ಛಲವಾದಿ ಸಮಾಜ ಸಂಘಟನೆಗೆ ಶ್ರಮಿಸುವೆ

| Published : Oct 01 2024, 01:34 AM IST

ಸಾರಾಂಶ

ಛಲವಾದಿ ಸಮಾಜವನ್ನು ಜಿಲ್ಲೆಯಲ್ಲಿ ಬಲವಾಗಿ ಸಂಘಟನೆ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ಮನುಷ್ಯನ ಅಭಿವೃದ್ಧಿಗೆ ದಿನದ 24 ಗಂಟೆ ಶ್ರಮಿಸಲಾಗುತ್ತಿದೆ ಎಂದು ನೂತನ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಸಂಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಛಲವಾದಿ ಸಮಾಜವನ್ನು ಜಿಲ್ಲೆಯಲ್ಲಿ ಬಲವಾಗಿ ಸಂಘಟನೆ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ಮನುಷ್ಯನ ಅಭಿವೃದ್ಧಿಗೆ ದಿನದ 24 ಗಂಟೆ ಶ್ರಮಿಸಲಾಗುತ್ತಿದೆ ಎಂದು ನೂತನ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಸಂಗಿ ಹೇಳಿದರು.

ನವನಗರದ ಅಕ್ಷಯ ಹೋಟೆಲ್‌ನಲ್ಲಿ ಜರುಗಿದ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆರಂಭದಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿ ಮಹಾಸಭಾದ ಸಂಘಟನೆಗೆ ಒತ್ತು ನೀಡಲಾಗುತ್ತದೆ. ಅಲ್ಲದೇ ವಿವಿಧ ರಾಜಕೀಯ ಪಕ್ಷಗಳಲ್ಲಿ ಹಾಗೂ ವಿವಿಧ ದಲಿತ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಛಲವಾದಿ ಮುಖಂಡರನ್ನು ಒಂದೇ ವೇದಿಕೆಗೆ ತರುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ಅತಿಥಿಗಳಾಗಿ ಆಗಮಿಸಿದ್ದ ನ್ಯಾಯವಾದಿ ಬಸವರಾಜ ಬದಾಮಿ, ಸಮಾಜದ ಹಿರಿಯರಾದ ಸೋಮಪ್ಪ ನೀಲನಾಯಕ, ನ್ಯಾಯವಾದಿಗಳಾದ ಮಲ್ಲಿಕಾರ್ಜುನ ಚಲವಾದಿ, ಎನ್.ಬಿ.ಗಸ್ತಿ, ರವಿ ಬಬಲೇಶ್ವರ, ಎಚ್.ಎನ್.ನೀಲನಾಯಕ, ಮಹಾದೇವ ಹಾದಿಮನಿ, ಶೀತಲ್ ಕಾಂಬಳೆ, ಸಾಬ್ಬಣ್ಣ ಚಲವಾದಿ ಮೊದಲಾದವರು ಮಾತನಾಡಿ ಸಂಘಟನೆ ಬಗ್ಗೆ ಸಲಹೆ ಸೂಚನೆ ನೀಡಿದರು.ಜಿಪಂ ಮಾಜಿ ಉಪಾಧ್ಯಕ್ಷ ಡಾ.ಎಂ.ಎಚ್.ಚಲವಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರೂ ಒಗ್ಗಟು ಪ್ರದರ್ಶಿಸಿದರೇ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.ಉದ್ಘಾಟನೆಯನ್ನು ಸಾಂಪ್ರದಾಯಿಕ ಛಲವಾದಿ ಗಂಟೆ ಭಾರಿಸುವ ಮೂಲಕ ನೆರವೇರಿಸಲಾಯಿತು. ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಸದಾಶಿವ ಕೊಡಬಾಗಿ, ರುದ್ರಪ್ಪ ನೀಲನಾಯಕ, ಚಂದ್ರಕಾಂತ ಸರೀಕಾರ, ರಾಮಚಂದ್ರ ನಾಟೇಕಾರ, ಶಿವಕುಮಾರ ಶಿಂಘೆ, ಶೀಲಾದೇವಿ ಗೆಜ್ಜಲಗಟ್ಟಿ, ಹುಲಗೆಪ್ಪ ಹೊದ್ಲುರ, ಮಹೇಶ ಬೀಳಗಿ, ಪರಶುರಾಮ ಮಲ್ಲಪ್ಪಗೋಳ, ಮನೋಹರ ಗರಸಂಗಿ, ಶ್ರೀಶೈಲ ರತ್ನಾಕರ, ಹನುಮಂತ ದೊಡಮನಿ, ಆನಂದ ದೊಡಮನಿ, ಗ್ಯಾನಪ್ಪ ಚಲವಾದಿ, ಶರಣಪ್ಪ ಚಲವಾದಿ, ಪ್ರಶಾಂತ ನೀಲನಾಯಕ, ಮಲ್ಲಿಕಾರ್ಜುನ ಚಲವಾದಿ, ರವಿ ಚಲವಾದಿ, ಗುರು ಶಾಂತಪ್ಪ ಮದೀನಕರ, ಶಶಿಕಾಂತ ದೊಡಮನಿ, ಬಸವರಾಜ ಅಚನೂರ, ಅಶೋಕ ನೀಲನಾಯಕ, ಪರಶುರಾಮ ಚಲವಾದಿ (ಘಂಟೆ), ಗಜು ಕಾಂಬಳೆ, ಶನಸ್ಸು ನಾರಾಯಣಿ, ಹನಮಂತ ಕೆರಕಲಮಟ್ಟಿ, ಸಂಜು ಕಾಂಬಳೆ, ವಿಶ್ವನಾಥ ಆಲಮೇಲ, ಬಾಬಾಸಾಹೇಬ ಕಾಂಬಳೆ, ರಾಮಣ್ಣ ಗಂಗೂರು, ಬಸವರಾಜ ಮರೋಳ, ಅಂಬರೀಶ ಅಡವಿಹಾಳ ಮೊದಲಾದವರು ಉಪಸ್ಥಿತರಿದ್ದರು.ಆರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ದಿವಂಗತ ಕೆ.ಶಿವರಾಂ ಅವರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಸಮಾಜದ ಹಿರಿಯರಾದ ಬಸವರಾಜ ಚಲವಾದಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಬಸವರಾಜ ಬದಾಮಿ ಮಾತನಾಡಿದರು. ಶ್ರೀಕಾಂತ ಸೊನ್ನದ ನಿರೂಪಿಸಿದರು. ಶಿವುಕುಮಾರ ಶಿಂಘೆ ವಂದಿಸಿದರು.