ಭೋವಿ ಸಮಾಜಕ್ಕೆ ಕಾಂಗ್ರೆಸ್‌ ಟಿಕೆಟ್‌ ನೀಡದಿದ್ದರೆ ಪಕ್ಷೇತರ ಸ್ವರ್ಧೆ: ಆರ್‌.ದಾಸಭೋವಿ

| Published : Mar 27 2024, 01:04 AM IST

ಭೋವಿ ಸಮಾಜಕ್ಕೆ ಕಾಂಗ್ರೆಸ್‌ ಟಿಕೆಟ್‌ ನೀಡದಿದ್ದರೆ ಪಕ್ಷೇತರ ಸ್ವರ್ಧೆ: ಆರ್‌.ದಾಸಭೋವಿ
Share this Article
  • FB
  • TW
  • Linkdin
  • Email

ಸಾರಾಂಶ

ಟಿಕೆಟ್‌ ವಿಚಾರದಲ್ಲಿ ಭೋವಿ ಸಮಾಜವನ್ನು ರಾಜ್ಯ ಕಾಂಗ್ರೆಸ್‌ ನಿರ್ಲಕ್ಷ್ಯಿಸಿದರೆ ಪ್ರಸಕ್ತ ಸಾಲಿನಲ್ಲಿ ಚಿತ್ರದುರ್ಗ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸುವುದು ಖಚಿತ ಎಂದು ರಾಷ್ಟ್ರೀಯ ಶ್ರೀ ಸಿದ್ದರಾಮೇಶ್ವರ ಭೋವಿ (ಓಡ್‌)ಯುವ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ತಾಲೂಕು ಭೋವಿ ಸಮಾಜದ ಹಿರಿಯ ಮುಖಂಡರಾದ ತಾಲೂಕಿನ ವಡ್ಡರಹಟ್ಟಿಯ ಆರ್‌.ದಾಸಭೋವಿ (ದಾಸಪ್ಪ) ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಟಿಕೆಟ್‌ ವಿಚಾರದಲ್ಲಿ ಭೋವಿ ಸಮಾಜವನ್ನು ರಾಜ್ಯ ಕಾಂಗ್ರೆಸ್‌ ನಿರ್ಲಕ್ಷ್ಯಿಸಿದರೆ ಪ್ರಸಕ್ತ ಸಾಲಿನಲ್ಲಿ ಚಿತ್ರದುರ್ಗ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸುವುದು ಖಚಿತ ಎಂದು ರಾಷ್ಟ್ರೀಯ ಶ್ರೀ ಸಿದ್ದರಾಮೇಶ್ವರ ಭೋವಿ (ಓಡ್‌)ಯುವ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ತಾಲೂಕು ಭೋವಿ ಸಮಾಜದ ಹಿರಿಯ ಮುಖಂಡರಾದ ತಾಲೂಕಿನ ವಡ್ಡರಹಟ್ಟಿಯ ಆರ್‌.ದಾಸಭೋವಿ (ದಾಸಪ್ಪ) ಅವರು ತಿಳಿಸಿದ್ದಾರೆ.ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಪಾವಗಡ ಸೇರಿದಂತೆ ಈ ಭಾಗದ ಚಿತ್ರದುರ್ಗ ಲೋಕಸಭೆ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ. ಮೀಸಲು ಕ್ಷೇತ್ರವಾದಗಿನಿಂದಲೂ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್‌ ಪಕ್ಷ ಕಳೆದ 30 ವರ್ಷಗಳಿಂದ ಒಂದು ಭಾರಿಯಾದರೂ ಈ ಭಾಗದಲ್ಲಿ ಭೋವಿ ಸಮಾಜಕ್ಕೆ ಅಧ್ಯತೆ ನೀಡಿಲ್ಲ. ಅಲ್ಲದೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ, ಚಿತ್ರದುರ್ಗ, ಕೋಲಾರ ಸೇರಿದಂತೆ 5 ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲಿವೆ. ರಾಜ್ಯದಲ್ಲಿ ಸುಮಾರು 50 ಲಕ್ಷದಷ್ಟು ಭೋವಿ ಸಮುದಾಯದ ಮತಗಳಿವೆ. ಯಾವುದೇ ಮೀಸಲು ಕ್ಷೇತ್ರದಲ್ಲಿ ಭೋವಿ ಸಮಾಜಕ್ಕೆ ಅದ್ಯತೆ ನೀಡದಿರುವುದು ವಿಪರ್ಯಾಸ.

