ಸಾರಾಂಶ
ಪ್ರತಿಭಟನೆ ನಡೆಯುವ ಸ್ಥಳದಲ್ಲಿ ಪೊಲೀಸರು ರೈತರನ್ನು ಹಾಗೂ ಮುಖಂಡರನ್ನು ಅರೆಸ್ಟ್ ಮಾಡಿದರೆ ರಾಷ್ವ್ರಿಯ ಹೆದ್ದಾರಿಯಲ್ಲಿ ರೈತರು ಪ್ರತಿಭಟನೆ ಮಾಡುಲು ಸಿದ್ದರಾಗಬೇಕು
ಕನ್ನಡಪ್ರಭ ವಾರ್ತೆ ಗುಬ್ಬಿ
31ರಂದು ಶನಿವಾರ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಹತ್ತಿರ ಬೃಹತ್ ಪ್ರತಿಭಟನೆ ನಡೆಯುವ ಸ್ಥಳದಲ್ಲಿ ಪೊಲೀಸರು ರೈತರನ್ನು ಹಾಗೂ ಮುಖಂಡರನ್ನು ಅರೆಸ್ಟ್ ಮಾಡಿದರೆ ರಾಷ್ವ್ರಿಯ ಹೆದ್ದಾರಿಯಲ್ಲಿ ರೈತರು ಪ್ರತಿಭಟನೆ ಮಾಡುಲು ಸಿದ್ದರಾಗಬೇಕು ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ತಿಳಿಸಿದರು.ಗುಬ್ಬಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಹೇಮಾವತಿ ಕೆನಾಲ್ ಕಾಮಾಗಾರಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲ ರೈತರು ಭಾಗವಹಿಸಿ ಬೆಂಬಲ ಸೂಚಿಸಬೇಕು. ನಮ್ಮ ತಾಲೂಕಿನ ನೀರನ್ನು ನಾವೆಲ್ಲರೂ ಕಾಪಾಡಿಕೊಳ್ಳಬೇಕು. ಶಾಸಕ ಎಸ್ .ಆರ್. ಶ್ರೀನಿವಾಸ್ ಹೇಮಾವತಿ ಎಕ್ಸ್ ಪ್ರಸ್ ಲಿಂಕ್ ವಿರುದ್ಧ ಹೋರಾಟಕ್ಕೆ ಬಂದರೆ ಪಕ್ಷ ಭೇದವಿಲ್ಲದೆ ನಾವುಗಳು ಅವರ ಜೊತೆಯಲ್ಲಿಯೇ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ರೈತ ಸಂಘದ ತಾಲೂಕ್ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಜಿಲ್ಲೆಯ ಸಂಸದರಾದ ಸೋಮಣ್ಣ ನೀರಿಗಾಗಿ ಹೋರಾಟ ಮಾಡಲು ಬರಬೇಕು. ಒಂದು ವೇಳೆ ಇದರಿಂದಾಗಿ ಮಂತ್ರಿಗಿರಿ ಹೋದರೆ ನಾವೆಲ್ಲ ನಿಮ್ಮಜೊತೆಗೆ ನಿಲ್ಲುತ್ತೇವೆ ಎಂದು ಸೋಮಣ್ಣ ಅವರನ್ನು ಹೋರಾಟಕ್ಕೆ ಆಹ್ವಾನಿಸಿದರು. ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಮಂಡ್ಯ ಭಾಗದಲ್ಲಿ ನೀರಿಗಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿ ನೀರನ್ನ ಪಡೆದುಕೊಳುತ್ತಾರೆ. ಆದರೆ ನಮ್ಮಲ್ಲಿ ರೈತರು ಪ್ರತಿಭಟನೆ ಮಾಡಿ ನೀರನ್ನು ಪಡೆದುಕೊಳುವುದಕ್ಕೆ ಎಲ್ಲರು ಒಗ್ಗಾಟಾಗಿ ಬರಬೇಕು.ಪೊಲೀಸರು ಅರೆಸ್ಟ್ ಮಾಡಿದರೆ ಮಾಡಲಿ, ತುಮಕೂರು ಜಿಲ್ಲೆಯಲ್ಲಿ ಮೋಸ ಆಗುತ್ತಿರುವ ಗುಬ್ಬಿ ಜನರಿಗೆ ಮಾತ್ರ. ಈ ಚಿಕ್ಕ ಕಾಲುವೆಯಲ್ಲಿ ರೈತರು ಬದುಕು ಕಟ್ಟಿಕೊಂಡಿದ್ದೇವೆ. 31ರಂದು ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ನಮ್ಮ ನೀರನ್ನು ಪಡೆದುಕೊಳಬೇಕು ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿದರು. ಹೊನ್ನಗಿರಿ ಗೌಡ , ಅ.ನ.ಲಿಂಗಪ್ಪ , ವೆಂಕಟೇಗೌಡ , ಭೈರಪ್ಪ , ಬೆಟ್ಟಸ್ವಾಮಿ , ನಾಗರಾಜು , ಯೋಗಾನಂದ್ ಕುಮಾರ್ , ವಿಜಯ್ ಕುಮಾರ್ , ಸುರೇಶ್ ,ಕಾಡಶೆಟ್ಟಿಹಳ್ಳಿ ಸತೀಶ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.