ಶಿಶುನಾಳ ಶರೀಫರು ಹಿಂದು-ಮುಸ್ಲಿಂ ಎನ್ನದೇ ಭಾವೈಕ್ಯತೆಯಿಂದ ಬೆಸೆದು ದೇಶಕ್ಕೆ ಮಾದರಿಯಾಗಿದ್ದಾರೆ. ಅವರ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿಗಳಿಗೆ ವಿಶೇಷವಾಗಿ ಪತ್ರ ಬರೆಯುತ್ತೇನೆ. ಕ್ಷೇತ್ರದ ಶಾಸಕ ಪಠಾಣ ಮತ್ತು ಖಾದ್ರಿಯವರು ಮುಖ್ಯಮಂತ್ರಿಗಳ ಭೇಟಿ ಮಾಡಿದರೆ ಶೀಘ್ರದಲ್ಲಿ ಆಗುತ್ತದೆ. ನಾನು ನಿಮ್ಮ ಜೊತೆಗೆ ಇರುವುದಾಗಿ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಸವಣೂರು: ಶಿಶುನಾಳ ಶರೀಫರು ಹಿಂದು-ಮುಸ್ಲಿಂ ಎನ್ನದೇ ಭಾವೈಕ್ಯತೆಯಿಂದ ಬೆಸೆದು ದೇಶಕ್ಕೆ ಮಾದರಿಯಾಗಿದ್ದಾರೆ. ಅವರ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿಗಳಿಗೆ ವಿಶೇಷವಾಗಿ ಪತ್ರ ಬರೆಯುತ್ತೇನೆ. ಕ್ಷೇತ್ರದ ಶಾಸಕ ಪಠಾಣ ಮತ್ತು ಖಾದ್ರಿಯವರು ಮುಖ್ಯಮಂತ್ರಿಗಳ ಭೇಟಿ ಮಾಡಿದರೆ ಶೀಘ್ರದಲ್ಲಿ ಆಗುತ್ತದೆ. ನಾನು ನಿಮ್ಮ ಜೊತೆಗೆ ಇರುವುದಾಗಿ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಪಟ್ಟಣದ ಎಸಿ ಆವರಣದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಸುಮಾರು 5 ಕೋಟಿ ಅನುದಾನದಲ್ಲಿ ಕೈಗೊಳ್ಳುತ್ತಿರುವ ಸವಣೂರು ನವಾಬರ ಅರಮನೆ ಮ್ಯೂಸಿಯಂ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ನಂತರ ಡಾ.ವಿ.ಕೃ. ಗೋಕಾಕ ಭವನದಲ್ಲಿ ಜರುಗಿದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ನವಾಬರು ಆಡಳಿತ ನಡೆಸಿದ ಅರಮನೆಯನ್ನು ಜೀರ್ಣೋದ್ಧಾರ ಕೈಗೊಳ್ಳುವ ಮೂಲಕ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಬಹು ದೊಡ್ಡ ಹೆಜ್ಜೆಯನ್ನು ಇಟ್ಟಿದ್ದೇವೆ. ನವಾಬರ ಆಡಳಿತದಲ್ಲಿ ಸವಣೂರು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು ನಾವು ಅದನ್ನು ಮುಂದೆ ತೆಗೆದುಕೊಂಡು ಅರಮನೆಯನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ ಎಂದರು.ಸವಣೂರು ಪಟ್ಟಣದಲ್ಲಿನ ನವಾಬರ ಕಾಲದ 6 ದ್ವಾರ ಬಾಗಿಲುಗಳ ಜೀರ್ಣೋದ್ಧಾರ ಅವಶ್ಯವಿದೆ. ಇವುಗಳ ಜೀರ್ಣೋದ್ಧಾರ ಕೈಗೊಂಡರೆ ಪ್ರವಾಸಿ ತಾಣವಾಗಲು ಅನುಕೂಲವಾಗಲಿದೆ ಎನ್ನುವ ಸ್ಥಳೀಯ ಶಾಸಕರ ಮತ್ತು ಜನತೆಯ ಬೇಡಿಕೆಗೆ ಸ್ಪಂದಿಸಿ ಸಚಿವರು, ನವಾಬರ ಕಾಲದ 6 ದ್ವಾರ ಬಾಗಿಲುಗಳ ಜೀರ್ಣೋದ್ಧಾರ ಕಾಮಗಾರಿಗೆ 3 ಕೋಟಿ ಅನುದಾನವನ್ನು ನೀಡಿ, ಜೀರ್ಣೋದ್ಧಾರ ಕಾರ್ಯವನ್ನು ಪ್ರಾರಂಭಿಸುವಂತೆ ಸ್ಥಳದಲ್ಲಿದ್ದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಿಗೆ ಮತ್ತು ಕಾಮಗಾರಿಯನ್ನು ಆಗಸ್ಟ 15ರ ಒಳಗಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.ಇತಿಹಾಸದ ಪರಂಪರೆಯನ್ನು ತೋರಲು ನಮ್ಮ ಸರ್ಕಾರದಿಂದ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಶಿಶುನಾಳವನ್ನು ಅಭಿಮಾನದ ತಾಣವಾಗಿ ಮಾಡುವ ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಾಸೀರ ಅಹ್ಮದಖಾನ ಪಠಾಣ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಎಸ್. ಖಾದ್ರಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವೈಯಕ್ತಿಕ ಸಾಧನೆಗೆ ಸ್ಥಳೀಯ ಶಶಿಧರ ಯಲಿಗಾರ, ಸೊಲಬಕ್ಕನವರ, ಅಗಡಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.ಸಮಾರಂಭದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜ ಎ., ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗಪ್ಪ ತಿಪ್ಪಕ್ಕನವರ, ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಪುರಸಭೆ ಮಾಜಿ ಅಧ್ಯಕ್ಷ ಅಲ್ಲಾವುದ್ದೀನ ಮನಿಯಾರ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಜೀಶಾನಅಹ್ಮದಖಾನ ಪಠಾಣ, ಪ್ರಮುಖರಾದ ಮಕ್ಬುಲ್ ಅಹ್ಮದಖಾನ ಪಠಾಣ, ಝಡ್.ಜಿ. ಫರಾಶ, ಲಕ್ಷ್ಮಣ ಕನವಳ್ಳಿ, ಫಜಲಅಹ್ಮದಖಾನ ಪಠಾಣ, ಎಂ.ಜೆ.ಮುಲ್ಲಾ, ರವಿ ಕರಿಗಾರ, ಮೌಲಾಸಾಬ ಹೊಂಬರಡಿ, ಮಹೇಶ ಅಪ್ಪಣ್ಣನವರ, ನವೀನ ಬೆಂಡಿಗೇರಿ, ನವೀನ ಬಂಡಿವಡ್ಡರ, ಅತಾವುಲ್ಲಾಖಾನ ಪಠಾಣ, ನಿಂಗಪ್ಪ ಹಳವಳ್ಳಿ, ಬಸವರಾಜ ಹರಿಜನ, ಆನಂದ ವಡಕಮ್ಮನವರ, ತಹಸೀಲ್ದಾರ್ ರವಿಕುಮಾರ ಕೊರವರ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಇದ್ದರು.