ಸಾರಾಂಶ
ನರಗುಂದ: ಶಿವನ ಜತೆಗೆ ನಮ್ಮನ್ನು ಜೋಡಿಸಿಕೊಂಡಾಗ ಪ್ರತಿಯೊಬ್ಬರಲ್ಲಿ ದೈವಿಶಕ್ತಿ ಜಾಗ್ರತವಾಗುತ್ತದೆ. ಆಗ ಮನುಷ್ಯನನ್ನು ಆವರಿಸಿಕೊಂಡಿರುವ ಕತ್ತಲೆ ದೂರವಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಪ್ರಭಕ್ಕನವರ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ನವರಾತ್ರಿ ಹಬ್ಬದ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ನ್ಯಾಯಬೆಲೆ ಪಡಿತರ ವಿತರಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಆಲಸ್ಯ, ಹುಡುಗಾಟಿಕೆ, ಅನ್ಯಾಯ, ಅಧರ್ಮ ಇಂತಹ ಅನೇಕ ಕತ್ತಲೆಗಳಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ. ಈ ಕತ್ತಲೆಯಿಂದ ಹೊರಬರಲು ನಾವು ನಮ್ಮೊಳಗಿರುವ ಕತ್ತಲೆಯಿಂದ ಹೊರಬರಬೇಕು ಎಂದು ಹೇಳಿದರು.ದೇಶ ಎಷ್ಟು ವಿಶಾಲವೋ ಆಚರಣೆಗಳು ಕೂಡ ಅಷ್ಟೇ ವಿಶಾಲವಾಗಿದೆ. ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ಅದ್ಧೂರಿಯಾಗಿ ನವರಾತ್ರಿ ಹಬ್ಬವನ್ನು ನಮ್ಮ ರಾಜ್ಯದಲ್ಲಿ ಆಚರಿಸುತ್ತಾ ಬಂದಿದ್ದೇವೆ. ನಮ್ಮ ದೇಶದಲ್ಲಿ ಬೇರೆ ಬೇರೆ ಹೆಸರಿನಿಂದ ದೇವಿಯನ್ನು ಪೂಜಿಸುತ್ತೇವೆ. ನವ ದುರ್ಗೆಯರು ಎಂದು ಕರೆಸಿಕೊಳ್ಳುವ ಶಕ್ತಿಯ ಆರಾಧನೆಯೇ ವಿಶೇಷವಾಗಿದೆ. ಅಸುರ ಶಕ್ತಿಯ ಸಂಹಾರಕ್ಕಾಗಿ ದೈವಿಶಕ್ತಿಯ ಅವತರಿಸಿದ ಸಂಕೇತವಾಗಿ ನಾಡದೇವತೆ ಚಾಮುಂಡೇಶ್ವರಿಯ ಹೆಸರಿನಲ್ಲಿ ನವರಾತ್ರಿ ಆಚರಿಸುತ್ತೇವೆ ಎಂದರು.
ನ್ಯಾಯಬೆಲೆ ಅಂಗಡಿ ವಿತರಕ ಜಿ.ವಿ. ಹೊಸಕೇರಿ ಮಾತನಾಡಿ, 40 ವರ್ಷಗಳಿಂದ ಪಡಿತರ ವಿತರಣೆ ಮಾಡುತ್ತಾ ಬಂದಿದ್ದೇವೆ. ಪ್ರತಿದಿನ ಜನರ ಮಧ್ಯೆ ಅಶಾಂತಿ, ಜಗಳ, ಸಮಸ್ಯೆಯಲ್ಲಿ ಬದುಕಿದ್ದೇವೆ. ಆದರೆ ಈಶ್ವರೀಯ ವಿಶ್ವವಿದ್ಯಾಲಯ ನಮ್ಮನ್ನು ಗುರುತಿಸಿ ಶಾಂತಿ ನೆಮ್ಮದಿಯ ಮಾರ್ಗ ತೋರಿಸಿದೆ ಎಂದರು.ಆಹಾರ ನಿರೀಕ್ಷ ಅನಿಲ ಪವಾರ ಮಾತನಾಡಿ, ಸಮಾಧಾನ ಇಲ್ಲದ ಇಂದಿನ ಜೀವನದಲ್ಲಿ ಸಮಾಜಕ್ಕೆ ಒಳ್ಳೆಯ ಸಲಹೆ ನೀಡುವ ಕಾರ್ಯವನ್ನು ಈ ವಿಶ್ವವಿದ್ಯಾಲಯ ಮಾಡುತ್ತಿದೆ. ಶಾಂತಿಯಿಂದ ಬದುಕಲು ಆಧ್ಯಾತ್ಮಿಕ ನುಡಿಗಳು ಅವಶ್ಯವಾಗಿದೆ ಎಂದರು.
ನ್ಯಾಯಬೆಲೆ ಅಂಗಡಿ ವಿತರಕರಾದ ನಿರ್ಮಲಾ ಬಾಳಿಕಾಯಿ, ಕೆ.ಎನ್. ತಿಪ್ಪನಗೌಡ, ಜಮೀರ್ ಜಕಾತಿ, ರಫೀಕ, ಸಂಜು ಸುಳಿಬಾವಿ, ಶರಣು ಕೋಟಿ, ಮಲ್ಲು ಭೂಮಣ್ಣವರ, ಮಾಂತೇಶ ಜಬಂಗಿ, ಸಂಜು ಭೋಸಲೆ, ಮಂಜುನಾಥ ಹಿರೇಮಠ, ಅನುಷಾ ಬಾಳಿಕಾಯಿ ಅವರನ್ನು ಪ್ರಭಕ್ಕನವರು ಸನ್ಮಾನಸಿದರು.ಉಮೇಶ ಸುಬೇದಾರ, ಉಮಾ ನಾಶಿಶೆಟ್ಟರ, ವಿ.ಎನ್. ಕೊಳ್ಳಿಯವರ, ಗಂಗಾ ಸುಬೇದಾರ, ಶಿವಲೀಲಾ ಕೊಳ್ಳಿಯವರು, ತಾನಾಜಿ ಅವತಾಡೆ, ಸುಧಾ ಮುಧೋಳೆ, ಸುಮಿತ್ರ ಬಸಟ್ಟಿ, ಗಂಗಾ ಸುಬೇದಾರ, ನಂದಾ ಕೋರಿ, ಈಶ್ವರೀಯ ಪರಿವಾರದವರು ಇದ್ದರು.