ಸಾರಾಂಶ
ಅಥಣಿ: ಪಕ್ಷ ಜವಾಬ್ದಾರಿ ವಹಿಸಿದರೇ ನೆರೆ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಹೊಗುತ್ತೇನೆ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕಷ್ಟೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಪಕ್ಷ ಜವಾಬ್ದಾರಿ ವಹಿಸಿದರೇ ನೆರೆ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಹೊಗುತ್ತೇನೆ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕಷ್ಟೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ 4 ಭಾರಿ ವಿಧಾನಸಭಾ ಚುನಾವಣೆ, ಮೂರು ಬಾರಿ ಲೋಕಸಭಾ ಚುನಾವಣೆ ಉಸ್ತುವಾರಿ ನೀಡಿದ್ದರಿಂದ ಪ್ರಚಾರಕ್ಕೆ ಹೋಗಿದ್ದೆ. ಸ್ಥಳೀಯ ಉಪಚುನಾವಣೆಯ ಕ್ಷೇತ್ರಗಳಲ್ಲಿ ಪ್ರಚಾರದ ಉಸ್ತುವಾರಿ ನೀಡಿದರೇ ಅಲ್ಲಿಗೆ ಹೋಗುವೆ. ನೆರೆ ಮಹಾರಾಷ್ಟ್ರಕ್ಕೆ ಹೋಗು ಅಂದರೆ ಅಲ್ಲಿಗೂ ಹೊಗುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದಲಾವಣೆ ಪ್ರಶ್ನೆ ಉದ್ಭವಿಸಿಲ್ಲ. ಅದಕ್ಕಾಗಿ ಸಿಎಂ ಬದಲಾವಣೆ ಚರ್ಚೆ ಅನವಶ್ಯಕತೆ. ಈ ದೇಶದಲ್ಲಿ ಯಾರೂ ಬೇಕಾದರೂ ಮುಖ್ಯ ಮಂತ್ರಿಗಳಾಗಬಹುದು. ಸಂವಿಧಾನ ಎಲ್ಲರಿಗೂ ಹಕ್ಕು ನೀಡಿದೆ ಎಂದು ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗಿನ ಬಗ್ಗೆ ಪ್ರಶ್ನೆ ಪ್ರತಿಕ್ರಿಯಿಸಿದರು.ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಸಿಎಂ ಬದಲಾವಣೆಯ ಊಹಾಪೋಹ ಬಗ್ಗೆ ತಮ್ಮ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ, ಅವರ ಮೇಲಿನ ಮುಡಾ ಹಗರಣದ ಆರೋಪ ನಿರಾಧಾರವಾಗಿದ್ದು, ಅವರು ರಾಜೀನಾಮೆ ಕೊಡುವ ಪ್ರಶ್ನೆ ಬರುವುದಿಲ್ಲ. ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ಸದ್ಯ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಅದರ ಬಗ್ಗೆ ಚರ್ಚೆ ಮಾಡುವುದು ಸಮಂಜಸವಲ್ಲ ಎಂದು ಹೇಳಿದರು.