ಜಾನಪದ ಉಳಿದರೆ ಆಚಾರ ವಿಚಾರಕ್ಕೆ ಬೆಲೆ: ಡಾ. ಟಿ.ಎಂ. ಭಾಸ್ಕರ

| Published : May 17 2025, 01:19 AM IST

ಸಾರಾಂಶ

ನಾಳಿನ ಪೀಳಿಗೆಗೆ ಜಾನಪದ ಉಳಿಸಲು ಎಲ್ಲ ವಿದ್ಯಾಲಯಗಳು ಮುಂದಾಗಬೇಕು. ನಮ್ಮ ಸಂಸ್ಕೃತಿಯ ಮೂಲ ಬೇರುಗಳು ಇಲ್ಲಿವೆ.

ಹಾನಗಲ್ಲ: ರಾಷ್ಟ್ರೀಯ ಭಾವೈಕ್ಯದ ಜಾನಪದ ಎಲ್ಲ ಕಾಲದಲ್ಲೂ ಸಂಭ್ರಮದ ನಡೆ ನುಡಿ ಅರಳಿಸಿ ಬದುಕನ್ನು ಹಸನುಗೊಳಿಸುವ ದಿವ್ಯ ಶಕ್ತಿ ಹೊಂದಿದ್ದು, ಜಾನಪದ ಉಳಿದರೆ ಪ್ರೀತಿ ಗೌರವದ ಆಚಾರ ವಿಚಾರಗಳು ಉಳಿಯುತ್ತವೆ ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ ತಿಳಿಸಿದರು.ತಾಲೂಕಿನ ಅಕ್ಕಿಆಲೂರಿನ ಎಚ್‌ಟಿಇಎಸ್ ಕಲಾ ಹಾಗೂ ಎಸ್‌ಬಿ ಜಾಬಿನ ವಾಣಿಜ್ಯ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ ಉದ್ಘಾಟಿಸಿ ಮಾತನಾಡಿ, ನಾಳಿನ ಪೀಳಿಗೆಗೆ ಜಾನಪದ ಉಳಿಸಲು ಎಲ್ಲ ವಿದ್ಯಾಲಯಗಳು ಮುಂದಾಗಬೇಕು. ನಮ್ಮ ಸಂಸ್ಕೃತಿಯ ಮೂಲ ಬೇರುಗಳು ಇಲ್ಲಿವೆ. ಕಲೆ ಸಂಸ್ಕೃತಿ ಅನುಕರಣೀಯ. ಜಾನಪದ ವಿಶ್ವವಿದ್ಯಾಲಯ ಮಾಡುವ ಕಾರ್ಯವನ್ನು ಈ ಜಾನಪದ ಉತ್ಸವ ಅರ್ಥಪೂರ್ಣವಾಗಿ ಕೈಗೊಂಡಿದೆ. ಇದು ಅವಿಸ್ಮರಣೀಯ ಹಾಗೂ ಅನುಕರಣೀಯ ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಕಟ್ಟೇಗೌಡರ ಜಾನಪದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ನಮ್ಮ ಹಳ್ಳಿಗಳಲ್ಲಿ ಜೀವಂತವಾಗಿದ್ದ ಜನಪದವನ್ನು ವಿದ್ಯಾರ್ಥಿಗಳು ಅನುಕರಣೀಯವಾಗಿ ಸಂಭ್ರಮಾಚರಣೆಗೆ ತಂದುದು ನಿಜಕ್ಕೂ ಅಭಿನಂದನೀಯ. ಇದು ಊಹೆಗೆ ಮೀರಿದ ಆಚರಣೆ ಎಂದರು.

