ಸಾರಾಂಶ
ಅನೇಕ ಸಾಧಕರು ಪಡೆದ ಪ್ರಶಸ್ತಿ, ಸನ್ಮಾನಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ಅರಂತೆ ತಾವುೂ ಸಹ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶಕ್ಕೆ ಕೊಡುಗೆ ನೀಡಬೇಕೆಂಹ ಭಾವನೆಯನನು ಬೆಳೆಸಿಕೊಳ್ಳಬೇಕು. ಒಂದು ವೇಳೆ ವಿದ್ಯಾರ್ಥಿಗಳು ಅಡ್ಡದಾರಿ ಹಿಡಿದರೆ ವೈಯಕ್ತಿ ಬದುಕು ನಾಶವಾಗುವ ಜತೆಗೆ ದೇಶಕ್ಕೂ ನಷ್ಟವಾಗಲಿದೆ.
ಕನ್ನಡಪ್ರಭ ವಾರ್ತೆ ಕೋಲಾರವಿದ್ಯಾರ್ಥಿಗಳು ದೇಶದ ಆಸ್ತಿ ನೀವು ದಾರಿ ತಪ್ಪಿದರೆ ದೇಶದ ಭವಿಷ್ಯಕ್ಕೆ ಕುತ್ತು ಎಂಬುದನ್ನು ಮರೆಯದಿರಿ, ನಿಮ್ಮ ಮುಂದೆ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುತ್ತಿರುವ ಈ ಸನ್ಮಾನ ಗೌರವ ನಿಮ್ಮ ಶೈಕ್ಷಣಿಕ ಸಾಧನೆಗೆ ಸ್ಫೂರ್ತಿಯಾಗಲಿ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಶುಭ ಹಾರೈಸಿದರು.ನಗರದ ಕೋಗಿಲಹಳ್ಳಿಯ ಜ್ಯೋತಿ ಎಜುಕೇಷನ್ ಟ್ರಸ್ಟ್‌ನ ಜನೋಪಕಾರಿ ದೊಡ್ಡಣ್ಣಸ್ವಾಮಿ ರಂಗಮಂದಿರದಲ್ಲಿ ನಡೆದ ಗಾಣಿಗ ಹಾಗೂ ಇತರೆ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಮುದಾಯದ ೯ ಮಂದಿ ಸಾಧಕರಿಗೆ ‘ಜ್ಯೋತಿಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಜ್ಯೋತಿಶ್ರೀ ಪ್ರಶಸ್ತಿ ಪುರಸ್ಕೃತರು
ಇದೇ ಸಂದರ್ಭದಲ್ಲಿ ಗಾಣಿಗ ಸಮುದಾಯದ ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ಶಿಕ್ಷಣ ಇಲಾಖೆ ನಿವೃತ್ತ ರಾಜ್ಯ ನಿರ್ದೇಶಕ ಬಸವರಾಜ್, ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೈಸೂರು ನಿರ್ದೇಶಕ ವಿಜಯಕುಮಾರ್ ನಾಗನಾಳ, ಕಸಾಪ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್,ಕುರುಟಹಳ್ಳಿ ಕೃಷ್ಣಮೂರ್ತಿ ಕೆಜಿಎಫ್‌ನ ಡಾ.ರೋಹಿಣಿ, ಮುಳಬಾಗಿಲು ಶಾರದಾ ಶಿಕ್ಷಣ ಸಂಸ್ಥೆಯ ದೇವರಾಜ್, ಮುಳಬಾಗಿಲು ಶಿಕ್ಷಣ ಸಂಸ್ಥೆ ಸ್ಥಾಪಕ ಚಂದ್ರಶೇಖರ್, ಪ್ರಗತಿಪರ ರೈತರಾದ ಬಾಗೇಪಲ್ಲಿ ವೆಂಕಟೇಶಪ್ಪ ಅವರಿಗೆ ‘ಜ್ಯೋತಿಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಎಂ.ಆರ್.ಗೋಪಾಲಕೃಷ್ಣ ವಹಿಸಿದ್ದರು. ದಾನಿಗಳಾದ ಟ್ರಸ್ಟಿ ವಿ.ಆರ್.ನಾಗರಾಜ್,ಉಪಾಧ್ಯಕ್ಷೆ ಭಾರತಿದೇವಿ, ನಿಕಟಪೂರ್ವ ಅಧ್ಯಕ್ಷ ಕುರುಟಹಳ್ಳಿ ರಾಧಾಕೃಷ್ಣ, ಟ್ರಸ್ಟಿಗಳಾದ ವೆಂಕಟರಾಮ್, ಎಂ.ಜಿ.ವಿ.ಕೃಷ್ಣ, ಮಂಜುನಾಥ್, ರಾಮ್‌ನಾರಾಯಣ್, ಕೆಂಪಣ್ಣ,ಸುರೇಶ್, ಆನಂದ್ ಕುಮಾರ್, ಡಾ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.