ಸಾರಾಂಶ
ಯ್ಯೂಟ್ಯೂಬರ್ ಸಮೀರ್ ಎಲ್ಲಿಂದಲೋ ಬಂದು ಧರ್ಮಸ್ಥಳದ ವಿಚಾರದಲ್ಲಿ ಮಾತನಾಡಿದ್ದಾನೆ. ಇನ್ನು ಮುಂದೆ ಹಿಂದೂ ಸಮಾಜದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಆತನನ್ನು ಜೀವಮಾನವಿಡೀ ಸುಮ್ಮನೆ ಬಿಡುವುದಿಲ್ಲ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಯಶ್ಪಾಲ್ ಎಚ್ಚರಿಸಿದ್ದಾರೆ.
ಉಡುಪಿ : ಧರ್ಮಸ್ಥಳದ ಬಗ್ಗೆ ಸುಳ್ಳು ವಿಡಿಯೋ ಯ್ಯೂಟ್ಯೂಬರ್ ಸಮೀರ್ ಅತ ಎಲ್ಲೋ ಇದ್ದುದರಿಂದ ಬಚಾವಾಗಿದ್ದಾನೆ, ಉಡುಪಿಯಲ್ಲಿ ಇದ್ದಿದ್ದರೇ ಮಲ್ಪೆ ಬೀಚಲ್ಲಿ ಆತನನ್ನು ಫುಟ್‌ಬಾಲ್ ರೀತಿಯಲ್ಲಿ ಒದೆಯುತಿದ್ದೇವು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್ಪಾಲ್, ಯ್ಯೂಟ್ಯೂಬರ್ ಸಮೀರ್ ಎಲ್ಲಿಂದಲೋ ಬಂದು ಧರ್ಮಸ್ಥಳದ ವಿಚಾರದಲ್ಲಿ ಮಾತನಾಡಿದ್ದಾನೆ. ಧರ್ಮಸ್ಥಳ ಕ್ಷೇತ್ರ, ವೀರೇಂದ್ರ ಹೆಗ್ಗಡೆ, ಹಿಂದೂ ಸಮಾಜ, ನಮ್ಮ ನಾಯಕರ ಬಗ್ಗೆ ಟೀಕೆ ಮಾಡಿದ್ದಾನೆ.
ಇನ್ನು ಮುಂದೆ ಹಿಂದೂ ಸಮಾಜದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಆತನನ್ನು ಜೀವಮಾನವಿಡೀ ಸುಮ್ಮನೆ ಬಿಡುವುದಿಲ್ಲ. ಧರ್ಮಸ್ಥಳ, ಧರ್ಮಾಧಿಕಾರಿಗಳ ಬಗ್ಗೆ ಟೀಕೆ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದವರು ತೀವ್ರವಾಗಿ ಎಚ್ಚರಿಕೆ ನೀಡಿದ್ದಾರೆ.
ಧರ್ಮಸ್ಥಳದ ಪ್ರಕರಣದ ತನಿಖೆಯಿಂದ ಬಹಳಷ್ಟು ವಿಚಾರಗಳು ಬಹಿರಂಗವಾಗಿವೆ. ಇದು ಹಿಂದೂ ಧರ್ಮ, ಈ ಮಣ್ಣಿಗೆ ಸಿಕ್ಕ ಗೆಲುವು ಎಂದವರು ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಇತರರನ್ನ ಬಳಸಿರುವುದು ಈ ಪ್ರಕರಣದಲ್ಲಿ ನಡೆದಿದ್ದು, ಅದೆಲ್ಲ ಬಹಿರಂಗವಾಗಿ ಎಲ್ಲರಿಗೂ ಸರಿಯಾದ ಪಾಠ ಕಲಿಸಿದೆ ಎಂದವರು ಹೇಳಿದ್ದಾರೆ.