾಪುರದಲ್ಲಿ ವಿವಿಧ ಕಾಮಗಾರಿಗೆ ಶಾಸಕ ಚಂದ್ರಪ್ಪ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆಅಧಿಕಾರ ಶಾಶ್ವತವಲ್ಲ. ಸಾರ್ವಜನಿಕರ ಜೀವನವನ್ನು ಸ್ವಂತ ಬದುಕೆಂದು ತಿಳಿದುಕೊಂಡು ಬಡವರ ಕಣ್ಣೀರೊರೆಸುವ ಕೆಲಸ ಮಾಡಬೇಕೆಂಬ ಕಾಳಜಿಯಿಟ್ಟುಕೊಂಡಿರುವ ರಾಜಕಾರಣಿ ನಾನು ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ತಾಲೂಕಿನ ಅಮೃತಾಪುರ ಗ್ರಾಮದಲ್ಲಿ 3.75 ಕೋಟಿ ರು.ವೆಚ್ಚದಲ್ಲಿ ನೂತನ ಬಡಾವಣೆ, ಪ್ರಾಥಮಿಕ ಆರೋಗ್ಯ ಕೇಂದ, ಮತ್ತು ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.60 ಲಕ್ಷ ರು. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಿಸಿದ್ದೇನೆ. 15 ಲಕ್ಷ ರು. ವೆಚ್ಚದಲ್ಲಿ ಅಂಗನವಾಡಿ ಶಾಲೆ ಕಟ್ಟಿಸಲಾಗಿದೆ. ಸೈಟ್‌ಗಳ ನಿರ್ಮಾಣಕ್ಕೆ 2 ಕೋಟಿ ರು.ಖರ್ಚು ಮಾಡಲಾಗಿದ್ದು, 259 ಮನೆಗಳನ್ನು ನಿರ್ಮಿಸಲಾಗವುದು ಎಂದು ಹೇಳಿದರು.
ಕಾಶಿಪುರದಲ್ಲಿ ಎಲ್‌ಕೆಜಿ ಯಿಂದ ಹಿಡಿದು ಪಿಯುಸಿ ವರೆಗೆ ಬಡ ಮಕ್ಕಳ ಶಿಕ್ಷಣಕ್ಕೆ ಶಾಲಾ ಕಾಲೇಜುಗಳನ್ನು ಕಟ್ಟಿಸಲಾಗಿದೆ. ಸೈಟ್ ಇಲ್ಲದವರಿಗೆ ನಿವೇಶನಗಳನ್ನು ನೀಡಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಸ್ವಂತ ಖರ್ಚಿನಿಂದ ಬಸ್‌ಗಳನ್ನು ಬಿಟ್ಟಿದ್ದೇನೆ. ಡ್ರೈವರ್, ಕಂಡಕ್ಟರ್‌ಗಳಿಗೆ ನನ್ನ ಸ್ವಂತ ಹಣದಿಂದ ಸಂಬಳ ನೀಡುತ್ತಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಸರ್ಕಾರಿ ಶಾಲೆಯ ಮಕ್ಕಳಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಿಲ್ಲ. ಸರ್ಕಾರ ಮಕ್ಕಳನ್ನು ಶಿಕ್ಷಣವಂತರನ್ನಾಗಿಸುವ ಕಾರಣಕ್ಕಾಗಿ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸಗ್‌ಳನ್ನು ನೀಡುತ್ತಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ಶಿಕ್ಷಣವಂತರಾಗಿ ಗುರುಹಿರಿಯರು, ಪೋಷಕರುಗಳಿಗೆ ಕೀರ್ತಿ ತರುವಂತಾಗಬೇಕೆಂದು ಹಾರೈಸಿದರು. ಬಿಜೆಪಿ ಮುಖಂಡರಾದ ಬಿಸುಧಾ ಬಸವರಾಜ್, ಸಿದ್ದರಾಮಪ್ಪ, ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯರಾದ ಮಂಜುನಾಥ್, ರಂಗಸ್ವಾಮಿ, ಡಾ.ರೇಖಾ, ಡಾ.ಮನು ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.