ಸಂಘಟನೆ, ಬದ್ಧತೆ ಬಲವಾಗಿದ್ದರೆ ವಿಜಯ ನಿಶ್ಚಿತ

| Published : Feb 13 2024, 12:51 AM IST

ಸಾರಾಂಶ

ಸಂಘಟನೆ ಮತ್ತು ಬದ್ಧತೆ ಎಲ್ಲಿ ಬಲಗೊಂಡಿರುತ್ತದೆಯೋ, ಅಲ್ಲಿ ವಿಜಯ ನಿಶ್ಚಿತವಾಗಿರುತ್ತದೆ ಎಂದು ಬಿಜೆಪಿ ಯುವ ಮುಖಂಡ, ಚಿತ್ರದುರ್ಗ ಲೋಕಸಭಾ ಚುನಾವಣಾ ಸ್ಪರ್ಧಾಕಾಂಕ್ಷಿ ರಘು ಚಂದನ್ ಹೇಳಿದರು.

ಕನ್ನಡಪ್ರಭವಾರ್ತೆ ಹೊಸದುರ್ಗ

ಸಂಘಟನೆ ಮತ್ತು ಬದ್ಧತೆ ಎಲ್ಲಿ ಬಲಗೊಂಡಿರುತ್ತದೆಯೋ, ಅಲ್ಲಿ ವಿಜಯ ನಿಶ್ಚಿತವಾಗಿರುತ್ತದೆ ಎಂದು ಬಿಜೆಪಿ ಯುವ ಮುಖಂಡ, ಚಿತ್ರದುರ್ಗ ಲೋಕಸಭಾ ಚುನಾವಣಾ ಸ್ಪರ್ಧಾಕಾಂಕ್ಷಿ ರಘು ಚಂದನ್ ಹೇಳಿದರು.

ನಗರದಲ್ಲಿ ಸೋಮವಾರ 3ನೇ ಬಾರಿ ಮತ್ತೊಮ್ಮೆ ಮೋದಿ ಎಂಬ ಸಂಘಟನಾತ್ಮಕ ಅಭಿಯಾನದ ನೇತೃತ್ವವಹಿಸಿ ಮಾತನಾಡಿದ ಅವರು, ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಪುನರಾಯ್ಕೆ ಬಯಸಿ ಎಲ್ಲೆಡೆ ಬಿಜೆಪಿ ಕಾರ್ಯಕರ್ತರು ಸಂಘಟನೆ ಬಲಗೊಳಿಸುತ್ತಿದ್ದು, ಈ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ತಂದು ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ ಎಂದರು.ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುವುದೇ ನಮ್ಮ ಗುರಿ. ನಮ್ಮ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅಧಿಕಾರವಹಿಸಿಕೊಂಡ ತರುವಾಯ ಕೇವಲ 70 ದಿನದಲ್ಲಿ 10,000 ಕಿ.ಮೀ ಪ್ರಯಾಣಿಸಿ ನಮ್ಮ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದ್ದಾರೆ. ಅವರ ನೇತೃತ್ವದಲ್ಲಿ ಈ ಬಾರಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ನಿಶ್ಚಿತ ಎಂದರು. ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೊಸದುರ್ಗ ತಾಲೂಕಿನ ಹೆಬ್ಬಳ್ಳಿ, ಮಲ್ಲಪ್ಪನಹಳ್ಳಿ, ಆನಿವಾಳ ಬಾಗೂರು, ಹೊಸದುರ್ಗ, ಮತ್ತೋಡು, ಕಂಚಿಪುರ ಶ್ರೀರಾಂಪುರ, ಬೆಲಗೂರು, ದೊಡ್ಡಘಟ್ಟ, ಜಾನಕಲ್ ಗ್ರಾಮ ಪಂಚಾಯಿತಿ ವಿವಿಧ ಹಳ್ಳಿಗಳ ಕಾರ್ಯಕರ್ತರನ್ನ ಭೇಟಿ ಮಾಡಿ ಸಂಘಟನೆಯ ಬಲಪಡಿಸಲು ಮನವಿ ಮಾಡಿದರು.ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಮಯ್ಯ, ಪುರಸಭಾ ಸದಸ್ಯರಾದ ಶ್ರೀನಿವಾಸ್, ನಾಗರಾಜು, ದೊಡ್ಡಯ್ಯ, ಮುಖಂಡರಾದ ದಿಲ್ಸೆ ದಿಲೀಪ್ ಗುರುಸ್ವಾಮಿ, ಪ್ರವೀಣ್, ಶಿವು ಮಠ, ಮಂಜುನಾಥ್, ಹೆಗ್ಗೆರೆ ಶಂಕ್ರಪ್ಪ, ಪಂಪ, ಮಂಜುನಾಥ್ ಕೊಂಡಾಪುರ, ಸುನಿಲ್ ಮಲ್ಲಪ್ಪನಹಳ್ಳಿ, ಹೇರೂರು ಮಂಜುನಾಥ್, ಕಲ್ಲೇಶ್ ಮತ್ತು ಸಿದ್ದೇಶ್ ಸೇರಿ ಪಕ್ಷದ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.