ನ್ಯಾಯವಾದಿ ಕೆ.ಸಿ. ಪಾವಲಿ ಮಾತನಾಡಿ, ನಶಿಸುತ್ತಿರುವ ಜಾನಪದ ಕಲೆಯನ್ನು ಉಳಿಸಲು ನಾವೆಲ್ಲ ಸಂಕಲ್ಪ ಮಾಡಬೇಕಾಗಿದೆ. ಆಧುನಿಕತೆಯ ಹೆಸರಿನಲ್ಲಿ ನಮ್ಮ ಸಂಸ್ಕೃತಿಯನ್ನೇ ದೂರುತ್ತಿರುವ ಈ ಕಾಲದಲ್ಲಿ ಜಾನಪದದ ಅರಿವು ಮೂಡಿಸುವ ಕಾರ್ಯದಲ್ಲಿ ಯುವ ವಿದ್ಯಾರ್ಥಿಗಳು ಯೋಚಿಸುತ್ತಿರುವುದು ಅವರ ಸುಸಂಸ್ಕೃತ ಮನೋಧರ್ಮವಾಗಿದೆ ಎಂದರು. ಹಾನಗಲ್ಲ ತಾಲೂಕು ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಸಿ. ಪಾವಲಿ ಅಧ್ಯಕ್ಷತೆ ವಹಿಸಿದ್ದರು. ಗುರುಶಾಂತಪ್ಪ ಮಹಾಲಿಂಗಶೆಟ್ಟರ, ನಿರ್ದೇಶಕ ಮಂಡಳಿಯ ಕುಮಾರ ಧಾರವಾಡ, ಉಮೇಶ ಬೆಲ್ಲದ, ಎಸ್.ಎಂ. ಸಿಂಧೂರ, ಯು.ಬಿ. ಕೂಬಿಹಾಳ, ಸತೀಶ ಎಂ. ಪ್ರಾಚಾರ್ಯ ಬಿ.ಎನ್. ಮ್ಯಾಗಳಗೇರಿ, ಪ್ರೊ. ಜಿ.ವಿ. ಕೋರಿ, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ವಜ್ರೇಶ್ವರಿ ಸುಣಗಾರ, ಸಹ ಕಾರ್ಯದರ್ಶಿ ಕಾರ್ತಿಕ ಕೂಬಿಹಾಳ ಪಾಲ್ಗೊಂಡಿದ್ದರು. ಪ್ರಭು ನಿಂಬಣ್ಣನವರ ಸ್ವಾಗತಿಸಿದರು. ಭಾರತಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಜಿ.ವಿ. ಕೋರಿ ವಂದಿಸಿದರು.ಮೆರವಣಿಗೆ: ಜನಪದ ವೇಷಭೂಷಣದೊಂದಿಗೆ ಪಾಲ್ಗೊಂಡ ವಿದ್ಯಾರ್ಥಿಗಳು ಚನ್ನವೀರೇಶ್ವರ ವಿರಕ್ತಮಠದಿಂದ ಕಾಲೇಜಿನವರೆಗೆ ಮೆರವಣಿಗೆಯಲ್ಲಿ ಹೋರಿಗಳನ್ನು ಅಲಂಕಾರಗೊಳಿಸಿ ತಂದಿದ್ದರು. ಮೆರವಣಿಗೆಯುದ್ದಕ್ಕೂ ಜನಪದ ಹಾಡುಗಳನ್ನು ಹಾಡಿದರು. ನಂತರ ಕಾಲೇಜಿನಲ್ಲಿ ಜನಪದ ಆಚರಣೆಯ ವಿವಿಧ ಹಬ್ಬಗಳ ರೂಪಾಲಂಕಾರಗಳನ್ನು ಅತಿಥಿಗಳು ವೀಕ್ಷಿಸಿದರು.

If folklore remains, then the issue of ethics has value: Dr. T.M. Bhaskara

ಹಾನಗಲ್ಲ ಸುದ್ದಿ, ಡಾ. ಟಿ.ಎಂ. ಭಾಸ್ಕರ, ಜಾನಪದ ಕಲೆ, Hanagal News, Dr. T.M. Bhaskara, Folk Art

ನಾಳಿನ ಪೀಳಿಗೆಗೆ ಜಾನಪದ ಉಳಿಸಲು ಎಲ್ಲ ವಿದ್ಯಾಲಯಗಳು ಮುಂದಾಗಬೇಕು. ನಮ್ಮ ಸಂಸ್ಕೃತಿಯ ಮೂಲ ಬೇರುಗಳು ಇಲ್ಲಿವೆ.