ಬಿಜೆಪಿಯವರಿಗೆ ಗೌರವ, ಸ್ವಾಭಿಮಾನ ಇದ್ದರೆ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲಿ: ಡಿಸಿಎಂ ಡಿಕೆಶಿ

| Published : Mar 10 2025, 12:15 AM IST

ಬಿಜೆಪಿಯವರಿಗೆ ಗೌರವ, ಸ್ವಾಭಿಮಾನ ಇದ್ದರೆ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲಿ: ಡಿಸಿಎಂ ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಳಿದ ವರ್ಗ ಮಾತ್ರವಲ್ಲ ಮುಸ್ಲಿಮರು ಮೇಲೆ ಬರಲಿ, ಸಣ್ಣಪುಟ್ಟವರು ಕಾಂಟ್ರಾಕ್ಟ್ ಮಾಡಲು, ಸಮಾಜದಲ್ಲಿ ಎಲ್ಲರು ಬದುಕಬೇಕು ಎಂಬ ಉದ್ದೇಶದಿಂದ ಬಜೆಟ್ ನಲ್ಲಿ ಹಣ ವಿನಿಯೋಗಿಸಿದ್ದೇವೆ. ಇದರಲ್ಲಿ ಹಿಂದೂಗಳು ಇದ್ದಾರೆ. ಆದರೆ, ಈ ವಿಚಾರವಾಗಿ ಬಿಜೆಪಿಯವರು ಸಮಾಜವನ್ನು ಹೊಡೆಯಲು ಹೋಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ರಾಜ್ಯ ಬಜೆಟ್ ಬಗ್ಗೆ ಟೀಕಿಸುವ ಬದಲು ಬಿಜೆಪಿಯವರಿಗೆ ಗೌರವ, ಸ್ವಾಭಿಮಾನ ಇದ್ದರೆ ನಮ್ಮ ತೆರಿಗೆ ಹಣ ನೀಡದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ತಾಕತ್ತು ಪ್ರದರ್ಶನ ಮಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.

ಪಟ್ಟಣದ ಹೊರವಲಯದ ಶೆಟ್ಟಹಳ್ಳಿ ಬಳಿ ಬಿ.ಎಂ.ಎಜುಕೇಷನಲ್ ಟ್ರಸ್ಟ್ ನೂತನವಾಗಿ ನಿರ್ಮಿಸಿರುವ ಬಿ.ಎಂ.ಪಬ್ಲಿಕ್ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಬಿಜೆಪಿಗರು ಟೀಕಿಸಿ ಪ್ರತಿಭಟನೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿಯವರ ಅಸೂಹೆಗೆ ಮದ್ದಿಲ್ಲ. ನಾವು ಎಲ್ಲ ರಂಗಕ್ಕೂ 4 ಲಕ್ಷ ಕೋಟಿ ಬಜೆಟ್ ಕೊಟ್ಟಿದ್ದೇವೆ. ಅದನ್ನು ಸಹಿಸದ ಬಿಜೆಪಿಯವರಿಗೆ ಶ್ರೀಮಂತಿಕೆ ಇಲ್ಲ. ಮೊದಲು ನಮ್ಮ ತೆರಿಗೆ ಹಣವನ್ನು ನೀಡದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಕಿಡಿ ಕಾರಿದರು.

ರಾಜ್ಯದ ಬಡವರ ಬದುಕು ಬದಲಾಯಿಸಲು ನಾವು 5 ಗ್ಯಾರಂಟಿ ಕೊಟ್ಟಿದ್ದೇವೆ. ಬಜೆಟ್‌ನಲ್ಲಿ ಎಲ್ಲಾ ಸಮಾಜಕ್ಕೂ ನ್ಯಾಯ ಕೊಟ್ಟಿದ್ದೇವೆ. ಹಳ್ಳಿಯ ಜನರು ಕೊಟ್ಟಿರುವ ತೀರ್ಪು ಸಹಿಸಲು ಬಿಜೆಪಿಯವರಿಗೆ ಆಗುತ್ತಿಲ್ಲ ಎಂದರು.

ಹಿಂದುಳಿದ ವರ್ಗ ಮಾತ್ರವಲ್ಲ ಮುಸ್ಲಿಮರು ಮೇಲೆ ಬರಲಿ, ಸಣ್ಣಪುಟ್ಟವರು ಕಾಂಟ್ರಾಕ್ಟ್ ಮಾಡಲು, ಸಮಾಜದಲ್ಲಿ ಎಲ್ಲರು ಬದುಕಬೇಕು ಎಂಬ ಉದ್ದೇಶದಿಂದ ಬಜೆಟ್ ನಲ್ಲಿ ಹಣ ವಿನಿಯೋಗಿಸಿದ್ದೇವೆ. ಇದರಲ್ಲಿ ಹಿಂದೂಗಳು ಇದ್ದಾರೆ. ಆದರೆ, ಈ ವಿಚಾರವಾಗಿ ಬಿಜೆಪಿಯವರು ಸಮಾಜವನ್ನು ಹೊಡೆಯಲು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ 500 ಪಬ್ಲಿಕ್ ಶಾಲೆಗಳ ಆರಂಭಕ್ಕೆ ಮುಂದಾಗಿದ್ದೇವೆ. ಅಭಿವೃದ್ಧಿಗೆ ಹೆಚ್ಚು ಹಣ ಕೊಟ್ಟಿದ್ದೇವೆ. ಇದು ತಪ್ಪಾ?. ಬೆಂಗಳೂರು ನಗರ ಹೆಚ್ಚು ತೆರಿಗೆ ಕೊಡುತ್ತಿದ್ದಾರೆ. ಅದಕ್ಕೆ ಬೆಂಗಳೂರು ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಆ ಮೂಲಕ ಹೊಸ ರೂಪ ಕೊಡಲು ಮುಂದಾಗಿದ್ದೇವೆ. ಇಂತಹ ಕೆಲಸ ಅವರ ಕಾಲದಲ್ಲಿ ಅಗಿಲ್ಲ ಎಂದು ದೂರಿದರು.

ರಾಜ್ಯ ಬಜೆಟ್ ನೋಡಿ ಬಿಜೆಪಿಯವರಿಗೆ ಅಸೂಹೆ ಬಂದಿದೆ. ಹೀಗಾಗಿ ಅವರು ಮೆಡಿಸನ್ ತೆಗೆದುಕೊಂಡು ಹೊಟ್ಟೆಉರಿ ಕಡಿಮೆ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾರ್ಗದರ್ಶನ ಕೊಟ್ಟರೂ ನಾವು ಕೇಳಿಕೊಂಡು ಹೋಗುತ್ತೇವೆ. ವಿಪಕ್ಷದವರು ಒಳ್ಳೆಯ ಮಾರ್ಗದರ್ಶನ ಕೊಟ್ಟರೂ ಅದನ್ನು ಕೇಳೋಕ್ಕೆ ನಾವು ರೇಡಿ ಇದ್ದೇವೆ. ಟೀಕೆ ಮಾಡಿದರೂ ನಮಗೆ ಬೇಜಾರಿಲ್ಲ. ನಾವು ಮಾಡುವ ಕೆಲಸ ಮಾಡುತ್ತೇವೆ. ನಮ್ಮ ಜೊತೆ ರಾಜ್ಯದ ಜನರು ಇದ್ದಾರೆ ಎಂದರು.

ಈ ವೇಳೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಇದ್ದರು.