ಪೌರ ಕಾರ್ಮಿಕರು ನೆಮ್ಮದಿಯಾಗಿದ್ದರೆ ನಗರವೂ ಸುಂದರ

| Published : Sep 02 2025, 12:00 AM IST

ಪೌರ ಕಾರ್ಮಿಕರು ನೆಮ್ಮದಿಯಾಗಿದ್ದರೆ ನಗರವೂ ಸುಂದರ
Share this Article
  • FB
  • TW
  • Linkdin
  • Email

ಸಾರಾಂಶ

ನಗರ ಸೌಂದರ್ಯವಾಗಿ ಇರಬೇಕೆಂದರೆ ಪೌರಕಾರ್ಮಿಕರು ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಜಿ.ಪಂ. ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ತಿಳಿಸಿದರು. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸು ವಿದ್ಯಾವಂತರನ್ನಾಗಿ ಮಾಡಿ, ನಿವು ಮಾಡುವ ನಿತ್ಯ ಸೇವೆಯಿಂದ ನಿಮಗೆ ಒಳಿತಾಗಲಿದೆ. ಎಲ್ಲಾ ಮಹಿಳಾ ಪೌರಕಾರ್ಮಿಕರಿಗೆ ಒಟ್ಟಾಗಿ ಬಾಗಿನ ನೀಡುವ ಅವಕಾಶ ನನಗೆ ದೊರೆತಿದ್ದು ಸೌಭಾಗ್ಯ ಹಾಗೂ ಸಂತೋಷ ತಂದಿದೆ.

ಚನ್ನರಾಯಪಟ್ಟಣ: ನಗರ ಸೌಂದರ್ಯವಾಗಿ ಇರಬೇಕೆಂದರೆ ಪೌರಕಾರ್ಮಿಕರು ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಜಿ.ಪಂ. ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ತಿಳಿಸಿದರು.

ಅವರು ತಮ್ಮ ನಿವಾಸದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಗೌರಿ ವ್ರತಾಚರಣೆ ಅಂಗವಾಗಿ ಬಾಗಿನ ನೀಡಿ ಅವರು ಮಾತನಾಡಿದರು, ಗೌರಿ ಗಣೇಶ ಹಬ್ಬದಲ್ಲಿ ಸಹೋದರರು ಬಾಗಿನ ನೀಡುತ್ತಾರೆ. ಇದೇ ಸಂಪ್ರದಾಯವನ್ನು ಪಾಲಿಸುವ ಉದ್ದೇಶದಿಂದ ಪೌರಕಾರ್ಮಿಕರಿಗೆ ಬಾಗಿ ನೀಡಲಾಗುತ್ತಿದೆ. ಮಹಿಳಾ ಪೌರಕಾರ್ಮಿಕರು ನೆಮ್ಮದಿಯಾಗಿದ್ದರೆ ಕುಟುಂಬ ಉತ್ತಮವಾಗಿ ಇರುತ್ತದೆ ಹಾಗೂ ನಗರವಾಸಿಗಳಾದ ನಾವು ಸಂತೋಷದಿಂದ ಇರಬಹುದು ಎಂದು ಹೇಳಿದರು. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸು ವಿದ್ಯಾವಂತರನ್ನಾಗಿ ಮಾಡಿ, ನಿವು ಮಾಡುವ ನಿತ್ಯ ಸೇವೆಯಿಂದ ನಿಮಗೆ ಒಳಿತಾಗಲಿದೆ. ಎಲ್ಲಾ ಮಹಿಳಾ ಪೌರಕಾರ್ಮಿಕರಿಗೆ ಒಟ್ಟಾಗಿ ಬಾಗಿನ ನೀಡುವ ಅವಕಾಶ ನನಗೆ ದೊರೆತಿದ್ದು ಸೌಭಾಗ್ಯ ಹಾಗೂ ಸಂತೋಷ ತಂದಿದೆ.

ಬಾಗಿನ ಕೊಡುವುದು ಸನಾತನ ಧರ್ಮದಲ್ಲಿ ಕುಟುಂಬವನ್ನು ಬೆಸೆಯುವುದನ್ನು ಕಾಣಬಹುದಾಗಿದೆ. ತವರು ಮನೆಯವರು ನೀಡುವ ಬಾಗಿನಕ್ಕೆ ಬೆಲೆ ಕಟ್ಟಲಾಗುವುದಿಲ್ಲ, ಇಂತಹ ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮಗಳ ಕರ್ತವ್ಯ ಎಂದರು. ಪುರಸಭಾಧ್ಯಕ್ಷ ಕೋಟೆ ಮೋಹನ್ ಇದ್ದರು.