ಮೋದಿ ಪ್ರಧಾನಿ ಆಗದಿದ್ರೆ ನಾವು ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ

| Published : May 04 2024, 12:32 AM IST

ಮೋದಿ ಪ್ರಧಾನಿ ಆಗದಿದ್ರೆ ನಾವು ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ದೇಶದಲ್ಲಿ ಬಿಜೆಪಿ ಪರ ವಾತಾವರಣ ಇದೆ. ದೇಶಕ್ಕೆ ಮೋದಿ ಅವರು ಅನಿವಾರ್ಯ ಆಗಿದ್ದಾರೆ. ಮೋದಿ ಅವರನ್ನು ಪ್ರಧಾನಿ ಮಾಡದೇ ಇದ್ದರೆ ನಾವು ಉಳಿಯುವುದಿಲ್ಲ ಎಂಬ ಭಾವನೆ ದೇಶದ ಜನರಲ್ಲಿ ಬಂದಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರಇಡೀ ದೇಶದಲ್ಲಿ ಬಿಜೆಪಿ ಪರ ವಾತಾವರಣ ಇದೆ. ದೇಶಕ್ಕೆ ಮೋದಿ ಅವರು ಅನಿವಾರ್ಯ ಆಗಿದ್ದಾರೆ. ಮೋದಿ ಅವರನ್ನು ಪ್ರಧಾನಿ ಮಾಡದೇ ಇದ್ದರೆ ನಾವು ಉಳಿಯುವುದಿಲ್ಲ ಎಂಬ ಭಾವನೆ ದೇಶದ ಜನರಲ್ಲಿ ಬಂದಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೇಶ ರಕ್ಷಣೆ, ಅಭಿವೃದ್ಧಿ, ದೇಶ ವರ್ಚಸ್ಸು ಇಮ್ಮಡಿಗೊಳಿಸುವ ಚುನಾವಣೆ ಇದಾಗಿದೆ. ನರೇಂದ್ರ ಮೋದಿ ಅವರ ಕೈಬಲಪಡಿಸಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತರಲು ಪಿ.ಸಿ.ಗದ್ದಿಗೌಡರ ಅವರಿಗೆ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಕಾಂಗ್ರೆಸ್‌ನವರು ಪಾಕಿಸ್ತಾನ ಜೈ ಅಂದಾಗ ಅಂದಿಲ್ಲ ಎಂದು ವಿಧಾನಸಭೆಯಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ಪ್ರಧಾನಿ ಮೋದಿಯವರು ಕಿಸಾನ್‌ ಸಮ್ಮಾನ್‌ ನಿಧಿ ಮೂಲ ರೈತರಿಗೆ ₹ ೬೦೦೦ಗೆ ಮಾಜಿ ಸಿ.ಎಂ.ಯಡಿಯೂರಪ್ಪ ನೀಡುತ್ತಿದ್ದ ₹ ೪೦೦೦, ಬೊಮ್ಮಾಯಿ ಅವರು ಜಾರಿಗೆ ತಂದ ರೈತವಿದ್ಯಾ ಮಿತ್ರ ಯೋಜನೆ ನಿಲ್ಲಿಸುವ ಮೂಲಕ ಕಾಂಗ್ರೆಸ್‌ ಸರ್ಕಾರ ರೈತ ವಿರೋಧಿ ಧೋರಣೆ ತಾಳಿದೆ. ಕಾಂಗ್ರೆಸ್‌ ಗ್ಯಾರಂಟಿಗಳನ್ನು ನಂಬಬೇಡಿ, ನಂಬಿ ಮೋಸಹೋಗಬೇಡಿ ಎಂದು ಸಲಹೆ ನೀಡಿದರು.

ಅನೇಕ ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಬಡತನವನ್ನು ಎಂದಿಗೂ ನಿರ್ಮೂಲನೆ ಮಾಡಲಿಲ್ಲ, ಬದಲಾಗಿ ಭಾರತ ಇನ್ನಷ್ಟು ಬಡತನದಲ್ಲಿಯೇ ಮುಳುಗುವಂತೆ ಮಾಡಿತು, ಆದರೆ, ಕಾಂಗ್ರೆಸ್ ಸರ್ಕಾರ ಇಂದಿಗೂ ಗರೀಬಿ ಹಠಾವೋ ಎಂಬ ಮಾತನ್ನೇ ಹೇಳುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ಮುಖಂಡ ಅರುಣ ಕಾರಜೋಳ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗಣ್ಣ ಕಾತರಕಿ, ವಿ.ಎಂ. ತೆಗ್ಗಿ, ಲೋಕಣ್ಣ ಕತ್ತಿ, ಪರಮಾನಂದ ಟೋಪಣ್ಣವರ, ಬಿ.ಎಲ್. ಬಬಲಾದಿ, ಯಮನಪ್ಪ ಹೊರಟ್ಟಿ, ಸಿದ್ರಾಮಪ್ಪ ದೇಸಾಯಿ, ವೀರೇಶ ಪಂಚಕಟ್ಟಿಮಠ, ಶಿವಪ್ಪ ಚೌಧರಿ, ಪ್ರಕಾಶ ಚಿತ್ತರಗಿ, ಅರುಣ ಮುಧೋಳ, ವಿನೋದ ಘೋರ್ಪಡೆ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ಗಡ್ಡೆಪ್ಪ ಬಾರಕೇರ, ಕೃಷ್ಣಾ ಸಾಳುಂಕಿ, ಆಶೀಫ್ ಜೀರಗಾಳ, ಪರಮಾನಂದ ಕನಕಪ್ಪನವರ, ಗೋಪಾಲಗೌಡ ಪಾಟೀಲ, ಮಂಜುನಾಥ ಪಾಟೀಲ, ಶ್ರೀನಿವಾಸ ಹೂಗಾರ, ಸುರೇಶ ಹುಗ್ಗಿ, ರವೀಂದ್ರ ಚೌಧರಿ, ದುರ್ಗಪ್ಪ ಮಾದರ, ಜಾಕೀರ್‌ ಅತ್ತಾರ, ಭೀವಶಿ ಆನೆಗುದ್ದಿ, ಬಾಬು ಶಿಂಧೆ, ಕಾಂತು ನರಟ್ಟಿ, ಲೋಕಾಪುರ, ವೆಂಕಟಾಪುರ, ಜಾಲಿಕಟ್ಟಿ, ಲಕ್ಷಾನಟ್ಟಿ, ಅರಳಿಕಟ್ಟಿ, ನಾಗಣಾಪುರ, ವರ್ಚಗಲ್, ದಾದನಟ್ಟಿ, ಕಿ. ಹೊಸಕೊಟಿ, ಚಿತ್ರಬಾನುಕೋಟಿ, ಚಿಕ್ಕೂರ ಭಂಟನೂರ ಸೇರಿದಂತೆ ವಿವಿಧ ಗ್ರಾಮಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.