ಸಮಾಜದ ಹಾಲಿ ಹಾಗೂ ಮಾಜಿ ಸಚಿವರು ಹಾಗೂ ಶಾಸಕರು ಹಾಗೂ ಸಮಾಜದ ಹಿರಿಯ ಮುಖಂಡರು ಆನೇಕ ಬಾರಿ ಮನವಿ ಮಾಡಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್‌ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ಅತ್ಯಂತ ನೋವು ತಂದಿದೆ. ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಭೋವಿ ಸಮಾಜದ ಸ್ಥಳೀಯ ಇಬ್ಬರು ಆಕಾಂಕ್ಷಿಗಳು ಟಿಕೆಟ್‌ಗಾಗಿ ಬೇಡಿಕೆಯಿಟ್ಟಿದ್ದರೂ ನಿರ್ಲಕ್ಷ್ಸಿದ್ದಾರೆ. ಇದು ರಾಜ್ಯದ ಭೋವಿ ಸಮಾಜಕ್ಕೆ ಬೇಸರ ತಂದಿದೆ. ಇನ್ನೂ ಅಭ್ಯರ್ಥಿಗಳ ಆಯ್ಕೆಯ ಅಂತಿಮ ತೀರ್ಮಾನಕ್ಕೆ ಕಾಲಾವಕಾಶವಿದ್ದು, ಚಿಂತನೆ ನಡೆಸಿ, ಈ ಭಾಗದಲ್ಲಿ ಭೋವಿ ಸಮಾಜಕ್ಕೆ ಅದ್ಯತೆ ನೀಡಬೇಕು. ಕಡೆಗಾಣಿಸಿದರೆ ಭೋವಿ ಹಾಗೂ ಇತರೆ ಸಮಾಜದ ಬೆಂಬಲದೊಂದಿಗೆ ಈ ಭಾಗದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅವರು ಹೇಳಿದರು.

ನಾನು ಬ್ಯಾಡನೂರು ಗ್ರಾಪಂನ ವಡ್ಡರಹಟ್ಟಿ ಗ್ರಾಮದ ವಾಸಿಯಾಗಿದ್ದು, ಸಮಾಜ ಸೇವೆ ಹಾಗೂ ಸಕ್ರಿಯ ರಾಜಕಾರಣದಲ್ಲಿ ದ್ದೇನೆ. ಇದು ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದ ಹಿನ್ನೆಲೆಯಲ್ಲಿ 2004ರ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್‌ ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಸಲಾಗಿತ್ತು. ತಾಲೂಕಿನ ಜನತೆ ಬೆಂಬಲ ವ್ಯಕ್ತಪಡಿಸಿದ್ದರು.

80 ಬಸ್‌ಗಳಲ್ಲಿ 5 ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರು ಬೆಂಗಳೂರಿಗೆ ನಿಯೋಗ ತೆರಳಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹಾಗೂ ಆಗಿನ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಎಚ್‌.ಡಿ.ಕುಮಾರಣ್ಣರನ್ನು ಭೇಟಿಯಾಗಿ ಟಿಕೆಟ್‌ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಮಾನದಂಡಗಳ ಅನ್ವಯ ಆಗ ಜೆಡಿಎಸ್‌ ಟಿಕೆಟ್‌ ಕೈತಪ್ಪಿ ಹೋಗಿತ್ತು. ಅಂದಿನಿಂದ ಕಾಂಗ್ರೆಸ್‌ನ ಸಕ್ರಿಯ ರಾಜಾಕಾರಣಿಯಾಗಿ ಜನ ಸೇವೆಯಲ್ಲಿ ನಿರತನಾಗಿ, ಚಿರಪರಿಚಿತನಾಗಿದ್ದೇನೆ. ಟಿಕೆಟ್‌ ನೀಡುವಲ್ಲಿ ಸಮಾಜಕ್ಕೆ ವಂಚನೆಯಾದರೆ ಭೋವಿ ಸಮಾಜದ ಪರವಾಗಿ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಸ್ವರ್ಧಿಸುವುದು ಖಚಿತ ಎಂದು ಅವರು ತಿಳಿಸಿದ್ದಾರೆ.