ದಾಬಸ್‍ಪೇಟೆ : ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಗೌಪ್ಯವಾಗಿ ಇಟ್ಟಿದ್ದ ಆಯುಧಗಳನ್ನು ಪಡೆದು ನಂತರ ವಿಜಯಪಡೆದದಿನವನ್ನು ವಿಜಯದಶಮಿ ಹಬ್ಬವನ್ನಾಗಿ ಆಚರಿಸಿದರು ಅಂದಿನಿಂದ ಈ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ನಾವು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು

ದಾಬಸ್‍ಪೇಟೆ : ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಗೌಪ್ಯವಾಗಿ ಇಟ್ಟಿದ್ದ ಆಯುಧಗಳನ್ನು ಪಡೆದು ನಂತರ ವಿಜಯಪಡೆದದಿನವನ್ನು ವಿಜಯದಶಮಿ ಹಬ್ಬವನ್ನಾಗಿ ಆಚರಿಸಿದರು ಅಂದಿನಿಂದ ಈ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ನಾವು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸೋಂಪುರ ಹೋಬಳಿಯ ಕಂಬಾಳುವಿನ ಮೇಲಣಗವಿ ಮಠದಲ್ಲಿ ವಿಜಯದ ಹಬ್ಬದ ಪ್ರಯುಕ್ತ ನಡೆದ ಶ್ರೀದೇವಿ ಪುರಾಣ ಪ್ರವಚನ ಶ್ರವಣ, ಚಂಡಿಕಾ ಹೋಮ, ಸೀಮೊಲ್ಲಂಘನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ಅಂದು ವಿಜಯದ ಸಂಕೇತವಾಗಿ ಆಚರಿಸಿಕೊಂಡು ಬಂದ ವಿಜಯದಶಮಿ ಹಬ್ಬವನ್ನು ಇಂದು ನಾವು ನವರಾತ್ರಿಯ ಕೊನೆಯ ದಿನವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ಸಮಯದಲ್ಲಿ ದೇವಾನು ದೇವತೆಗಳು ಸಹ ಪಟ್ಟಕ್ಕೆ ಕುಳಿತಿರುತ್ತಾರೆ. ಈ ದಿನವನ್ನು ಅತ್ಯಂತ ಶ್ರದ್ದಾ ಭಯ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಸಿದ್ದಿ ದೊರೆಯುತ್ತದೆಂಬ ನಂಬಿಕೆ ಇದೆ ಎಂದರು.

ಪುಟ್ಟ ಬಾಲಕಿಯರು ದೈವಿಕ ಶಕ್ತಿ ಅವತಾರ : ನವರಾತ್ರಿಯ ಅಂಗವಾಗಿ 2 ರಿಂದ 10 ವರ್ಷದೊಳಗಿನ ಪುಟ್ಟ ಬಾಲಕಿಯರು ದುರ್ಗಾದೇವಿಯ ದೈವಿಕ ಶಕ್ತಿ ಅವತಾರ ಎಂದು ನಂಬಿದ್ದವೆ. ಮಕ್ಕಳ ಮನಸ್ಸಿನಲ್ಲಿ ಯಾವುದೇ ಕೆಟ್ಟ ಭಾವನೆ ಹೊಂದಿರುವುದಿಲ್ಲ. ಹಾಗಾಗಿ ಹಿಂದೂ ಧರ್ಮದ ಪ್ರಕಾರ ತಾಯಿ ದುರ್ಗೆಯನ್ನು ನವರಾತ್ರಿಯಲ್ಲಿ ಪೂಜಿಸುವುದರ ಜೊತೆಗೆ ಬಾಲ ಮುತ್ತೈದೆಯವರಿಗೆ ಉಡಿ ತುಂಬುವುದರಿಂದ ಭಕ್ತರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.

ಪೋಟೋ 4 : ಕಂಬಾಳುವಿನ ಮೇಲಣಗವಿ ಮಠದಲ್ಲಿ ವಿಜಯದ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿರವರು ಬಾಲ ಮುತ್ತೈದೆಯವರಿಗೆ ಉಡಿ ತುಂಬುವ ಕಾರ್ಯಕ್ಕೆ ಚಾಲನೆ ನೀಡಿದರು.