ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು ಇಂತಹ ಸುಕ್ಷೇತ್ರದ ಮೇಲೆ ಕೆಲ ವ್ಯಕ್ತಿಗಳು ಷಡ್ಯಂತ್ರದ ಮೂಲಕ ಮಸಿ ಬಳಿಯುವ ಕೆಲಸಕ್ಕೆ ಮುಂದಾಗಿದ್ದು ಹಿಂದೂ ಭಾವನೆಗಳನ್ನು ಮಟ್ಟಹಾಕುವ ಹುನ್ನಾರ ನಡೆಸುತ್ತಿದ್ದು ಇಂತಹವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಆಗ್ರಹಿಸಿದರು.
ಕನ್ನಡಪ್ರಭವಾರ್ತೆ ತಿಪಟೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು ಇಂತಹ ಸುಕ್ಷೇತ್ರದ ಮೇಲೆ ಕೆಲ ವ್ಯಕ್ತಿಗಳು ಷಡ್ಯಂತ್ರದ ಮೂಲಕ ಮಸಿ ಬಳಿಯುವ ಕೆಲಸಕ್ಕೆ ಮುಂದಾಗಿದ್ದು ಹಿಂದೂ ಭಾವನೆಗಳನ್ನು ಮಟ್ಟಹಾಕುವ ಹುನ್ನಾರ ನಡೆಸುತ್ತಿದ್ದು ಇಂತಹವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಆಗ್ರಹಿಸಿದರು. ನಗರದ ತಮ್ಮ ಗೃಹಕಚೇರಿಯಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರದ ಮೇಲೆ, ಹಿಂದೂ ಸಂಸ್ಕೃತಿಯ ಮೇಲೆ ಧಕ್ಕೆ ಉಂಟು ಮಾಡಿದರೆ ಹಿಂದೂಗಳು ಸುಮ್ಮನಿರುವುದಿಲ್ಲ. ತಮ್ಮ ಕಷ್ಟಗಳನ್ನು ಪರಿಹರಿಸಲೆಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಸ್ತೋಮ ನಡೆದುಕೊಳ್ಳುತ್ತಿದೆ. ಯಾರೋ ಅನಾಮಿಕ ವ್ಯಕ್ತಿಯ ಮಾತುಕೇಳಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿ ಗುಂಡಿಗಳನ್ನು ತೆಗೆದು ಸುಮ್ಮನಾಗಿದೆ. ಒಬ್ಬ ಅನಾಮಿಕ ಒಂದು ತಲೆಬುರುಡೆಯನ್ನು ತಂದಿದ್ದಾನೆ ಎಂದರೆ ಮೊದಲು ಅವನ ವಿಚಾರಣೆ ಮಾಡಬೇಕಿತ್ತು. ಪೊಲೀಸರ ಒಪ್ಪಿಗೆ ಇಲ್ಲದೇ ಈ ರೀತಿ ಅಸ್ತಿಪಂಜರ ತರುವಂತಿಲ್ಲ. ಕಾನೂನಿಗೆ ವಿರುದ್ದವಾಗಿ ಇದನ್ನು ಎಲ್ಲಿಂದ ತಂದ, ಇದು ಯಾರದ್ದು ಎಂದು ತನಿಖೆಯನ್ನು ಆ ವ್ಯಕ್ತಿಯಿಂದಲೇ ಪ್ರಾರಂಭಿಸಬೇಕಿತ್ತು. ಆದರೆ ಯಾವಾಗ ಜನರು ಇದರ ವಿರುದ್ದ ತಿರುಗಿ ಬಿದ್ದರೋ ಸರ್ಕಾರ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತರಗೊಳಿಸಿದೆ. ಮೊದಲು ಅನಾಮಿಕ ವ್ಯಕ್ತಿಯನ್ನು ವಿಚಾರಣೆ ಮಾಡಿದರೆ ಸತ್ಯ ಬೆಳಕಿಗೆ ಬರಲಿದ್ದು ಇಲ್ಲಿನ ಧರ್ಮಾಧಿಕಾರಿಗಳು ಮೊದಲು ಈತನ ವಿರುದ್ದ ದೂರು ದಾಖಲಿಸಿದರೆ ಅಪಪ್ರಚಾರ ಮಾಡಿದವರು ಬಯಲಿಗೆ ಬರಲಿದ್ದಾರೆ ಎಂದರು.