ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಮಾಜದ ವಿವಿಧ ಕ್ಷೇತ್ರಗಳಲ್ಲಿ 2000-01ನೇ ಸಾಲಿನ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡು, ಸೇವೆ ಮಾಡುತ್ತಾ ಉತ್ತಮ ಜೀವನ ಸಾಗಿಸುತ್ತಾ ಮಾದರಿಯಾಗಿ ಬೆಳೆದು ನಿಂತಿದ್ದಾರೆ. ಎಲ್ಲರಿಗಾಗಿ ತಾನು ಎಲ್ಲರೂ ತನಗಾಗಿ ಎಂಬ ಭಾವ ಮೆರೆದು ಉತ್ತಮ ನಾಗರಿಕರಾಗಿ ಬೆಳೆದುದ್ದು ಹೆಮ್ಮೆಯ ವಿಷಯ ಎಂದು ಹಿರಿಯ ಶಿಕ್ಷಕ ಬಿ.ಎನ್.ಅರಕೇರಿ ಹೇಳಿದರು.ನಗರದ ಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ ನಡೆದ 2000-01ನೇ ಸಾಲಿನ ಎಸ್‌ಸಿಪಿ ಹೈಸ್ಕೂಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹ ಸಮ್ಮಿಲನ ಹಾಗೂ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿದ ಅವರು, ಶಿಷ್ಯಂದಿರು ಗುರುಗಳಿಗಿಂತ ಮೇಲೆತ್ತರದಲ್ಲಿ ಬೆಳೆದು ನಿಂತಾಗ ಆ ಗುರುಗಳಿಗೆ ಆಗುವ ಸಂತೋಷ ಬೇರಾರಿಗೂ ಆಗುವುದಿಲ್ಲ. ಗುರು ಬರೀ ಕಲಿಸುತ್ತಾನೆ ಅದನ್ನು ಗುರುವ್ಯಾಕ್ಯವೆಂದು ತಿಳಿದು ನಡೆಯುವವನು ಜೀವನದಲ್ಲಿ ಉನ್ನತ ಸ್ಥಾನ ಪಡೆಯಲು ಸಾದ್ಯವಾಗುತ್ತದೆ ಎಂದರು. ನಿವೃತ್ತ ಶಿಕ್ಷಕ ಬಿ.ಬಿ.ಹುಬ್ಬಳ್ಳಿ ಮಾತನಾಡಿ, ನನ್ನ ಜೀವನದಲ್ಲಿ ಹೊಸ ಚರಿತ್ರೆ ಉದಯ ಆಗಿದೆ. ವಿದ್ಯಾರ್ಥಿಗಳು ಇಪ್ಪತ್ತನಾಲ್ಕು ವರ್ಷಗಳ ನಂತರ ನಮ್ಮನ್ನು ತಮ್ಮ ಹೃದಯದಾಳದಲ್ಲಿಟ್ಟುಕೊಂಡು ಕರೆಸಿ ಗೌರವಿಸುವ ಕಾರ್ಯ ಮಾಡಿದ್ದೀರಿ ಇದು ನನ್ನ ಜೀವನದ ಮರೆಯಲಾಗದ ಕ್ಷಣ ಎಂದರು.ನಿವೃತ್ತ ಶಿಕ್ಷಕರಾದ ಶ್ರೀಮತಿ ಎಸ್.ಬಿ ಹುಲಕುಂದ ಮಾತನಾಡಿ, ಹರ ಮುನಿದರೆ ಗುರು ಕಾಯುವ, ಗುರು ಮುನಿದರೆ ಹರ ಕಾಯಲಾರ ಅದಕ್ಕೇನೆ ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ ಎಂಬ ನಾನ್ನುಡಿಯಂತೆ ನಾವು ಗುರುವಿನ ಸೇವೆ ಎಷ್ಟೆ ಮಾಡಿದರು ಕಡಿಮೆ ಎಂದರು.ಬಿ.ಡಿ.ಗೋಕಾಕ, ಎಮ್.ಐ.ಡಾಂಗೆ, ಎಸ್.ಬಿ.ಕೊರಿಶೆಟ್ಟಿ, ಎಂ.ಎಚ್.