ಹಿರಿಯರಿದ್ದರೆ ಮನೆಗೆ ಭೂಷಣ: ಶರಣಬಸವ ದೇವರು

| Published : Jun 12 2024, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಪಾಲಬಾವಿ ಮಠಗಳಲ್ಲಿ ಗುರುಗಳು ಇದ್ದರೆ ಮಠಕ್ಕೆ ಭೂಷಣ, ಮನೆಯಲ್ಲಿ ಹಿರಿಯರಿದ್ದರೆ ಮನೆಗೆ ಭೂಷಣ. ಈ ಜಗತ್ತನ್ನು ಮುನ್ನಡೆಸಲು ಪ್ರೀತಿ ಮತ್ತು ಮಾನವೀಯತೆ ಎರಡು ಸಾಧನಗಳಿಂದ ಮಾತ್ರ ಸಾಧ್ಯ ಎಂದು ಬಸವಬೆಳವಿ ಚರಮೂರ್ತಿ ಚರಂತೇಶ್ವರ ವಿರಕ್ತ ಮಠದ ಪೀಠಾಧಿಪತಿ ಶರಣಬಸವ ದೇವರು ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಪಾಲಬಾವಿ

ಮಠಗಳಲ್ಲಿ ಗುರುಗಳು ಇದ್ದರೆ ಮಠಕ್ಕೆ ಭೂಷಣ, ಮನೆಯಲ್ಲಿ ಹಿರಿಯರಿದ್ದರೆ ಮನೆಗೆ ಭೂಷಣ. ಈ ಜಗತ್ತನ್ನು ಮುನ್ನಡೆಸಲು ಪ್ರೀತಿ ಮತ್ತು ಮಾನವೀಯತೆ ಎರಡು ಸಾಧನಗಳಿಂದ ಮಾತ್ರ ಸಾಧ್ಯ ಎಂದು ಬಸವಬೆಳವಿ ಚರಮೂರ್ತಿ ಚರಂತೇಶ್ವರ ವಿರಕ್ತ ಮಠದ ಪೀಠಾಧಿಪತಿ ಶರಣಬಸವ ದೇವರು ಆಶೀರ್ವಚನ ನೀಡಿದರು.

ಮೊರಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾ ಮಂಟಪದಲ್ಲಿ ಗ್ರಾಮದ ಶರಣಜೀವಿ ಯಮನಪ್ಪ ಪುನ್ನಪ್ಪ ಕೊಡತೆ ಅವರ 75ನೇ ಜನ್ಮ ಅಮೃತ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮ ಹಾಗೂ ಗ್ರಾಮದ ಸಾಧಕ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮದ ಅವರು ಆಶೀರ್ವಚನ ನೀಡಿದರು.

ಜಿಪಂ ಮಾಜಿ ಸದಸ್ಯ ಡಿ.ಎಸ್.ನಾಯಿಕ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಎಚ್.ಅತ್ತಾರ, ಅಣ್ಣಿಗೇರಿ ತಹಸೀಲ್ದಾರ್ ರಾಜು ಮಾವರಕರ, ಹಳ್ಳೂರ ಸರ್ಕಾರಿ ಪಿಯು ಕಾಲೇಜ್ ಉಪನ್ಯಾಸಕ ವೈ.ವಿ.ಕಳ್ಳಿಗುದ್ದಿ ಮಾತನಾಡಿದರು.

ಇದೇ ಸಂದರ್ಭದಲ್ಲಿ 14 ಹಿರಿಯ ನಾಗರಿಕರಾದ ವಿಷ್ಣು ಪೋಳ, ಯಲ್ಲಪ್ಪ ಮಾನೆ, ನಾಗಪ್ಪ ಕಾಂಬಳೆ, ಅಪ್ಪಸಾಬ ಕಾಂಬಳೆ, ಮಾರ್ಥಾಂಡ ಕಾರತಗೆ, ಸಿದ್ದರಾಮ ಪಾಟೀಲ, ಸಿದ್ದಪ್ಪ ಚೌಗಲಾ, ಅಕ್ಕತಾಯಿ ಕಾಂಬಳೆ, ರುಕ್ಮವ್ವ ಪಾಟಿಲ, ಸತ್ಯವ್ವ ಅಸೋದೆ, ಕಲವ್ವ ಚೌಗಲಾ, ನೀಲವ್ವ ಕಾರತಗೆ, ಚನ್ನವ್ವ ಕಾರತಗೆ, ಚಂದ್ರಾಬಾಯಿ ತೋರತ್ತಣವರ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಾರ್ಡನ್ ಶಂಕರ ಕೊಡತೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ದೈಹಿಕ ಶಿಕ್ಷಕ ರಾಜೀವ ಕಾಂಬಳೆ ನಿರೂಪಿಸಿದರು. ನ್ಯಾಯವಾದಿ ಎಂ.ಎಂ.ಪಾಟೀಲ ವಂದಿಸಿದರು. ಮುಖ್ಯೋಪಾಧ್ಯಾಯ ಸುಖದೇವ ಕಾಂಬಳೆ ಪರಿಚಯಿಸಿದರು. ನಂತರ ವಿಜಯಪುರದ ಕಲಾವಿದ ಜೂನಿಯರ್ ವಿಷ್ಣುವರ್ಧನ್ ಹಾಗೂ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.