ಇಲ್ಲಿನ ಶಾಸಕರು ತಾಲೂಕಿಗೆ ಹೇಮೆ ನೀರು ಹರಿಯುತ್ತಿದ್ದರೂ ತಿಪಟೂರು ಅಮಾನಿಕೆರೆ ದುರಸ್ಥಿ ನೆಪದಲ್ಲಿ ಕೆರೆಗೆ ನೀರು ತುಂಬಿಸಿಲ್ಲ. ಮುಂದಿನ ಮಾರ್ಚ್‌ನಲ್ಲಿ ಕೆರೆ ರಿಪೇರಿ ಮಾಡಿಸಿಕೊಳ್ಳಬಹುದಿತ್ತು. ಶಾಸಕರು ಜನರ ಹಿತದೃಷ್ಟಿಯನ್ನು ಮರೆತಿದ್ದು ಯಾವ ಉದ್ದೇಶದಿಂದ ನೀರು ತುಂಬಿಸುತ್ತಿಲ್ಲವೋ ತಿಳಿಯುತ್ತಿಲ್ಲ. ಮೊದಲು ತಿಪಟೂರು ಅಮಾನಿಕೆರೆ ನೀರು ತುಂಬಿಸುವಂತೆ ಒತ್ತಾಯಿಸಿದರು.ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಗೆ ಮತ್ತೆ ನಗರದ ಯುಜಿಡಿ ನೀರು ಮಿಶ್ರಣವಾಗುತ್ತಿದ್ದು ನಾಗರೀಕರಿಗೆ ಶುದ್ಧ ನೀರು ಕೊಡುತ್ತೇನೆ ಎಂದು ಹೇಳಿದ ಶಾಸಕರು ಮತ್ತೆ ಯುಜಿಡಿ ನೀರನ್ನು ಕುಡಿಸುತ್ತಿದ್ದಾರೆ. ಕೋಟ್ಯಂತರ ರು ಖರ್ಚು ಮಾಡಿದರೂ ಜನತೆಗೆ ನೀರು ಕೊಡುವಲ್ಲಿ ಶಾಸಕರು ವಿಫಲರಾಗಿದ್ದು ಮುಂದೆ ಯಾವ ಪರ್ಯಾಯ ವ್ಯವಸ್ಥೆ ಕೈಗೊಳ್ಳುವರು ಎಂದು ಶಾಸಕರೇ ಉತ್ತರ ನೀಡಬೇಕು. ಇಲ್ಲವಾದಲ್ಲಿ ತಾಲೂಕು ಆಡಳಿತದ ವೈಫಲ್ಯ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ಗಣೇಶ ಪ್ರತಿಷ್ಠಾಪನೆಗೆ ನಿಯಮ ಸಡಿಲಿಸಿ : ಗೌರಿ-ಗಣೇಶ ಹಬ್ಬ ಬರುತ್ತಿದ್ದು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಗಣೇಶ ಪ್ರತಿಷ್ಠಾಪನೆ ಸಂಬಂಧ ಕೆಲ ನೀತಿ ನಿಯಮಗಳನ್ನು ಹಾಕಿ ಸಂಭ್ರಮಕ್ಕೆ ಕಡಿವಾಣ ಹಾಕಬಾರದು. ಇದು ಹಿಂದೂಗಳ ಧಾರ್ಮಿಕ ಹಬ್ಬವಾಗಿದ್ದು ದೇವಸ್ಥಾನ, ಮನೆ, ಮಂದಿರಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ಸಂತಸದಿಂದ ಪೂಜೆ ಸಲ್ಲಿಸುವುದರಿಂದ ನಿಯಮಗಳನ್ನು ಸಡಿಲಿಸಿದರೆ ಅನುಕೂಲವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನಟರಾಜು, ಮುಖಂಡರಾದ ಶಿವಸ್ವಾಮಿ, ಕಂಚಾಘಟ್ಟ ರಾಜು, ರಾಜಶೇಖರ್ ಮತ್ತಿತರರಿದ್ದರು.