ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಸಂತೋಷ ಕುಮಾರ್

| Published : Aug 26 2024, 01:35 AM IST / Updated: Aug 26 2024, 01:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರಮಕ್ಕಳ ಪ್ರತಿಭೆಯನ್ನು ರೂಪಿಸಲು ಮತ್ತು ಅವರಲ್ಲಿ ಸಾಂಸ್ಕೃತಿಕ ಮನೋಭಾವವನ್ನು ಬೆಳೆಸಲು ಶಿಕ್ಷಕರು ಮತ್ತು ಪೋಷಕರು ಪ್ರೋತ್ಸಾಹಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಆರ್ ಸಂತೋಷ ಕುಮಾರ್ ಹೇಳಿದರು.

ರಾಮನಗರ, ವಿಜಯಪುರ, ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ ಕುಮಾರ್

ಕನ್ನಡಪ್ರಭ ವಾರ್ತೆ ವಿಜಯಪುರಮಕ್ಕಳ ಪ್ರತಿಭೆಯನ್ನು ರೂಪಿಸಲು ಮತ್ತು ಅವರಲ್ಲಿ ಸಾಂಸ್ಕೃತಿಕ ಮನೋಭಾವವನ್ನು ಬೆಳೆಸಲು ಶಿಕ್ಷಕರು ಮತ್ತು ಪೋಷಕರು ಪ್ರೋತ್ಸಾಹಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಆರ್ ಸಂತೋಷ ಕುಮಾರ್ ಹೇಳಿದರು. ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪಠ್ಯದ ಜೊತೆಗೆ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪೋಷಕರು ಪ್ರೇರೇಪಿಸಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಮಕ್ಕಳ ಸುಂದರ ಕನಸುಗಳನ್ನು ಇಂತಹ ವೇದಿಕೆ ಮೂಲಕ ಅರಳಿಸಬೇಕು. ಆಸಕ್ತಿದಾಯಕ ಕ್ಷೇತ್ರದಲ್ಲಿ ಮಕ್ಕಳನ್ನು ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಬೇಕು. ಅಲ್ಲದೆ ಬಾಲ್ಯದಲ್ಲಿ ಅವರ ಪ್ರತಿಭೆಗಳನ್ನು ಅನಾವರಣಕ್ಕೆ ಪಠ್ಯೇತರ ಚಟುವಟಿಕೆಗಳು ಅಗತ್ಯ. ಮಕ್ಕಳು ಬೌದ್ದಿಕ ಹಾಗೂ ಭೌತಿಕ ವಿಕಸನ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಬೇಕು ಎಂದರು. ತಾಲೂಕು ಶಿಕ್ಷಣ ಸಂಯೋಜಕಿ ಕೋಮಲ ಮಾತನಾಡಿ, ಬಾಲ್ಯಾವಸ್ಥೆಯಲ್ಲಿ ಮಕ್ಕಳು ಟಿವಿ, ಮೊಬೈಲ್ ಗೀಳಿನಿಂದ ಹೊರಬಂದು ಜಾನಪದ, ದೇಶೀಯ ಕಲೆಗಳನ್ನು, ಸಾಹಿತ್ಯ ಬರವಣಿಗೆ ಆಸಕ್ತಿಯನ್ನು ಮೈಗೂಡಿಸಿ ಕೊಳ್ಳಬೇಕು. ಪ್ರಾಥಮಿಕ ಹಂತದಲ್ಲಿನ ಗುಣಾತ್ಮಕ ಶಿಕ್ಷಣ ಭವಿಷ್ಯದ ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿ ಯಾಗಲಿದೆ. ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ನಿರ್ಣಾಯಕರಾದ ಶಿಕ್ಷಕರು ನೈಜ ಪ್ರತಿಭೆಗಳನ್ನು ಗುರುತಿಸಿ ಮೂಲಕ ತಾಲೂಕು, ಜಿಲ್ಲಾ, ರಾಜ್ಯಮಟ್ಟಕ್ಕೆ ಆಯ್ಕೆಗೊಳ್ಳಲು ಪ್ರೇರೇಪಿಸಬೇಕು ಎಂದು ತಿಳಿಸಿದರು. ಪ್ರತಿಭಾ ಕಾರಂಜಿಯಲ್ಲಿ ೨೦ ಕ್ಕೂ ಹೆಚ್ಚು ಶಾಲೆಗಳಿಂದ ಮಕ್ಕಳು ಭಾಗವಹಿಸಿದ್ದರು. ನೃತ್ಯ, ಭಾಷಣ, ಕಂಠಪಾಠ, ರಸಪ್ರಶ್ನೆ, ಗೀತೆ, ಚಿತ್ರಕಲೆ ವೇಷಭೋಷಣ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಶೇಷ ಉಡುಪುಗಳಲ್ಲಿ ಮಕ್ಕಳು ಭಾಗಿಯಾಗಿದ್ದರು. ಸಿ ಆರ್ ಪಿ ದಿನೇಶ್ ಕುಮಾರ್, ಬಿ ಆರ್ ಸಿ ಸಮನ್ವಯಾಧಿಕಾರಿ ಮಂಜುಳಾ, ಪುರಸಭೆ ಸದಸ್ಯರಾದ ಎಸ್. ಭವ್ಯ, ನಂದಕುಮಾರ್, ನಾರಾಯಣಸ್ವಾಮಿ, ರಾಜಣ್ಣ, ಹನೀಪುಲ್ಲಾ, ಬೈರೇಗೌಡ, ಸೇರಿದಂತೆ ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು, ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಪೋಷಕರು ಇದ್ದರು.