ಪಾಕ್‌ಗೆ ಪೈಗಂಬರ್ ತತ್ವ ಅರ್ಥವಾಗಿದ್ದರೆ ಹಿಂಸೆ ಮಾಡುತ್ತಿರಲಿಲ್ಲ: ಶಾಂತವೀರ ಸ್ವಾಮೀಜಿ

| Published : May 11 2025, 11:47 PM IST

ಪಾಕ್‌ಗೆ ಪೈಗಂಬರ್ ತತ್ವ ಅರ್ಥವಾಗಿದ್ದರೆ ಹಿಂಸೆ ಮಾಡುತ್ತಿರಲಿಲ್ಲ: ಶಾಂತವೀರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನದ ಜನರಿಗೆ ಪೈಗಂಬರ್ ತತ್ವ ಅರ್ಥವಾಗಿದ್ದರೆ ಹಿಂಸಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿರಲಿಲ್ಲ ಎಂದು ಕುಂಚಿಟಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಪಾಕಿಸ್ತಾನದ ಜನರಿಗೆ ಪೈಗಂಬರ್ ತತ್ವ ಅರ್ಥವಾಗಿದ್ದರೆ ಹಿಂಸಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿರಲಿಲ್ಲ ಎಂದು ಕುಂಚಿಟಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಕುಂಚಗಿರಿಯ ಕುಂಚಿಟಿಗ ಮಠದಲ್ಲಿ ಆಯೋಜಿಸಲಾಗಿದ್ದ ಸುಜ್ಞಾನ ಸಂಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಕುರಾನ್. ಮಹಮ್ಮದ್ ಪೈಗಂಬರ್‌ರವರ ಅಹಿಂಸೆಯನ್ನು ಬಿಟ್ಟು ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗಿರುವವರು. ಪೆನ್ನು ಹಿಡಿಯದೆ. ಗನ್ ಹಿಡಿದಿರುವುದು. ಇಸ್ಲಾಂ ಧರ್ಮಕ್ಕೆ ಮಹಮದ್ ಪೈಗಂಬರ್‌ಗೆ ಕುರಾನ್‌ಗೆ ಮಾಡಿದ ಅಪಚಾರ. ಧರ್ಮಾಂಧರಾಗದೆ ಧರ್ಮದಲ್ಲಿರುವ ನಿಜ ತತ್ವವನ್ನು ತತ್ವವನ್ನು ಅರಿತರೆ ಎಲ್ಲರನ್ನೂ ಪ್ರೀತಿಸುವ ಎಲ್ಲರೂ ನಮ್ಮವರೇಂಬ ಭಾವ ಬರಲು ಸಾಧ್ಯ ಎಂದರು.

ಭಯೋತ್ಪಾದನೆ ಹುಟ್ಟಲು ನಮ್ಮವರೆಂಬ ಭಾವ ಕಳೆದಿರುವುದೇ ಈ ಹಿನಾ ಕೃತ್ಯಕ್ಕೆ ಕಾರಣವಾಗಿದೆ. ಭಾರತೀಯರು ಸಹಿಷ್ಣುತೆ ಸಹಬಾಳ್ವೆ ಸೌಹಾರ್ದತೆಯ ಮಂತ್ರವನ್ನು ನಮ್ಮ ಯೋಗಿಗಳು ಋಷಿಗಳು ಮಹಾತ್ಮರು ಸಂತರಿಂದ ಮಾನವೀಯತೆಯನ್ನು ಕಲಿತರೆ ಪಾಕಿಸ್ತಾನದಲ್ಲಿ ಭಯ ಬೆದರಿಕೆಯ ಭಯೋತ್ಪಾದನೆ ಇರುವುದು ಆ ದೇಶದ ಪ್ರಗತಿಗೆ ಸರಿಯಾದುದ್ದಲ್ಲ. ಯಾವುದೇ ದೇಶ ಪ್ರಗತಿ ಕಾಣಲು ಸರ್ವತೋಮುಖ ಅಭಿವೃದ್ಧಿಗೆ ಸರ್ವರ ಸಹಭಾಗಿತ್ವ, ಮಾನವೀಯತೆ ಅಗತ್ಯವಾಗಿದೆ. ಈಗ ನಡೆಯುತ್ತಿರುವ ಹಿಂಸಾಚಾರ ಕೃತ್ಯವನ್ನು ನೋಡಿದರೆ ಪಾಕಿಸ್ತಾನದಲ್ಲಿ ಮನುಷ್ಯತ್ವ ಮರೆಯಾಗಿದೆ ಕ್ರೌರ್ಯ ತಾಂಡವಾಡುತ್ತಿದೆ ಅಜ್ಞಾನ ಅವಿವೇಕ ಪ್ರದರ್ಶನವಾಗುತ್ತಿದೆ. ಇದರಿಂದ ಹೊರಬರಲು ಅವರಿಗೆ ನಿಜವಾದ ಮಹಮ್ಮದ್ ಪೈಗಂಬರ್ ಕುರಾನ್ ಇಸ್ಲಾಂ ತತ್ವವನ್ನು ಬೋಧಿಸುವ ಉತ್ತಮ ಧಾರ್ಮಿಕರು ಅವಶ್ಯಕವಾಗಿದೆ ಎಂದರು.

ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಮಾತನಾಡಿ, ಸುಜ್ಞಾನ ಸಂಗಮ ಕೇವಲ ಜ್ಞಾನಕ್ಕೆ ಆಧ್ಯಾತ್ಮಕ್ಕೆ ಜೊತೆ ಜೊತೆಗೆ ರೈತರಿಗೆ ಯಾವ ಬೆಳೆಯನ್ನು ಯಾವ ಭೂಮಿಯಲ್ಲಿ ಹಾಕಬೇಕೆಂಬ ಅರಿವನ್ನು ಮೂಡಿಸುವ ಯುವಕರಿಗೆ ದುಶ್ಚಟ ದುರಭ್ಯಾಸದಿಂದ ದೂರವಿದ್ದು ಅಧ್ಯಯನ ಮಾಡುವ ಅರಿವನ್ನು ಬಿತ್ತುವ ಕಾರ್ಯಕ್ರಮವಾಗಿದೆ ಎಂದರು.

ಹಳ್ಳಿಗಳ ಪ್ರಗತಿಯಾಗಲೆಂದು ಶ್ರೀಮಠದಿಂದ ಎಚ್.ರೊಪ್ಪ ಗ್ರಾಮಕ್ಕೆ ಎರಡು ಲಕ್ಷ ರು. ಚೆಕ್‌ನ್ನು ಹಸ್ತಾಂತರ ಮಾಡಲಾಯಿತು.

ದ್ವಿತೀಯ ಪಿಯುಸಿಯಲ್ಲಿ ಹೊಸದುರ್ಗ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ನಾಲ್ಕನೇ ಸ್ಥಾನ ಪಡೆದ ಅನುಷಾ ಜೆ. ಅವರಿಗೆ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಚಿರಾಕ್ಷರ ಅವರಿಗೆ ಶ್ರೀಮಠದಿಂದ ಸನ್ಮಾನದ ಆಶೀರ್ವಾದ ಮಾಡಲಾಯಿತು

ಕಾರ್ಮಿಕ ದಿನಾಚರಣೆ ಪ್ರಯುಕ್ತ ಹೊಸದುರ್ಗ ಕಾರ್ಮಿಕ ಸಂಘದ ಅಧ್ಯಕ್ಷರಾದ ರಂಗಸ್ವಾಮಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ಓಂಕಾರಪ್ಪ, ಮುಖಂಡರಾದ ಬಿ.ಎಸ್.ದ್ಯಾಮಣ್ಣ. ಕೋಡಿಹಳ್ಳಿ ತಮ್ಮಣ್ಣ. ಸಮಾಜದ ಅಧ್ಯಕ್ಷರಾದ ಕಲ್ಕೆರೆ ಶೇಖರಪ್ಪ. ಉಪಾಧ್ಯಕ್ಷರಾದ ಧರಣಪ್ಪ. ಕಾರ್ಯದರ್ಶಿ ತಣಿಗೆಕಲ್ಲು ಲೋಕಣ್ಣ. ನಿವೃತ್ತ ಶಿಕ್ಷಕರಾದ ತಣಿಗೇಕಲ್ಲು ತಿಪ್ಪೇಸ್ವಾಮಿ. ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್. ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘದ ಪದಾಧಿಕಾರಿಗಳು. ಸಂಗಮೇಶ್ವರ ಸಮುದಾಯ ಭವನ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.