ಸಾರಾಂಶ
ಬರಲು ಆಗದವರ ಪರ ಬೇಡಿಕೊಂಡ ದೇವೇಂದ್ರ । ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುವಂತೆ ಭಿನ್ನಹ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರುತಮ್ಮ ಇಷ್ಟಾರ್ಥಗಳು ಪೂರೈಸಲಿ ಹಾಗೂ ತಮಗೆ ಪುಣ್ಯ ಲಭಿಸಲಿ ಎಂದು ಕೋಟ್ಯಂತರ ಜನರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದರೆ ಇಲ್ಲೊಬ್ಬ ಯುವಕ ಸಾರ್ವಜನಿಕರ ವಿವಿಧ ಸಮಸ್ಯೆಗಳನ್ನು ಎತ್ತಿಹಿಡಿದು ಅವುಗಳ ಬ್ಯಾನರ್‌ನಲ್ಲಿ ಪ್ರಕಟಿಸಿ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾನೆ.
ಚಿಕ್ಕಮಗಳೂರು ತಾಲೂಕು ಖಾಂಡ್ಯ ಹೋಬಳಿ ಬಿದರೆ ಗ್ರಾಮದ ದೇವೇಂದ್ರ ಪುಣ್ಯಸ್ನಾನ ಮಾಡಿದ ಯುವಕ. ಯಾರಿಗೆಲ್ಲ ಬರಲು ಆಗುವುದಿಲ್ಲವೋ ಅವರೆಲ್ಲರ ಪರವಾಗಿ 101 ಬಾರಿ ನೀರಿನಲ್ಲಿ ಮುಳುಗಿ ಏಳುತ್ತೇನೆ. ಎಲ್ಲರಿಗೂ ಅವರು ಅಂದುಕೊಂಡಿರುವ ಉತ್ತಮ ಕನಸುಗಳು ಈಡೇರಲಿ ಎಂದು ಬಿದರೆಯ ಯುವಕ ದೇವೇಂದ್ರ ಬೇಡಿಕೊಂಡಿದ್ದಾನೆ.ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ನಡೆಯುವ ಅತ್ಯಾಚಾರ ಸಂಪೂರ್ಣವಾಗಿ ನಿಂತು ಹೋಗಬೇಕು. ಮಧ್ಉಮ ವರ್ಗದ ಜನರನ್ನು ಸರ್ಕಾರ ಗುರುತಿಸುವಂತಾಗಲಿ. ಕರ್ನಾಟಕದಲ್ಲಿ 25 ವರ್ಷ ಮೇಲ್ಪಟ್ಟು ಮದುವೆಗೆ ವರ-ವಧು ಹುಡುಕುತ್ತಿರುವ ಮತ್ತು ವಧು-ವರರನ್ನು ಹುಡುಕುತ್ತಿರುವ ಎಲ್ಲರಿಗೂ ಕಂಕಣ ಭಾಗ್ಯ ಆದಷ್ಟು ಬೇಗ ಕೂಡಿ ಬರಲಿ. ಕಾಲಕ್ಕೆ ತಕ್ಕ ಮಳೆ-ಬೆಳೆ ಚೆನ್ನಾಗಿ ಆಗಲಿ. ರೈತ ಬೆಳೆದ ಬೆಳೆ ಉತ್ತಮ ಬೆಂಬಲ ಬೆಲೆ ಸಿಗಲಿ. ನಮ್ಮ ಮಲೆನಾಡಿನ ಒತ್ತುವರಿ ಸಮಸ್ಯೆ ಬಗೆಹರಿಯಲಿ. ಈ ಬಾರಿ ಆರ್‌ಸಿಬಿ ಅಭಿಮಾನಿಗಳ ಆಸೆ ಈಡೇರಬೇಕು (ಈ ಸಲ ಕಪ್ ನಮ್ದೇ). ಎಂಬ ಪ್ರಾರ್ಥನೆಯ ಬ್ಯಾನರ್ ಮಾಡಿಸಿ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿ ಯುವಕ ದೇವೇಂದ್ರ ಗಮನ ಸೆಳೆದಿದ್ದಾನೆ.
;Resize=(128,128))
;Resize=(128,128))
;Resize=(128,128))
;Resize=(128,128))