ಕಷ್ಟ ಬಂದಾಗ ಭಗೀರಥ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ: ತಹಸೀಲ್ದಾರ್‌ ಗಿರೀಶಬಾಬು

| Published : May 15 2024, 01:37 AM IST

ಕಷ್ಟ ಬಂದಾಗ ಭಗೀರಥ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ: ತಹಸೀಲ್ದಾರ್‌ ಗಿರೀಶಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಭಗೀರಥ ಮಹರ್ಷಿಯವರ ಕಠಿಣ ತಪಸ್ಸಿಗೆ ಮೆಚ್ಚಿ ಶಿವ ಗಂಗೆಯನ್ನೇ ಧರೆಗಿಳಿಸಿದ. ಹಾಗಾಗಿ, ಮನುಷ್ಯ ಯಾವುದೇ ಕೆಲಸವಾಗಲಿ, ಕಷ್ಟಪಟ್ಟು ಮಾಡದೇ ಇಷ್ಟಪಟ್ಟು ಮಾಡಿದಾಗ ದೇವರು ಕೂಡ ನಮಗೆ ಕರುಣೆ ತೋರಿಸುತ್ತಾನೆ ಎಂದು ತಹಸೀಲ್ದಾರ್‌ ಗಿರೀಶಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಕಷ್ಟ ಬಂದಾಗ ಮನುಷ್ಯ ಭಗೀರಥ ಪ್ರಯತ್ನ ಮಾಡಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ತಹಸೀಲ್ದಾರ್‌ ಗಿರೀಶಬಾಬು ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ನಡೆದ ಭಗೀರಥ ಮಹರ್ಷಿ ಜಯಂತಿಯಲ್ಲಿ ಮಾತನಾಡಿದರು.

ಭಗೀರಥ ಮಹರ್ಷಿಯವರ ಕಠಿಣ ತಪಸ್ಸಿಗೆ ಮೆಚ್ಚಿ ಶಿವ ಗಂಗೆಯನ್ನೇ ಧರೆಗಿಳಿಸಿದ. ಹಾಗಾಗಿ, ಮನುಷ್ಯ ಯಾವುದೇ ಕೆಲಸವಾಗಲಿ, ಕಷ್ಟಪಟ್ಟು ಮಾಡದೇ ಇಷ್ಟಪಟ್ಟು ಮಾಡಿದಾಗ ದೇವರು ಕೂಡ ನಮಗೆ ಕರುಣೆ ತೋರಿಸುತ್ತಾನೆ ಎಂದರು.

ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಮುಖಂಡರಾದ ಎಂ. ರಮೇಶ, ರಾಜು ಬಿ., ಬಸವರಾಜ, ಪ್ರವೀಣ್‌ಕುಮಾರ, ಮಹೇಶ, ಹೊನ್ನಪ್ಪ, ಬಿ.ಕೊಟ್ರೇಶ, ತಿಪ್ಪೇಸ್ವಾಮಿ, ಕೆ. ಅಂಜಿನಪ್ಪ, ಕೆ.ತಿಮ್ಮಪ್ಪ, ಡಿ.ಮಂಜಪ್ಪ, ನ್ಯಾಮತಿ ಪರಸಪ್ಪ, ಮರಿಯಪ್ಪ, ಎನ್. ಹನುಮಂತಪ್ಪ, ವೆಂಕಟೇಶ, ನಾಗೇಂದ್ರಪ್ಪ, ಟಿ. ಮಂಜುನಾಥ, ಗಿರಿರಾಜ, ಡಿ. ಕೆಂಚಪ್ಪ, ಗಜೇಂದ್ರ, ಶೇಖಪ್ಪ, ಹಾಲಪ್ಪ, ನಾಗರಾಜ, ತಿರುಪತಿ, ಅಂಜಿನಪ್ಪ ಸೇರಿದಂತೆ ಇತರರು ಇದ್ದರು.

ಪ್ರತ್ಯೇಕ ಜಯಂತಿ ಆಚರಣೆ

ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ನಡೆದ ಭಗೀರಥ ಮಹರ್ಷಿ ಜಯಂತಿಯಲ್ಲಿ ಉಪ್ಪಾರ ಸಮಾಜದ ಎರಡು ಗುಂಪುಗಳು ಪ್ರತ್ಯೇಕವಾಗಿ ಆಗಮಿಸಿ ಜಯಂತಿ ಆಚರಿಸಿದ ಘಟನೆ ಜರುಗಿತು.

ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷರಾಗಿದ್ದ ಶಂಕರನಹಳ್ಳಿ ಹನುಮಂತಪ್ಪ ಅವರು ಕಳೆದ ಒಂದು ವರ್ಷದ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ತೆರವಾದ ಅಧ್ಯಕ್ಷ ಸ್ಥಾನಕ್ಕೆ ಕಳೆದ ಆರು ತಿಂಗಳ ಹಿಂದೆ ಪಟ್ಟಣದ ಉಪ್ಪಾರಗೇರಿಯ ಟಿ.ತಿಮ್ಮಪ್ಪ ಅವರನ್ನು ಸಮಾಜದ ತಾಲೂಕು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು, ಇದಾದ ನಂತರದಲ್ಲಿ ಸಮಾಜದಲ್ಲಿ ಗೊಂದಲ ಉಂಟಾಗಿ ಎರಡು ಗುಂಪುಗಳು ಹುಟ್ಟಿಕೊಂಡಿದ್ದವು. ಕಳೆದ ನಾಲ್ಕು ದಿನದ ಹಿಂದೆ ತಿಪ್ಪನಾಯಕನಹಳ್ಳಿ ಎಂ. ಮಾರಪ್ಪ ಅವರನ್ನು ಒಂದು ಗುಂಪು ಇವರೇ ನಮ್ಮ ಸಮಾಜದ ಅಧ್ಯಕ್ಷರೆಂದು ಘೋಷಣೆ ಮಾಡಿಕೊಂಡಿದ್ದರು. ಈ ಗೊಂದಲ ಭಗೀರಥ ಜಯಂತಿಯಲ್ಲಿ ಎದ್ದು ಕಾಣಿಸಿತು.