ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ನಮ್ಮ ಜಿಲ್ಲೆ ಫಲವತ್ತಾದ ಭೂಮಿ ಹೊಂದಿದ್ದು ನೀರನ್ನು ಕೊಟ್ಟರೇ ಬಂಗಾರದ ಬೆಳೆ ಬರುತ್ತದೆ ಎಂದು ಸಿದ್ದೇಶ್ವರ ಶ್ರೀಗಳ ನುಡಿಯನ್ನು ಸಚಿವ ಎಂ.ಬಿ.ಪಾಟೀಲರು ಅನುಷ್ಠಾನಗೊಳಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಮ್ಮ ಜಿಲ್ಲೆ ಫಲವತ್ತಾದ ಭೂಮಿ ಹೊಂದಿದ್ದು ನೀರನ್ನು ಕೊಟ್ಟರೇ ಬಂಗಾರದ ಬೆಳೆ ಬರುತ್ತದೆ ಎಂದು ಸಿದ್ದೇಶ್ವರ ಶ್ರೀಗಳ ನುಡಿಯನ್ನು ಸಚಿವ ಎಂ.ಬಿ.ಪಾಟೀಲರು ಅನುಷ್ಠಾನಗೊಳಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.ತಿಕೋಟಾ ಪಟ್ಟಣದಲ್ಲಿ ನಿರ್ಮಿಸಲಾದ ಜಾಕೀರ ಫರ್ಟಿಲೈಜರ್ ಎಜನ್ಸಿಯ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ೨೦೧೩ ರಿಂದ ೨೦೧೮ ರ ಅವಧಿಯಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಜಲ ಸಂಪನ್ಮೂಲ ಖಾತೆ ದೊರೆಯಿತು. ಸುದೈವ ಜಿಲ್ಲೆಗೆ ಕೃಷ್ಣಾ ನದಿಯಿಂದ ನೀರು ಹರಿಸಿದ್ದು ಈಗ ಇತಿಹಾಸ. ಕೆಲಜನ ನಮ್ಮನ್ನು ನೋಡಿ ಕಾಲಲ್ಲಿ ನೀರು ಬಂದವು ಎಂದು ತಮ್ಮ ಪ್ಯಾಂಟನ್ನು ಎತ್ತರಿಸಿ ಕುಹಕ ಮಾಡಿದ್ದರು. ಅಂಥವರಿಗೆ ಈಗ ತಕ್ಕ ಉತ್ತರ ಸಿಕ್ಕಿದೆ. ನೀರಾವರಿ ಸೌಲಭ್ಯ ಹೆಚ್ಚಾಗಿದ್ದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಇಂತಹ ಕೃಷಿ ಪರಿಕರಗಳ ಮಳಿಗೆಗಳು ಹೆಚ್ಚಾಗುತ್ತಿವೆ ಎಂದರು.ಸಾನಿಧ್ಯ ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು, ಅರ್ಕಾಟ ದರ್ಗಾದ ಡಾ.ಸೈಯ್ಯದ ಶಹಾ ತಕಿಪೀರಾಹುಸೇನಿ ಹಾಗೂ ಸೈಯ್ಯದಶಹಾ ಹುಜುರ ಅಹ್ಮದ ಹುಸೇನಿ ಸಜ್ಜಾದ ನಶೀನ ಹಜರತ್ ವಹಿಸಿದ್ದರು.
ಅಧ್ಯಕ್ಷತೆ ಜಾಕೀರ ಸಮೂಹ ಸಂಸ್ಥೆಗಳು ಹಾಗೂಡ+ ಅಧ್ಯಕ್ಷರು ರೈತ ಮಿತ್ರ ಸಹಕಾರಿ ಸಂಘ ಎಚ್.ಎಂ. ಬಾಗವಾನ ವಹಿಸಿದ್ದರು.ನಾಗಠಾಣ ಶಾಸಕ ವಿಠ್ಠಲ ಕಟಕಧೊಂಡ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಡಾ. ಕೌಸರ ನಿಯಾಜ ಅತ್ತಾರ, ಎಲ್.ಎಲ್. ಉಸ್ತಾದ, ಬಸಯ್ಯ ವಿಭೂತಿ, ವ್ಹಿ.ಎಂ. ಪಾಟೀಲ, ಎಮ್.ಎ. ಬಾಗವಾನ, ಎಸ್.ಎಂ. ಪಾಟೀಲ (ಗಣಿಹಾರ) ಎಂ.ಸಿ. ಮುಲ್ಲಾ, ರಾಮು ದೇಸಾಯಿ, ಮಮ್ಮು ಮುಜಾವರ, ಗೌಸ ಬಾಗವಾನ, ತೋಟಗಾರಿಕೆ ಉಪನಿರ್ದೇಶಕ ರಾಹುಲಕುಮಾರ ಭಾವಿದೊಡ್ಡಿ ಹಾಗೂ ಸಹಾಯಕ ನಿರ್ದೇಶಕಿ ಶಾಲಿನಿ ತಳಕೇರಿ ಮುಂತಾದವರು ಹಾಜರಿದ್ದರು. ಸದಾಶಿವ ಮಂಗಸೂಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಭೂಸಗೊಂಡ ನಿರೂಪಿಸಿದರು. ಹುಸೇನಬಾಷಾ ಮುಲ್ಲಾ ವಂದಿಸಿದರು.