ಸಾರಾಂಶ
ಹೊಳೆಹೊನ್ನೂರು: ಗ್ರಾಮಸ್ಥರ ಹಾಗೂ ಪೋಷಕರ ಸಹಕಾರವಿದ್ದರೆ ಸರ್ಕಾರಿ ಶಾಲೆಗಳು ಜೀವಂತವಾಗಿರುವುದರಲ್ಲಿ ಎರಡು ಮಾತಿಲ್ಲ ಎಂದು ಹೆಚ್ಚುವರಿ ಜಿಲ್ಲಾ ಉಪ ರಕ್ಷಣಾಧಿಕಾರಿ ಅನಿಲ್‍ಕುಮಾರ್ ಬೊಮ್ಮರೆಡ್ಡಿ ಹೇಳಿದರು.
ಹೊಳೆಹೊನ್ನೂರು: ಗ್ರಾಮಸ್ಥರ ಹಾಗೂ ಪೋಷಕರ ಸಹಕಾರವಿದ್ದರೆ ಸರ್ಕಾರಿ ಶಾಲೆಗಳು ಜೀವಂತವಾಗಿರುವುದರಲ್ಲಿ ಎರಡು ಮಾತಿಲ್ಲ ಎಂದು ಹೆಚ್ಚುವರಿ ಜಿಲ್ಲಾ ಉಪ ರಕ್ಷಣಾಧಿಕಾರಿ ಅನಿಲ್‍ಕುಮಾರ್ ಬೊಮ್ಮರೆಡ್ಡಿ ಹೇಳಿದರು.
ಸಮೀಪದ ನಿಂಬೆಗೊಂದಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ಉತ್ಸಾಹಕ್ಕೆ ಪ್ರೇರಣೆ ನೀಡಿ ಪ್ರೋತ್ಸಾಹಿಸುವುದು ನಮ್ಮೇಲ್ಲರ ಜವಾಬ್ದಾರಿ. ವಿದ್ಯಾರ್ಥಿಗಳು ಓದಿದ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿತರಬೇಕು. ಪ್ರತಿಭಾವಂತರು ದೇಶದ ಬೆನ್ನೆಲುಬು. ಗ್ರಾಮಾಂತರ ಪ್ರದೇಶ ಆರ್ಥಿಕವಾಗಿ, ರಾಜಕೀಯವಾಗಿ, ಗಣನೀಯವಾಗಿ ಬದಲಾವಣೆಯಾಗಿದೆ. ಪ್ರತಿಭೆ ತೋರಿಸಲು ಶಾಲಾ ವಾರ್ಷಿಕೋತ್ಸವಗಳು ಸಹಕಾರಿ ಎಂದರು.
ಗ್ರಾಮಸ್ಥರು ಗ್ರಾಮಗಳ ಶ್ರೇಯೊಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲ. ಶೈಕ್ಷಣಿಕ ಸೇವೆಗಳಿಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಯೊಬ್ಬರು ದೇಶ ಸೇವೆಗೆ ಸಿದ್ಧರಿರಬೇಕು. ಹಳೆ ನೆನಪುಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಸುಂದರ ಕಾರ್ಯಕ್ರಮಗಳು ಯಶಸ್ಬಿಯಾದರೆ ಅಯೋಜಕರಿಗೆ ನೆಮ್ಮದಿ ಸಿಗುತ್ತದೆ ಎಂದರು.ಗ್ರಾಮಾಂತರ ಶಾಸಕಿ ಶಾರದ ಪೂರ್ಯಾನಾಯ್ಕ್, ಗ್ರಾಮಸ್ಥರಿಂದ ಅನೇಕ ಶಾಲೆಗಳಿಗೆ ಮರುಜೀವ ಬಂದಿದೆ. ಶಾಲಾ ಕುಂದುಕೊರತೆ ನಿವಾರಿಸುವ ನಿಟ್ಟಿನಲ್ಲಿ ಯೋಚಿಸಲಾಗಿದೆ. ಶಾಲೆಗಳಲ್ಲಿ ಸಿಬ್ಬಂದಿ ಒಗ್ಗಟಾಗಿದ್ದರೆ ಮಾತ್ರ ಶಾಲೆಗಳು ಅಭಿವೃದ್ಧಿಯಾಗುತ್ತವೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಲಭಿಸಿದರೆ ಮಾತ್ರ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಗ್ರಾಮ ಮುಖಂಡ ಮಹಾದೇವಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಶಾಲಾ ಸಮಿತಿ ಅಧ್ಯಕ್ಷ ಸತೀಶ್, ಮುಖ್ಯಶಿಕ್ಷಕ ನಾಗರಾಜಪ್ಪ, ಸಂಪನ್ಮೂಲ ವ್ಯಕ್ತಿ ಪಂಚಪ್ಪ, ನಿವೃತ್ತ ಶಿಕ್ಷಕ ರಂಗಪ್ಪ, ಪ್ರಕಾಶ್, ಸುರೇಶ್, ನಾಗರಾಜಪ್ಪ, ಕಾವೇರಿ, ಎಸ್.ಪಿ.ರಾಜು, ಶಿವು, ಮಂಜುನಾಥ್, ಮಾರಪ್ಪ ಮತ್ತಿತರರಿದ್ದರು.