ಸಾರಾಂಶ
ಕನ್ನಡ ಬೆಳವಣಿಗೆ ಮನೆಯಿಂದಲೇ ಬೆಳೆಯಬೇಕು. ಆಗ ಮಾತ್ರ ಕನ್ನಡ ಭಾಷೆ ಜೀವಂತವಾಗಿ ಉಳಿಯುತ್ತದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.
ದಾವಣಗೆರೆ: ಕನ್ನಡ ಬೆಳವಣಿಗೆ ಮನೆಯಿಂದಲೇ ಬೆಳೆಯಬೇಕು. ಆಗ ಮಾತ್ರ ಕನ್ನಡ ಭಾಷೆ ಜೀವಂತವಾಗಿ ಉಳಿಯುತ್ತದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ದಾಗಿನಕಟ್ಟೆ ಗ್ರಾಮದಲ್ಲಿ ಕನ್ನಡ ಜಾಗೃತಿ ಕ್ರೀಡಾ ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರೂ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಇಂಗ್ಲಿಷ್ ಸಹ ಬೇಕು. ಆದರೆ, ಕನ್ನಡವನ್ನು ಚನ್ನಾಗಿ ಕಲಿಯಬೇಕು. ಉಚ್ಛರಣೆ ತಪ್ಪಾಗಿ ಮಾಡಬಾರದು. ಭಾಷಣದಿಂದ ಕನ್ನಡ ಉದ್ಧಾರ ಆಗುವುದಿಲ್ಲ. ಕನ್ನಡ ಬಳಕೆಯನ್ನು ಮಾಡುವುದರಿಂದ, ಬರೆಯುವುದರಿಂದ ಮಾತ್ರವೇ ಉಳಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಮನೆಯಲ್ಲಿ ಮಾತೃಭಾಷೆ ಯಾವುದೇ ಇರಲಿ ಮಕ್ಕಳಿಗೆ ಕನ್ನಡ ಕಲಿಸಬೇಕು. ಮಕ್ಕಳಿಗೆ ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಪುಸ್ತಕ ಓದುವುದರಿಂದಲೇ ಕನ್ನಡ ಬೆಳೆಯುತ್ತದೆ ಎಂದರು.ಕಾರ್ಯಕ್ರಮದಲ್ಲಿ ಬಸವಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಂ.ಆರ್. ಲೋಕೇಶ್, ಕನ್ನಡ ಜಾಗೃತಿ ಸಂಘದ ಅಧ್ಯಕ್ಷ ಟಿ.ಸಿ. ಉಮೇಶ್, ಹೊದಿಗೆರೆ ರಮೇಶ್, ಕರಿಯಪ್ಪ ಮಾಳಗಿ, ಗಂಗಮ್ಮ, ಮಂಜಪ್ಪ, ಲಕ್ಷ್ಮೀಕುಮಾರ್, ಸುಜಾತ ನಾಗರಾಜ್, ಸಂತೋಷ್, ಬಿ.ಎಚ್. ಮಹೇಶ್ವರಪ್ಪ, ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಅನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
- - - -30ಕೆಡಿವಿಜಿ35: