ಸಾರಾಂಶ
ತಿಪಟೂರು : ಕನಕದಾಸರು ಒಂದು ಜಾತಿ ವರ್ಗಕ್ಕೆ ಸೀಮಿತರಾದವರಲ್ಲ ಸರ್ವ ಜನಾಂಗದವರ ಕಣ್ತೆರೆಸಿದ ಸಾಧಕರಾಗಿದ್ದರು. ಅವರ ಅನೇಕ ಕೀರ್ತನೆಗಳಲ್ಲಿ ಸಾಮಾಜಿಕ, ಆಧ್ಯಾತ್ಮಿಕ ಮೌಲ್ಯಗಳು ಪ್ರತಿಬಿಂಬಿತವಾಗಿದ್ದು ಅವರ ನಡೆ, ನುಡಿ, ಆಚಾರ, ವಿಚಾರಗಳು ಮತ್ತು ಅವರು ನೀಡಿದ ಸಂದೇಶಗಳು ಪ್ರಸ್ತುತ ಸಮಾಜಕ್ಕೆ ಆದರ್ಶಪ್ರಾಯ ಎಂದು ತಾಲೂಕಿನ ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಆರ್. ದೇವರಾಜು ತಿಳಿಸಿದರು.

ತಾಲೂಕಿನ ಕರಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಿಸಿ ಮಾತನಾಡಿದ ಅವರು, ಕನಕರು ಕೇವಲ ದಾಸಸಾಹಿತ್ಯದ ಹರಿಕಾರರಷ್ಟೇ ಅಲ್ಲ, ಸಮಾಜದಲ್ಲಿ ಸರ್ವರೂ ಸಮಾನರು ಎಂಬ ಮೌಲ್ಯಯುತ ಸಂದೇಶಗಳನ್ನ ಬಿತ್ತಿದವರು. ದಂಡನಾಯಕನಾಗಿ, ಅರಸನಾಗಿ, ವೈಭೋಗದ ಜೀವನದಲ್ಲಿ ಬೆಳೆದು, ಎಲ್ಲವನ್ನೂ ತ್ಯಜಿಸಿ ಸಾಮಾನ್ಯ ವ್ಯಕ್ತಿಯಾಗಿ ಜೀವನ ನಡೆಸಿ ಸಾಹಿತ್ಯ ಸಂಗೀತದ ಮೂಲಕ ಸಮಾಜದ ಶಕ್ತಿಯಾದರು. ಸಮಾಜಕ್ಕೆ ಅವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದು, ಯುವ ಪೀಳಿಗೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಅವರ ಹಾದಿಯಲ್ಲಿ ನಡೆಯಬೇಕೆಂದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಕುಮಾರಯ್ಯ, ಮುನಿರಾಜು, ಬಿಲ್ ಕಲೆಕ್ಟರ್ ನಟರಾಜು ಸೇರಿದಂತೆ ಕಾರ್ಯದರ್ಶಿಗಳು, ನೌಕರರು ಭಾಗವಹಿಸಿದ್ದರು.