ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೇಂದ್ರ ಸರ್ಕಾರದ ಯೋಜನೆಗಳು ಇಲ್ಲದ್ದಿದ್ದರೆ ಗ್ರಾಪಂಗಳಿಗೆ ಬಾಗಿಲು ಮುಚ್ಚುವ ಸ್ಥಿತಿ ಇರುತ್ತಿತ್ತು. ನರೇಗಾ, 15ನೇ ಹಣಕಾಸು, ಪಿಎಂ ಆವಾಸ್ ಸೇರಿದಂತೆ ಹಲವು ಯೋಜನೆಗಳು ಗ್ರಾಪಂಗಳನ್ನು ಉಳಿಸಿವೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ತಾಲೂಕಿನ ತೆಂಡೇಕೆರೆ ಗ್ರಾಮದಲ್ಲಿ 15ನೇ ಹಣಕಾಸು ಯೋಜನೆ ಅಡಿ ನಿರ್ಮಿಸಲಾದ ಸಭಾಭವನ ಉದ್ಘಾಟನೆ, ಅಂಚೆಮುದ್ದನಹಳ್ಳಿಯಲ್ಲಿ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ, ಹಾದನೂರು ಗ್ರಾಮದಲ್ಲಿ ಕುಡಿಯುವ ನೀರಿನ ಘಟಕಗಳು, ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆ, ರಾಯಸಮುದ್ರ, ಶೀಳನೆರೆ ಗ್ರಾಮಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಬಂದು ಸುಮಾರು ಎರಡೂವರೆ ವರ್ಷಗಳು ಕಳೆದಿದೆ. ಒಂದೇ ಒಂದು ಆಶ್ರಯ ಮನೆ ಮಂಜೂರು ಮಾಡಿಲ್ಲ. ಗ್ರಾಪಂಗಳಿಗೆ ಒಂದೇ ಒಂದು ರು. ಅನುದಾನ ನೀಡಿಲ್ಲ. ಸದಸ್ಯರಿಗೆ ಗೌರವಧನ ನೀಡಿ ಕಾಲ ಕಳೆಯುತ್ತಿದೆ. ಯಾವುದೇ ಅನುದಾನ ನೀಡದೆ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.ಗ್ರಾಮ ಸ್ವರಾಜ್ಯ ಕಲ್ಪನೆ ಹೊಂದಿದ್ದ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡುತ್ತಿದೆ. ಇನ್ನು ಮೂರೂವರೆ ತಿಂಗಳು ಸದಸ್ಯರಿಗೆ ಅಧಿಕಾರ ನಡೆಸುವ ಕಾಲಾವಕಾಶವಿದೆ. ಸರ್ಕಾರ ಗ್ರಾಪಂಗಳಿಗೆ ಕನಿಷ್ಠ 100 ಮನೆಗಳನ್ನಾದರೂ ನೀಡಿದರೆ ಸದಸ್ಯರು ಅಧಿಕಾರದಿಂದ ಇಳಿಯುವಾಗ ಬಡವರಿಗೆ ಮನೆಗಳನ್ನಾದರೂ ಕೊಡಲು ಅನುಕೂಲವಾಗುತ್ತದೆ ಎಂದರು.
ಶಾಸಕರಿಗೆ ಸಂವಿಧಾನ ಬದ್ಧವಾಗಿ ನೀಡುವ ಅನುದಾನವನ್ನು ಸರ್ಕಾರ ನೀಡುತ್ತಿಲ್ಲ. ಅದನ್ನು ಗ್ರಾಮಗಳ ಅಭಿವೃದ್ಧಿಗೆ ಸದ್ಬಳಕೆ ಮಾಡುತ್ತೇವೆ ಅದನ್ನೂ ನೀಡದೇ ಗ್ರಾಮೀಣ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಅಕ್ಟೋಬರ್ ತಿಂಗಳು ಕಳೆಯುತ್ತಾ ಬಂದರೂ ಗಾಂಧಿ ಗ್ರಾಮ ಪುರಸ್ಕಾರ ನೀಡಲು ಅನುದಾನವಿಲ್ಲದೇ ಸಂಕಷ್ಟದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಎದುರಿಸುತ್ತಿದೆ ಎಂದು ಟೀಕಿಸಿದರು.ಕಾರ್ಯಕ್ರಮದಲ್ಲಿ ಗ್ರಾಪಂನ ಸವಿತ ಇಂದ್ರೇಶ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಸುಷ್ಮಾ.ಕೆ, ತಾಲೂಕು ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಪಿ.ಆರ್.ಇ.ಡಿ ಕಾರ್ಯಪಾಲಕ ಎಂಜಿನಿಯರ್ ಎಂ.ಎಸ್.ಮಂಜುಳ, ಎಂಜಿನಿಯರ್ ಲೋಕೇಶ್, ಕೆ.ಆರ್.ಐ.ಡಿ.ಎಲ್ ಎಂಜಿನಿಯರ್ ಚೇತನ್, ಪಿಡಿಒಗಳಾದ ಕೆ.ಎಸ್.ಕುಮಾರ್, ಸೌಮ್ಯ, ಗ್ರಾಪಂ ಉಪಾಧ್ಯಕ್ಷೆ ನಾಗರತ್ನ ಗಂಗಾಧರ್, ಸದಸ್ಯರಾದ ಶಿವಲಿಂಗ (ಗುಂಡ) ಎಚ್.ಎಂ.ಕಾಂತರಾಜು, ಸ್ವಾಮೀಗೌಡ, ರವಿಕುಮಾರ್, ರಂಗರಾಜು, ಅಂಚನಹಳ್ಳಿ ರಾಜು, ಸೌಭಾಗ್ಯ, ಜ್ಯೋತಿ ಬಸವರಾಜು, ಗಂಗಮ್ಮಕುಮಾರ್, ರೋಹಿಣಿ ಮಹೇಶ್, ಶ್ರೀನಿವಾಸ್, ಜಯಮ್ಮ ಸಣ್ಣೇಗೌಡ, ಶಿಲ್ಪ ಶೇಖರ್, ಸವಿತ, ಮುಖಂಡರಾದ ಸ್ವಾಮೀಗೌಡ, ಅಂಚನಹಳ್ಳಿ ಸುಬ್ಬಣ್ಣ, ರಾಯಸಮುದ್ರ ಗೋಪಿನಾಥ್, ಹರಳಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಯೋಗೇಶ್, ಚೆಸ್ಕಾಂ ಎಂಜಿನಿಯರ್ ಸುನಿಲ್‌ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.