ಬ್ರಾಹ್ಮಣ ಸಮಾಜ ಸಂಘಟಿತವಾಗದಿದ್ದರೆ ಸಂಕಷ್ಟ ಎದುರಿಸಬೇಕಾದೀತು-ವಸಂತ

| Published : Jun 10 2024, 12:46 AM IST

ಬ್ರಾಹ್ಮಣ ಸಮಾಜ ಸಂಘಟಿತವಾಗದಿದ್ದರೆ ಸಂಕಷ್ಟ ಎದುರಿಸಬೇಕಾದೀತು-ವಸಂತ
Share this Article
  • FB
  • TW
  • Linkdin
  • Email

ಸಾರಾಂಶ

ಉಳಿದೆಲ್ಲ ಸಮುದಾಯಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜ ಗಟ್ಟಿಯಾಗಿ ಸಂಘಟನೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ಬ್ರಾಹ್ಮಣ ಸಮುದಾಯವನ್ನು ಎಲ್ಲರೂ ಗೌರವದ ಸ್ಥಾನದಲ್ಲಿ ಕಾಣುವಂತಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ವಸಂತ ಮೊಕ್ತಾಲಿ ಹೇಳಿದರು.

ಹಾನಗಲ್ಲ: ಉಳಿದೆಲ್ಲ ಸಮುದಾಯಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜ ಗಟ್ಟಿಯಾಗಿ ಸಂಘಟನೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ಬ್ರಾಹ್ಮಣ ಸಮುದಾಯವನ್ನು ಎಲ್ಲರೂ ಗೌರವದ ಸ್ಥಾನದಲ್ಲಿ ಕಾಣುವಂತಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ವಸಂತ ಮೊಕ್ತಾಲಿ ಹೇಳಿದರು.ಭಾನುವಾರ ಪಟ್ಟಣದ ಶ್ರೀ ಶಂಕರ ಮಂಗಲ ಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಸಮಾಜ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮವರನ್ನು ನಾವು ಗುರುತಿಸಿ ಗೌರವಿಸುವ ಕೆಲಸ ಸಮಾಜದಿಂದ ನಡೆಯಬೇಕು. ನಮ್ಮ ಸಮುದಾಯದ ಬಗ್ಗೆ ಯಾರೊಬ್ಬರೂ ಅವಹೇಳನಕಾರಿ ಹೇಳಿಕೆ ನೀಡುವುದನ್ನು ಸಹಿಸುವುದು ಬೇಡ, ಅದನ್ನು ಖಂಡಿಸಿ ನಮ್ಮ ಶಕ್ತಿಯನ್ನು ತೋರಿಸೋಣ. ಬ್ರಾಹ್ಮಣ ಸಮುದಾಯ ಬುದ್ಧಿ ಶಕ್ತಿಯ ಮೇಲೆ ಬೆಳೆದು ನಿಂತಿದೆ. ಬೇರೆಯವರ ಅನುಕಂಪ, ಸಹಾಯ ಬಯಸದೇ ಸ್ವಾಭಿಮಾನಿಯಾಗಿ ಬದುಕುತ್ತಿದ್ದೇವೆ. ವಿವಿಧ ಧಾರ್ಮಿಕ ಚಟುವಟಿಕೆಗಳ ಮೂಲಕ ನಮ್ಮತನವನ್ನು ಪ್ರದರ್ಶಿಸುವ ಅಗತ್ಯವಿದೆ. ನಮ್ಮ ಸಮಾಜದ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಆಗಾಗ್ಗೆ ಹಲವು ಚಿಂತನೆಗಳನ್ನು ನಡೆಸಿ ಆರ್ಥಿಕವಾಗಿ ಕೆಳಸ್ಥರದಲ್ಲಿರುವ ಕುಟುಂಬಗಳ ವಿದ್ಯಾರ್ಥಿಗಳನ್ನು ಮೇಲೆತ್ತುವ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸೋಣ. ಜಿಲ್ಲಾ ಮಟ್ಟದಲ್ಲೂ ಉತ್ತಮ ಸಾಧನೆ ತೋರಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ತಾಲೂಕು ಘಟಕಗಳಿಂದ ವಿದ್ಯಾರ್ಥಿಗಳ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಕರೆ ಹೇಳಿದರು.ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ಪ್ರಭಾಕರರಾವ್ ಮಂಗಳೂರ ಮಾತನಾಡಿ, ನಮ್ಮ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ಪ್ರೋತ್ಸಾಹಿಸಿ ಅವರ ಅಗತ್ಯತೆಗಳನ್ನು ಪೂರೈಸುವತ್ತ ಮಹಾಸಭಾ ಕಾರ್ಯಪ್ರವೃತ್ತವಾಗಿದೆ. ತ್ರಿಮತಸ್ಥ ಬ್ರಾಹ್ಮಣರೆಲ್ಲರೂ ಒಟ್ಟಾಗಿ ಸಂಘಟನೆಯ ಬಲ ಹೆಚ್ಚಿಸಬೇಕಿದೆ. ಇದಕ್ಕೆ ಹಾನಗಲ್ಲ ತಾಲೂಕು ಮಾದರಿಯಾಗಿದೆ. ಜಿಲ್ಲೆಯಲ್ಲಿ ಬ್ರಾಹ್ಮಣ ಸಮಾಜದ ಕುಟುಂಬಗಳ ಜನಗಣತಿ, ಮಾಹಿತಿ ಸಂಗ್ರಹಣೆ ಕಾರ್ಯ ಆರಂಭಿಸಬೇಕಾಗಿದೆ. ಹಾವೇರಿಯಲ್ಲಿ ನಮ್ಮ ಸಮುದಾಯಕ್ಕಾಗಿ ೧೦ ಗುಂಟೆ ನಿವೇಶನ ಮಂಜೂರಾಗಿದ್ದು, ಈ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಅದಕ್ಕೆ ಎಲ್ಲ ತಾಲೂಕುಗಳ ಸಮಾಜ ಬಾಂಧವರಿಂದ ಆರ್ಥಿಕ ಸಹಾಯ ಪಡೆಯಬೇಕಾಗಿದೆ. ವಿಪ್ರ ಸಮುದಾಯದ ಪ್ರತಿಭಾನ್ವಿತರು ವಿದೇಶಗಳಿಗೆ ಉದ್ಯೋಗಕ್ಕಾಗಿ ತೆರಳುತ್ತಿದ್ದು, ಅವರ ವೃದ್ಧ ಪಾಲಕರಿಗೆ ಮನೋಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕಿದೆ. ಅಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸಮಾಜವನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಒಟ್ಟುಗೂಡಿಸಿ ಹೊಸ-ಹೊಸ ಚಿಂತನೆ, ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ವಿವರಿಸಿದರು.ಪ್ರತಿಭಾ ಪುರಸ್ಕಾರ:ಬ್ರಾಹ್ಮಣ ಮಾಹಾಸಭಾ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಪ್ರತೀಕ ದೇಶಪಾಂಡೆ, ತನ್ಮಯಿ ಮಡಿ, ನಿಖಿತಾ ಕುಲಕರ್ಣಿ, ಅನುಶ್ರೀ ಕರಗುದರಿ, ಶಾಮಲಾ ನಾಡಿಗೇರ, ಭೂಮಿಕಾ ಪಾರಗಾಂವಕರ, ವಿಜೇತಾ ಕುಲಕರ್ಣಿ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಹಾಸಭಾ ತಾಲೂಕು ಅಧ್ಯಕ್ಷ ಟಿ.ಆರ್. ವೇದಂಭಟ್‌ನವರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಉದಯ ನಾಸಿಕ ಪ್ರಾಸ್ತಾವಿಕ ಮಾತನಾಡಿದರು. ಗಣ್ಯರಾದ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಶಿವಪೂಜಿ, ಕೆ.ಎಸ್. ಕುಲಕರ್ಣಿ, ಎಲ್.ಎಂ. ದೇಸಾಯಿ, ಮಧುಲಿಕಾ ದೇಸಾಯಿ, ವಾಸಂತಿ ಕುಲಕರ್ಣಿ, ಜಿ.ಆರ್. ಪೋತದಾರ, ಮನೋಜ ದೇಸಾಯಿ, ರವೀಂದ್ರ ದೇಶಪಾಂಡೆ, ರವಿ ಪೋತದಾರ, ವಿಜಯೇಂದ್ರ ಕನವಳ್ಳಿ, ಜಿ.ಎಸ್. ದೇಶಪಾಂಡೆ, ವಿನಯ ಬಂಕನಾಳ, ಪ್ರದೀಪ ಬಾಳಿಹಳ್ಳಿ, ಗುರುನಾಥ ಕುಲಕರ್ಣಿ, ರಂಜಿತಾ ಕುಲಕರ್ಣಿ ವೇದಿಕೆಯಲ್ಲಿದ್ದರು. ವಾಣಿ ಪೂಜಾರ ಹಾಗೂ ಗಿರೀಶ ದೇಶಪಾಂಡೆ ಕಾರ್ಯಕ್ರಮ ನಿರ್ವಹಿಸಿದರು.