ಕೊಂಟೋಜಿ ಮಾತನಾಡಿದರು. ಡಿ.ಎ.ಬಿಸನಾಳ, ಎಸ್.ಜಿ.ಐಕ್ಯಮಠ, ರಮೇಶ ಬಾಬು , ಕೆ.ಎಸ್.ಭಜಂತ್ರಿ, ಪ್ರಭು ಹಿರೇಮಠ, ರುದ್ರಪ್ಪ ಯರಗಾಣಿ, ಸೊನ್ನದ ವೇದಿಕೆ ಮೇಲೆ ಇದ್ದರು.ಹಳೆಯ ವಿದ್ಯಾರ್ಥಿಗಳಾದ ಸುರೇಶ ಮಡಿವಾಳ ಮಾತನಾಡಿ, ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಹುಟ್ಟಿದ ಪ್ರತಿ ಮಗುವಿನ ಉಜ್ವಲ ಭವಿಷ್ಯ ನಿರ್ಮಾಣದ ಹೊಣೆ ಶಿಕ್ಷಕರ ಮೇಲೆ ನಿಂತಿದೆ. ಶಿಕ್ಷಕರು ನಮಗೆ ಅನೇಕ ವಿಷಯಗಳ ಬಗ್ಗೆ ಜ್ಞಾನ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಿದ್ದಾರೆ ಎಂದರು. ಶಂಕರ ಸೊನ್ನದ, ನಮಗೆ ವಿದ್ಯಾಬುದ್ಧಿ ಹೇಳಿಕೊಟ್ಟು ಅಜ್ಞಾನ ಕಳೆದು ಸುಜ್ಞಾನದ ಕಡೆಗೆ ದಾರಿ ತೋರಿಸಿದ ಎಲ್ಲಾ ಗುರುಗಳಿಗೆ ಅನಂತ ಕೋಟಿ ನಮನಗಳು, ಇದು ನನ್ನ ಜೀವನದ ಸುಮುಧುರ ಕ್ಷಣ ನಾನು ಈ ದಿನ ಎಂದು ಮರೆಯಲಾರೆ ಎಂದರು. ಗೌರಿ ಪಾಟೀಲ ಗುರುಗಳಿಗೆ ಅಭಿನಂದನೆ ತಿಳಿಸಿದರು.ಭವ್ಯ ಮೆರವಣಿಗೆ:
ಬೆಳಗ್ಗೆ 10 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ವಿದ್ಯೆ ಕಳಿಸಿದ ಎಲ್ಲ ಗುರುಗಳನ್ನು ಸಕಲ ಮಂಗಲ ವಾದ್ಯಗಳೊಂದಿಗೆ ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಪುಷ್ಪ ವೃಷ್ಠಿ ಮಾಡಿ ವೇದಿಕೆಗೆ ಕರೆ ತಂದಿದ್ದಕ್ಕೆ ಗುರುಗಳು ಭಾವುಕರಾದರು. ಗುರುಗಳು ಹಾಗೂ ಹಲವು ಸಹ ವಿದ್ಯಾರ್ಥಿಗಳು ಆಗಲಿದ್ದು ಅವರ ಆತ್ಮಕ್ಕೆ ಚಿರ ಶಾಂತಿ ಕೋರಿ ಎಲ್ಲರೂ ಒಂದು ನಿಮಿಷ ಮೌನ ಆಚರಿಸಿದರು. ಎಲ್ಲಾ ಗುರುಗಳಿಗೆ ಸನ್ಮಾನಿಸಿ ಪಾದಪೂಜೆ ಮಾಡಿ, ಗುರುಗಳ ಆಶೀರ್ವಾದ ಪಡೆದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.ಈ ವೇಳೆ ಶ್ರೀಧರ, ಮಾರುತಿ, ಮಹಾಲಿಂಗ, ಪ್ರದೀಪ್, ಪ್ರಕಾಶ, ವಿವೇಕ, ವಿಜಯ್, ಕಿರಣ, ರಾಜು, ಅಸ್ಲಮ್, ಲಕ್ಷ್ಮಣ, ಮಹಾಲಿಂಗ ಸೇರಿದಂತೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರಾದ ಶಿವಲಿಂಗ್ ಸಿದ್ನಾಳ ನಿರೂಪಿಸಿ, ವಂದಿಸಿದರು.