idyabhushana-Medha Music Concert Tomorrow
ಚಿಕ್ಕಮಗಳೂರು: ಮಥಾಯಿಸ್ ಫೌಂಡೇಷನ್ ವತಿಯಿಂದ ಗಾಯಕ ಡಾ. ವಿದ್ಯಾಭೂಷಣ ಹಾಗೂ ಅವರ ಪುತ್ರಿ ಮೇಧಾ ವಿದ್ಯಾಭೂಷಣ ಅವರ ಸಂಗೀತ ಕಛೇರಿಯನ್ನು ಸೆ.26ರಂದು ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಷನ್‌ನ ಮ್ಯಾನೇಜಿಂಗ್ ಟ್ರಸ್ಟಿ ಜಾನ್ ಮಥಾಯಿಸ್, ಕಾರ್ಯಕ್ರಮದ ವಿವರ ನೀಡಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಸೆ.26ರಂದು ಸಂಜೆ 5.30ಕ್ಕೆ ‘ಪಿಳ್ಳಂಗೋವಿಯ ಚೆಲ್ವ ಕೃಷ್ಣನಾ...’ ಶೀರ್ಷಿಕೆಯಡಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದ್ಯಾಭೂಷಣ ಹಾಗೂ ಮೇಧಾ ವಿದ್ಯಾಭೂಷಣ ಅವರು ಪ್ರಸಿದ್ಧ ದೇವರ ನಾಮಗಳು ಮತ್ತು ದಾಸರ ಪದಗಳನ್ನು ಹಾಡಲಿದ್ದಾರೆ.
ಪ್ರದೇಶ್ ವಯೋಲಿನ್, ನಾಗೇಂದ್ರ ಪ್ರಸಾದ್ ಮೃದಂಗ ಹಾಗೂ ಉದಯರಾಜ್ ಕರ್ಪೂರ್ ತಬಲ ವಾದನದಲ್ಲಿ ಸಹಕರಿಸಲಿದ್ದು, ವಿದ್ವಾನ್ ಎನ್. ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೈನ್ ರಾಗ್ ಹೋಂಸ್ಟೇ ಹಾಗೂ ಕುವೆಂಪು ವಿದ್ಯಾನಿಕೇತನ ಶಾಲೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಮೊದಲ ಬಾರಿಗೆ ವಿದ್ಯಾಭೂಷಣ ಹಾಗೂ ಮೇಧಾ ವಿದ್ಯಾಭೂಷಣ ಜಂಟಿಯಾಗಿ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.
