ಕಾಡು ಉಳಿದರೆ ನಾಡು ಉಳಿದಂತೆ: ಮಾಜಿ ಸಚಿವ ಕಳಕಪ್ಪ ಬಂಡಿ

| Published : Jun 15 2024, 01:05 AM IST

ಸಾರಾಂಶ

ಗಜೇಂದ್ರಗಡ ಸ್ಥಳೀಯ ರೋಣ ರಸ್ತೆಯ ಮಾಜಿ ಸಚಿವರ ನಿವಾಸದಲ್ಲಿ ವನಮಹೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಮುಂದಿನ ಪೀಳಿಗೆಗೆ ಉತ್ತಮ ಆಮ್ಲಜನಕ ಜತೆಗೆ ಪರಿಸರ ಉಳಿಸಲು ಸಸಿಗಳನ್ನು ನೆಟ್ಟು ಅರಣ್ಯೀಕರಣಕ್ಕೆ ಮುಂದಾಗುವುದು ನಮ್ಮ ಕರ್ತವ್ಯವಾಗಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಸ್ಥಳೀಯ ರೋಣ ರಸ್ತೆಯ ಮಾಜಿ ಸಚಿವರ ನಿವಾಸದಲ್ಲಿ ಶುಕ್ರವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಉದ್ದೇಶಿಸಿದ ಮಾತನಾಡಿದರು.

ಕಾಡು ಉಳಿದರೆ, ನಾಡು ಉಳಿದಂತೆ ಎಂಬುದು ಇಂದು ಅಕ್ಷರ ಸಹ ಮುಖ್ಯವಾಗಿದೆ. ಪ್ರತಿಯೊಬ್ಬರಿಗೆ ಶಿಕ್ಷಣ, ಆರೋಗ್ಯ ಹಾಗೂ ಅಂತಸ್ತು ಜೀವನದಲ್ಲಿ ಬದುಕು ನಡೆಸಲು ಎಷ್ಟು ಮುಖ್ಯ ಎಂದುಕೊಂಡಿದ್ದಾರೋ ಅದಕಿಂತಲೂ ಮುಖ್ಯವಾದದ್ದು ಎಂದರೆ ಉತ್ತಮ ಪರಿಸರ ಕಾಪಾಡಿಕೊಳ್ಳುವುದು ಎಂಬುದನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಿದೆ. ಮನುಷ್ಯ ಗಳಿಸಿದ್ದನ್ನು ಅನುಭವಿಸಲು ಉತ್ತಮ ಆಮ್ಲಜನಕ ಸಿಗಬೇಕು. ಕೃತಕ ಆಮ್ಲಜನಕ ಉತ್ಪಾದನೆ ಸಾಧ್ಯವಿಲ್ಲ. ಹೀಗಾಗಿ ಪ್ರಕೃತಿ ದತ್ತವಾಗಿ ನಮಗೆ ವರದಂತೆ ಸಿಗುವ ಆಮ್ಲಜನಕವನ್ನು ಪಡೆಯಲು ನಾವು ಇಂದು ಸಸಿಗಳನ್ನು ನೆಡುವುದರ ಜತೆಗೆ ಗಿಡಗಳನ್ನು ರಕ್ಷಿಸುವ ಮೂಲಕ ಪರಿಸರದಲ್ಲಿ ಸಮತೋಲವನ್ನು ಕಾಡಿಕೊಳ್ಳಲು ಮುಂದಾಗಬೇಕು. ಮರಗಳನ್ನು ಬೆಳೆಸುವುದರಿಂದ ಅಂತರ್ಜಲದ ಮಟ್ಟವನ್ನು ಹೆಚ್ಚಿಸಬಹುದು. ಹೀಗಾಗಿ ಜನ್ಮದಿನಾಚರಣೆ, ವಾರ್ಷಿಕೋತ್ಸವ ಸೇರಿ ಇತರ ಸಂದರ್ಭದಲ್ಲಿ ಸಸಿಯನ್ನು ನೆಡಲು ಜನತೆ ಮುಂದಾಗಬೇಕು. ಅಲ್ಲದೆ ಪ್ರತಿ ವಾರ್ಡಿನಲ್ಲಿ ಕನಿಷ್ಟ ೧೦ ಸಸಿಗಳನ್ನು ನೆಡುವುದರ ಜತೆಗೆ ಅವುಗಳ ಪೋಷಣೆಗೆ ಸಾರ್ವಜನಿಕರ ಸಹಕಾರದೊಂದಿಗೆ ಪುರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಮಾತನಾಡಿದರು. ಪುರಸಭೆ ಹಂಗಾಮಿ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಪುರಸಭೆ ಸದಸ್ಯರಾದ ರೂಪೇಶ ರಾಠೋಡ, ಮುದಿಯಪ್ಪ ಮುಧೋಳ, ಯಮನೂರ ತಿರಕೋಜಿ ಹಾಗೂ ಸಿದ್ದಣ್ಣ ಬಳಿಗೇರ, ಅಶೋಕ ವನ್ನಾಲ, ದುರಗಪ್ಪ ಮುಧೋಳ, ಬುಡ್ಡಪ್ಪ ಮೂಲಿಮನಿ ಸೇರಿ ಇತರರು ಇದ್ದರು.