ಸಾರಾಂಶ
ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಲೀಡ್ ಕೊಡದಿದ್ದರೆ ವಿದ್ಯುತ್ ಕಟ್ ಮಾಡುವುದಾಗಿ ಬೆಳಗಾವಿ ಜಿಲ್ಲೆ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಬೆದರಿಕೆ ಹಾಕಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಲೀಡ್ ಕೊಡದಿದ್ದರೆ ವಿದ್ಯುತ್ ಕಟ್ ಮಾಡುವುದಾಗಿ ಬೆಳಗಾವಿ ಜಿಲ್ಲೆ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಬೆದರಿಕೆ ಹಾಕಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.ಬೆಳಗಾವಿ ಕಾಗವಾಡ ತಾಲೂಕು ಜುಗುಳ ಗ್ರಾಮದಲ್ಲಿ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತ ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕಡಿಮೆ ಕೊಟ್ಟರೆ ಕರೆಂಟ್ ಕೊಡಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಲೀಡ್ ಕೊಟ್ಟಿದ್ದಕ್ಕೆ ಕರೆಂಟ್ ತೆಗೀತಾ ಇದ್ದೇವೆ ಅಷ್ಟೇ. ಮತ್ತೆ ಲೋಕಸಭೆಯಲ್ಲಿ ಲೀಡ್ ಕೊಡಲಿಲ್ಲ ಎಂದರೆ ಕರೆಂಟ್ ಕೊಡುವುದೇ ಇಲ್ಲ, ಸಂಪೂರ್ಣ ಕಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕುವ ಮೂಲಕ ಟೀಕೆಗೆ ಕಾರಣರಾಗಿದ್ದಾರೆ.