ಪಕ್ಷದ ಮುಖಂಡರು ಬಯಸಿದರೆ ಮತ್ತೆ ಅಖಾಡಕ್ಕೆ ಧುಮುಕಲಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ

| Published : Sep 19 2024, 01:53 AM IST / Updated: Sep 19 2024, 01:46 PM IST

ಪಕ್ಷದ ಮುಖಂಡರು ಬಯಸಿದರೆ ಮತ್ತೆ ಅಖಾಡಕ್ಕೆ ಧುಮುಕಲಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಬೆಂಬಲ ನೀಡಿದರೆ ಮತ್ತೆ चुनावಕ್ಕೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

 ಇಂಡಿ : ಕಳೆದ ಬಾರಿ ಚುನಾವಣೆಯಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೆ. ಆದರೆ ಪಕ್ಷದ ಮುಖಂಡರು ಕಾರ್ಯಕರ್ತರು ಆ ಮಾತಿಗೆ ಒಪ್ಪಿಗೆ ನೀಡುತ್ತಿಲ್ಲ. ನನಗೂ ಇನ್ನು ಮುಂದೆ ಗುರಿ ಇದೆ. ಮುಂದೆಯೂ ಪಕ್ಷ ಬಯಸಿದರೆ ಮತ್ತೆ ಅಖಾಡಕ್ಕೆ ಧುಮುಕಲಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ತಾಲೂಕಿನ ಗುಂದವಾನ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುದಾನದಡಿಯಲ್ಲಿ ನಿರ್ಮಿಸಿದ ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟಿಸಿ ಅವರು ಮಾತನಾಡಿದರು. ಗುಂದವಾನ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಆಚೆಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಈಚೆಗೆ ಗ್ರಾಮ ಇರುವುದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಇದನ್ನು ಗಮನಿಸಿ ಗ್ರಾಮದ ಬಳಿಯೇ ಸರ್ಕಾರಿ ಶಾಲೆ ಕಟ್ಟಡ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖಾಂತರ ₹ 2.10 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ. ಇದರಿಂದ ಇಂದು 13 ಕೋಣೆಗಳ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣವಾಗಿದ್ದು ನನ್ನ ಆತ್ಮಕ್ಕೆ ಸಂತೃಪ್ತಿ ತಂದಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಗ್ರಾಮದ ಮುಖಂಡರು ನನ್ನ ಬಳಿ ಬಂದು ಗ್ರಾಮದಲ್ಲಿ ಉತ್ತಮ ಶಾಲೆ ಕಟ್ಟಲು ಅನುದಾನ ಕಲ್ಪಿಸಿಕೊಡಬೇಕು ಎಂದು ಕೇಳಿದರು. ನಾನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾತನಾಡಿ ₹ 2.10 ಕೋಟಿ ಬಿಡುಗಡೆ ಮಾಡಿಸಿದ್ದೇನೆ. ಗ್ರಾಮೀಣ ಭಾಗದಲ್ಲಿಯೂ ಸಹ ನಗರ ಪ್ರದೇಶಗಳಲ್ಲಿನ ರೀತಿ ಕಟ್ಟಡ ನಿರ್ಮಾಣ ಮಾಡಿದ್ದು, ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ ಎಂದರು.

ಸಣ್ಣ ಗ್ರಾಮಕ್ಕೆ ₹ 2.10 ಕೋಟಿ ಅನುದಾನ ತಂದರು ಸಹ ನನ್ನ ಭಾವಚಿತ್ರವನ್ನು ಎಲ್ಲಿಯೂ ಹಾಕಿಕೊಂಡಿಲ್ಲ. ನನಗೆ ಜನರ ಸೇವೆ ಮಾಡುವುದೊಂದೇ ಗುರಿ, ಆ ಕಾರ್ಯಗಳೇ ಇದನ್ನು ಜಿಗಜಿಣಗಿ ಅವರು ಮಾಡಿದ್ದು ಎಂದು ಹೇಳುತ್ತವೆ. ಆದರೆ, ಕೆಲವರಿಗೆ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಆಗಿ ಬರುತ್ತಿಲ್ಲ. ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ರಾಜು ಧರೆಪ್ಪ ವಾಲಿಕಾರ, ಚಡಚಣ ಬಿಇಒ ಹೆಚ್.ಎ. ನಾಯಕ, ಜ್ಞಾನೇಶ್ವರ ಠೋಕೆ, ಕಾಸುಗೌಡ ಬಿರಾದಾರ, ಹಣಮಂತ ಖಡೆಖಡೆ, ಅತ್ತಾರ ಪಟೇಲ, ಮಾದೇವಿ ವಾಲಿಕಾರ ಸಿದ್ದಲಿಂಗ ಖಾನಾಪುರ, ಮಹಾದೇವ ಕದರಿ, ಎ.ಎಂ. ಪಾಟೀಲ, ಚಂದ್ರಕಾಂತ ಪೂಜಾರಿ, ಸಿದ್ದನಗೌಡ ಪಾಟೀಲ,ಎಇಇ ಎಸ್‌.ಆರ್‌. ರುದ್ರವಾಡಿ, ರಾಘವೇಂದ್ರ ಕಾಪಸೆ, ಸಾಹೇಬಗೌಡ ಚೌದರಿ, ಎಂ.ಎಂ. ಗಬಸಾವಳಗಿ, ದೇವೇಂದ್ರ ಕುಂಬಾರ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.