ಶರಣರ ವಚನ ಅಳವಡಿಸಿಕೊಂಡರೆ ಜೀವನ ಪಾವನ: ವೈ.ಎಸ್. ಸೋಮನಕಟ್ಟಿ

| Published : Apr 14 2024, 01:45 AM IST / Updated: Apr 14 2024, 01:46 AM IST

ಸಾರಾಂಶ

ಬಸವಣ್ಣನವರ ಕಾಲದ ಪೂರ್ವದಲ್ಲಿ ೧೧ನೇ ಶತಮಾನದಲ್ಲಿಯೇ ವಚನಗಳನ್ನು ರಚಿಸುವ ಮೂಲಕ ಸಮಾಜದ ಓರೆ-ಕೋರೆಗಳನ್ನು ತಿದ್ದಿದ ಕೀರ್ತಿ ಆದ್ಯ ವಚನಕಾರ ದೇವರ ದಾಸಿಮಯ್ಯನವರಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ್‌ ವೈ.ಎಸ್. ಸೋಮನಕಟ್ಟಿ ಹೇಳಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿಬಸವಣ್ಣನವರ ಕಾಲದ ಪೂರ್ವದಲ್ಲಿ ೧೧ನೇ ಶತಮಾನದಲ್ಲಿಯೇ ವಚನಗಳನ್ನು ರಚಿಸುವ ಮೂಲಕ ಸಮಾಜದ ಓರೆ-ಕೋರೆಗಳನ್ನು ತಿದ್ದಿದ ಕೀರ್ತಿ ಆದ್ಯ ವಚನಕಾರ ದೇವರ ದಾಸಿಮಯ್ಯನವರಿಗೆ ಸಲ್ಲುತ್ತದೆ. ಅಂತಹ ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಹಸೀಲ್ದಾರ್‌ ವೈ.ಎಸ್. ಸೋಮನಕಟ್ಟಿ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ತಾಲೂಕಾಡಳಿತದಿಂದ ಶನಿವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ನಿವೃತ್ತ ಶಿಕ್ಷಕ ಎಸ್.ಕೆ.ಸೋಮನಕಟ್ಟಿ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಡಾ.ಶ್ರೀಶೈಲ ಕೂಡಗಿ, ನಿವೃತ್ತ ಉಪನ್ಯಾಸಕ ಕೆ.ಬಿ.ಕಡೆಮನಿ ಅವರು ದೇವರ ದಾಸಿಮಯ್ಯನವರ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಶಿವಪುತ್ರ ಅಂಕದ, ಎಸ್.ಬಿ.ಚವ್ಹಾಣ, ಬಸವರಾಜ ನಾಯ್ಕೋಡಿ, ವಿಲಾಸ ಜಾಡರ, ಬಸವರಾಜ ಪಟ್ಟಣದ, ಸೋಮು ಗೋಟೆದ, ಐ.ಜಿ.ಬೆಕಿನಾಳ ಇತರರು ಇದ್ದರು. ಜಿಲ್ಲಾ ಕುರುಹಿನ ಶೆಟ್ಟಿ ಸಮಾಜ ನಿರ್ದೇಶಕ ಶ್ರೀಶೈಲ ಶಿರಗುಪ್ಪಿ ನಿರೂಪಿಸಿ, ವಂದಿಸಿದರು.