ಕೃಷಿಕನ ಬದುಕು ಹಸನಾದರೆ ದೇಶ ಸಮೃದ್ಧಿಯಿಂದಿರಲು ಸಾಧ್ಯ-ಪದ್ಮನಾಭ ಕುಂದಾಪುರ

| Published : Sep 11 2024, 01:12 AM IST / Updated: Sep 11 2024, 01:13 AM IST

ಕೃಷಿಕನ ಬದುಕು ಹಸನಾದರೆ ದೇಶ ಸಮೃದ್ಧಿಯಿಂದಿರಲು ಸಾಧ್ಯ-ಪದ್ಮನಾಭ ಕುಂದಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಕನ ಬದುಕು ಹಸನಾದರೆ ಮಾತ್ರ ದೇಶ ಸಮೃದ್ಧಿಯಿಂದಿರಲು ಸಾಧ್ಯವಾಗುತ್ತಿದ್ದು, ಸರಕಾರಗಳು ಸಕಾಲಿಕವಾಗಿ ರೈತನ ಹಿತಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು ಮಾಜಿ ಜಿಪಂ ಸದಸ್ಯ ಪದ್ಮನಾಭ ಕುಂದಾಪೂರ ತಿಳಿಸಿದರು.

ಹಾನಗಲ್ಲ: ಕೃಷಿಕನ ಬದುಕು ಹಸನಾದರೆ ಮಾತ್ರ ದೇಶ ಸಮೃದ್ಧಿಯಿಂದಿರಲು ಸಾಧ್ಯವಾಗುತ್ತಿದ್ದು, ಸರಕಾರಗಳು ಸಕಾಲಿಕವಾಗಿ ರೈತನ ಹಿತಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು ಮಾಜಿ ಜಿಪಂ ಸದಸ್ಯ ಪದ್ಮನಾಭ ಕುಂದಾಪೂರ ತಿಳಿಸಿದರು.ಹಾಗನಲ್ಲ ತಾಲೂಕಿನ ಬಮ್ಮನಹಳ್ಳಿಯಲ್ಲಿ ಭಾರತೀಯ ಕಿಸಾನ್‌ ಸಂಘದ ತಾಲೂಕು ಘಟಕ ಆಯೋಜಿಸಿದ ಬಲರಾಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಲರಾಮನೆ ಕೃಷಿಯನ್ನು ಕಲಿಸಿದ ದೊಡ್ಡ ಮಹಾತ್ಮಾ. ಅವನನ್ನು ಪೂಜಿಸುವುದು, ಈ ಮೂಲಕ ರೈತರ ಸಂಘಟನೆಗೆ ಒತ್ತು ನೀಡುವ ಅಗತ್ಯವಿದೆ. ಅನ್ನ ನೀಡುವ ರೈತನೆ ಈ ದೇಶ ಶಕ್ತಿ. ಅನ್ನವಿಲ್ಲದೆ ಮನುಷ್ಯನೇ ಬದುಕಲು ಸಾಧ್ಯವಿಲ್ಲ. ಕಾಲ ಕಾಲಕ್ಕೆ ರೈತನ ಸಂಕಷ್ಟಗಳಿಗೆ ಸರಕಾರಗಳು ಸ್ಪಂದಿಸಬೇಕು. ಸಂಘಟನೆಯಿಲ್ಲದೆ ಏನನ್ನೂ ಪಡೆಯಲಾರದ ಸ್ಥಿತಿ ಇದೆ. ಈ ನೆಲೆಯಲ್ಲಿ ಭಾರತೀಯ ಕಿಸಾನ ಸಂಘ ರೈತ ಪರ ಧ್ವನಿಯಾಗಿ ಸೇವೆ ಮಾಡುತ್ತಿದೆ ಎಂದರು.ಜಿಲ್ಲಾಧ್ಯಕ್ಷ ಶ್ರೀನಿವಾಸ ಶಿವಪೂಜಿ ಮಾತನಾಡಿ, ರೈತರ ಸಮಸ್ಯೆಗಳ ಪರಿಹಾರಕ್ಕೆ ಭಾರತೀಯ ಕಿಸಾನ ಸಂಘ ಸದಾ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದೆ. ರೈತರು ಈಗ ಸಾವಯವ ಕೃಷಿಯತ್ತ ದಾಪುಗಾಲು ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ಕೃಷಿ ಭೂಮಿಯನ್ನು ರಾಸಾಯನಿಕದಿಂದ ರಕ್ಷಿಸುವ ಕೆಲಸ ಆಗಬೇಕಾಗಿದೆ. ಕೃಷಿ ಕೇವಲ ತಾತ್ಕಾಲಿಕ ಆಸೆಗಳನ್ನು ಈಡೇರಿಸಿಕೊಳ್ಳಲು ಬಳಸಿಕೊಳ್ಳುವುದು ಬೇಡ. ನಾಳೆಯ ಪೀಳಿಗೆಗಾಗಿ ಒಳ್ಳೆಯ ಭೂಮಿಯನ್ನು ಉಳಿಸಿಕೊಳ್ಳಬೇಕಾಗಿದೆ. ರೈತರಿಗೆ ಒಳ್ಳೆಯ ನೀರಾವರಿ ಸೌಲಭ್ಯಗಳು ಸಿಗಬೇಕು. ರೈತರ ಮಕ್ಕಳಿಗೆ ಒಳ್ಳೆಯ ಶಿಕ್ಷಣವೂ ಬೇಕು. ಸರಕಾರಗಳು ಸಾವಯವ ಕೃಷಿಯನ್ನು ಬೆಂಬಲಿಸಲು ಒಳ್ಳೆಯ ಸೌಲಭ್ಯಗಳನ್ನು ನೀಡಬೇಕು ಎಂದರು. ಭಾರತೀಯ ಕಿಸಾನ ಸಂಘದ ತಾಲೂಕು ಅಧ್ಯಕ್ಷ ಬಸವಣ್ಣೆಯ್ಯ ಸಾಲಿಮಠ, ಲೋಕೇಶಣ್ಣ ಹೊಳಲದ, ಅಜ್ಜಪ್ಪ ಮಲ್ಲಮ್ಮನವರ, ಪ್ರಶಾಂತ ಸುಖಾಲೆ, ಅರವಿಂದ ಮಹಾಂತನಮಠ, ಮಂಜು ರಜಪೂತ, ಪ್ರಕಾಶ ಹಾರನಹಳ್ಳಿ, ಮಲಕಣ್ಣ ಹಾವಣಗಿ, ಜಗದೀಶ ಪಾಟೀಲ, ಕುಮಾರ ಹೊಸಮನಿ, ಚಂದ್ರು ಗಾಣಿಗೇರ ಮೊದಲಾದವರು ಈ ಸಂದರ್ಭದಲ್ಲಿದ್ದರು.