ಗುರಿ, ಛಲವಿದ್ದರೆ ಸಾಧನೆಗೆ ಯಾವುದೇ ತಡೆಯಾಗದು: ಭಾರತಿ

| Published : May 18 2024, 12:37 AM IST

ಗುರಿ, ಛಲವಿದ್ದರೆ ಸಾಧನೆಗೆ ಯಾವುದೇ ತಡೆಯಾಗದು: ಭಾರತಿ
Share this Article
  • FB
  • TW
  • Linkdin
  • Email

ಸಾರಾಂಶ

ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಕೋಶ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೃಂಗೇರಿ ಸರ್ಕಾರಿ ಕಾಲೇಜಿನಲ್ಲಿ ಓದಿ ಸರ್ಕಾರಿ ಉದ್ಯೋಗ ಪಡೆದು ಸಾಧನೆಗೈದ ಕಾಲೇಜಿನ ಹಳೇ ವಿದ್ಯಾರ್ಥಿ ಹರ್ಷಿತ್‌ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶೃಂಗೇರಿ

ಪ್ರತಿ ಸಾಧಕನಿಗೆ ಗುರಿ, ಛಲವಿದ್ದರೆ ಸಾಧನೆ ಮಾಡುವುದಕ್ಕೆ ಯಾವುದೇ ಅಡೆತಡೆಗಳಿಲ್ಲ ಎಂದು ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಂಶುಪಾಲರಾದ ಭಾರತೀ ಅವರು ಹೇಳಿದರು.

ಅವರು ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಕೋಶ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೃಂಗೇರಿ ಸರ್ಕಾರಿ ಕಾಲೇಜಿನಲ್ಲಿ ಓದಿ ಸರ್ಕಾರಿ ಉದ್ಯೋಗ ಪಡೆದು ಸಾಧನೆಗೈದ ಕಾಲೇಜಿನ ಹಳೇ ವಿದ್ಯಾರ್ಥಿ ಹರ್ಷಿತ್‌ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಧನೆಗೆ ಸತತ ಪರಿಶ್ರಮ ಮುಖ್ಯ. ಅಸಾಧ್ಯ ಎಂದು ಕೈಕಟ್ಟಿ ಕುಳಿತುಕೊಂಡರೆ ಏನನ್ನು ಸಾಧಿಸಲು ಸಾದ್ಯವಿಲ್ಲ.ನಾವು ಮಾಡುವ ಸಾಧನೆ ಇನ್ನೊಬ್ಬರಿಗೂ ಪ್ರೇರಣೆಯಾಗಬೇಕು. ಪ್ರತಿಯೊಂದು ಸಾಧನೆಯ ಹಿಂದೆ ನಿರಂತರ ಪರಿಶ್ರಮ, ಛಲ, ಗುರಿಯಿರುತ್ತದೆ. ಕಷ್ಚಪಟ್ಟರೆ ಹೇಗೆ ಫಲ ಸಿಗುತ್ತದೆಯೋ ಹಾಗೆಯೇ ಶ್ರಮಪಟ್ಟರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹರ್ಷಿತ್‌, ಗುರು ಹಿರಿಯರ ಪ್ರೇರಣೆ, ಪ್ರೋತ್ಸಾಹ ನಮ್ಮ ಸಾಧನೆಗೆ ನಿಜವಾದ ಮಾರ್ಗದರ್ಶನ. ನಾವು ಕಷ್ಟಪಟ್ಟು ದುಡಿದರೆ ನಮಗೆ ಅದರ ಪ್ರತಿಫಲ ಸಿಗುತ್ತದೆ. ಸರ್ಕಾರಿ ಶಾಲೆ, ಕಾಲೇಜು ಎಂಬ ನಿರ್ಲಕ್ಷ ಭಾವನೆ ಬೇಡ. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಓದಿದವರೂ ಉತ್ತಮ ಸಾಧನೆ ಮಾಡಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಈ ವೇಳೆ ಹರ್ಷಿತ್ ರನ್ನು ಅಭಿನಂದಿಸಲಾಯಿುತು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಮುಖ್ಯಸ್ಥೆ ಡಾ.ಆಶಾ, ಅರ್ಥಶಾಸ್ತ್ರ ವಿಭಾಗದ ತೇಜಸ್ವಿನಿ, ರಾಜ್ಯಶಾಸ್ತ್ರ ವಿಭಾಗದ ಆಶಾ ಬಾರ್ಕೂರು ಸೇರಿ ಹಲವುರು ಇದ್ದರು.