ಸಾರಾಂಶ
ವಿಪ ಸಭಾಪತಿ ಬಸವರಾಜ್ ಹೊರಟ್ಟಿ ದಂಪತಿ ದತ್ತು ಪಡೆದ ಗದಗ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಧಿಸುವ ಛಲವೊಂದಿದ್ದರೆ ಅಸಾಧ್ಯವಾದನ್ನು ಸಾಧ್ಯವಾಗಿಸಬಹುದು ಎಂಬ ವಿಷಯದ ಕುರಿತು ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಡಿಡಿಪಿಐ ಎಂ.ಎ. ರಡ್ಡೇರಗದಗ: ನಮ್ಮ ಬದುಕಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ತಾನಾಗಿಯೇ ಕಾಣಿಸುತ್ತದೆ. ಜೀವನದಲ್ಲಿ ಉತ್ಸಾಹ ಇದ್ದರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗಿಯೇ ತೆರೆಯುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು.
ಅವರು ಸಭಾಪತಿ ಬಸವರಾಜ್ ಹೊರಟ್ಟಿ ದಂಪತಿಗಳಿಂದ ದತ್ತು ಪಡೆದ ಸ್ಥಳೀಯ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಧಿಸುವ ಛಲವೊಂದಿದ್ದರೆ ಅಸಾಧ್ಯವಾದನ್ನು ಸಾಧ್ಯವಾಗಿಸಬಹುದು ಎಂಬ ವಿಷಯದ ಕುರಿತು ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳೇ ಜೀವನದಲ್ಲಿ ಯಾವುದು ಅಸಾಧ್ಯವಿಲ್ಲ, ಸಾಧಿಸುವ ಛಲ, ನಿರ್ದಿಷ್ಟ ಗುರಿ ಹೊಂದಿದ್ದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂದರು.ಅವ್ವ ಸೇವಾ ಟ್ರಸ್ಟಿನ ಡಾ. ಬಸವರಾಜ ಧಾರವಾಡ ಮಾತನಾಡಿ, ತಂದೆ-ತಾಯಿ ಇಬ್ಬರೂ ಮಕ್ಕಳನ್ನು ಮುದ್ದಿನಿಂದ, ಸಂಪತ್ತಿನ ಅಹಂಕಾರದಿಂದ ಬೆಳೆಸದೆ ಶಿಸ್ತು, ಪ್ರಾಮಾಣಿಕತೆ, ಸಂಸ್ಕಾರವಂತರಾಗಿ ಬೆಳೆಸಿದರೆ ಮಕ್ಕಳು ಎಂದಿಗೂ ದಾರಿ ತಪ್ಪುವುದಿಲ್ಲ. ಆ ನಿಟ್ಟಿನಲ್ಲಿ ಮನೆಯಲ್ಲಿ ಇಂತಹ ವಾತಾವರಣ ಮೂಡುವಂತೆ ಹೆತ್ತವರು ನೋಡಿಕೊಳ್ಳಬೇಕು. ಎಲ್ಲವನ್ನು ಶಿಕ್ಷಕರಿಂದ ನಿರೀಕ್ಷಿಸದೆ ಮಕ್ಕಳನ್ನು ಬೆಳೆಸುವಲ್ಲಿ ಪಾಲಕರ ಜವಾಬ್ದಾರಿಯೂ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ. ಅಗಡಿ, ಶಾಲಾ ಮುಖೋಪಾಧ್ಯಾಯಿನಿ ಪಾರ್ವತಿ ವಸ್ತ್ರದ, ಮಂಜುಳಾ ಸಾಮ್ರಾಣಿ, ಎಸ್.ಎಂ. ಪತ್ತಾರ, ಎಸ್.ಎ. ಬಾಣದ, ಎಸ್.ಪಿ. ಗದ್ದನಕೇರಿ, ಎಸ್.ಆರ್. ಶಿರೋಳ, ಟಿ.ವಿ. ದಾಸರ, ಎಸ್.ಆರ್. ಗಾಳಿ ಇದ್ದರು. ಸಂಜೀವಿನಿ.ಜಿ.ಕೆ. ನಿರೂಪಿಸಿದರು. ಜಯಲಕ್ಷ್ಮೀ ಬಸವರಾಜ ಅಣ್ಣಿಗೇರಿ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))