ದೇಶ ಭದ್ರವಾಗಿದ್ದರೆ ಸಾಮಾಜಿಕ ಅಭಿವೃದ್ಧಿ

| Published : Aug 04 2025, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ: ದೇಶ ಭದ್ರವಾಗಿದ್ದರೆ ಮಾತ್ರ ದೇಶವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದುವರಿಯಲು ಸಾಧ್ಯ ಎಂದು ವಿಜಯಪುರ ಡಿವೈಎಸ್ಪಿ ಬಸವರಾಜ ಯಲಿಗಾರ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ: ದೇಶ ಭದ್ರವಾಗಿದ್ದರೆ ಮಾತ್ರ ದೇಶವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದುವರಿಯಲು ಸಾಧ್ಯ ಎಂದು ವಿಜಯಪುರ ಡಿವೈಎಸ್ಪಿ ಬಸವರಾಜ ಯಲಿಗಾರ ಹೇಳಿದರು.

ತಾಲ್ಲೂಕಿನ ಹಳ್ಳದ ಗೆಣ್ಣೂರ ಗ್ರಾಮದಲ್ಲಿ ಶನಿವಾರ ಸೇವಾ ನಿವೃತ್ತರಾದ ಯೋಧ ಸುನೀಲ ಬೆಳ್ಳುಬ್ಬಿ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸೈನಿಕರ ಸೇವೆ, ದೇಶ ಭಕ್ತಿ, ಪ್ರಾಮಾಣಿಕತೆ ಅವರ ಸೇವೆ ದೇಶಕ್ಕೆ ಎಷ್ಟು ಮುಖ್ಯ ಮತ್ತು ದೇಶದ ಪ್ರಗತಿಗೆ ಪ್ರಜೆಗಳಾದ ನಮ್ಮ ಕರ್ತವ್ಯಗಳು ಏನು ಎಂದು ತಿಳಿದು ಸುಭದ್ರವಾದ ಸಮಾಜ ಕಟ್ಟಬೇಕು. ಅಂದಾಗ ದೇಶ ಭದ್ರವಾಗಿಲು ಸಾಧ್ಯ ಎಂದು ತಿಳಿಸಿದರು.ಕೊಲ್ಹಾರ ಹಿರೇಮಠದ ಶ್ರೀಪ್ರಭು ಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಒಬ್ಬ ಸೈನಿಕನ ಸೇವೆ ಯಶಸ್ಸು ಕಾಣಲು ತಂದೆ-ತಾಯಿಗಳ ಹಾಗೂ ಮಡದಿ ಮಕ್ಕಳ ತ್ಯಾಗದ ಫಲವಾಗಿರುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆ.ಎಸ್‌.ನ್ಯಾಮಗೌಡರ, ಸುನೀಲ ಬೆಳ್ಳುಬ್ಬಿ ಅಂತಹ ಒಬ್ಬ ಸೈನಿಕನನ್ನು ಈ ದೇಶಕ್ಕೆ ನೀಡಿರುವ ಅವರ ತಂದೆ ತಾಯಿಯ ತ್ಯಾಗವನ್ನು ನಾವು ಸ್ಮರಿಸಲೇಬೇಕು. ಇಂತಹ ಕಾರ್ಯಕ್ರಮಗಳಿಂದ ಯುವ ಜನತೆಯಲ್ಲಿ ದೇಶ ಭಕ್ತಿ ಹೆಚ್ಚುತ್ತದೆ ಎಂದರು.

ಡೆಪ್ಯುಟಿ ಕಮೀಷನರ್ (ಜಿಎಸ್‌ಟಿ) ಶಂಕರ ಬೆಳ್ಳುಬ್ಬಿ ಮಾತನಾಡಿದರು. ನಿವೃತ್ತ ಡಿವೈಎಸ್ಪಿ ಸೋಮನಿಂಗ ಕುಂಬಾರ, ಬಸವನ ಬಾಗೇವಾಡಿ, ಡಿವೈಎಸ್ಪಿ ಬಿ.ಜೆ.ನಂದಗಾವಿ ಹಾಗೂ ತಹಸೀಲ್ದಾರ್‌ ಎಸ್.ಎಸ್.ನಾಯಕಲಮಠ ಮಾತನಾಡಿದರು. ಸಾಹಿತಿ ಅಶೋಕ ಹಂಚಲಿ ಉಪನ್ಯಾಸ ನೀಡಿದರು. 16 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ಸೈನಿಕ ಸುನೀಲ ಬೆಳ್ಳುಬ್ಬಿಯನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ವೀರಭದ್ರಯ್ಯ ಹಿರೇಮಠ, ಸಿದ್ದಪ್ಪ ಪೂಜಾರಿ, ಜಿಲ್ಲಾ ಯುವ ಪರಿಷತ್ತ ಅಧ್ಯಕ್ಷ ಶರಣು ಸಬರದ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಎಸ್.ಬಿ.ಕೊಟ್ರಶೆಟ್ಟಿ, ನಿವೃತ್ತ ಶಿಕ್ಷಕ ಜಿ.ಬಿ.ಪಾಟೀಲ, ಗ್ರಾಮಸ್ಥರು ಇದ್ದರು.ಈ ವೇಳೆ ಡಾ.ಮಂಜುನಾಥ ಸಂಗಳದ, ಡಾ.ವಿಶ್ವನಾಥ ಪಾಟೀಲ, ಡಾ.ಪ್ರೇಮಗೌಡ ಪಾಟೀಲ, ಡಾ.ಮಹೃದಸಾಧಿಕ್ ಹವಾಲ್ದಾರ್, ವಿದ್ಯಾರ್ಥಿಗಳಾದ ಅಫ್ಘಾನಾ ಬೀಳಗಿ, ವೈಭವಿ ಕೊರ್ತಿ, ವೈಭವಿ ಕೊರ್ತಿ, ಈರಣ್ಣ ಸಂಗಳದ, ಮಲ್ಲಿಕಾರ್ಜುನ ಏಳಂಗಡಿ, ರವಿಕುಮಾರ ಬೆಳ್ಳುಬ್ಬಿ, ಲಾಲಸಾಬ ನದಾಫ, ಸುಜಾತಾ ಬೆಳ್ಳುಬ್ಬಿ, ನಂದಿನಿ ಹೂಗಾರರನ್ನು ಸನ್ಮಾನಿಸಲಾಯಿತು. ವಕೀಲ ಮಹಮ್ಮದಗೌಸ ಹವಾಲ್ದಾರ, ಡಾ.ಮಾಧವ ಗುಡಿ ನಿರೂಪಿಸಿದರು. ಶ್ರೀಕಾಂತ ಪಾರಗೊಂಡ ವಂದಿಸಿದರು.