If Tungabhadra swells, it can fill lakes.
- ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಮತ । ಕಂದನಕೋವಿಯಲ್ಲಿ ಈಶ್ವರ, ಬಸವೇಶ್ವರ ದೇಗುಲ ಉದ್ಘಾಟನೆ
--------ರೈತರು ಹಠಮಾರಿತನ ಬಿಟ್ಟು, ಲಭ್ಯ ನೀರನ್ನು ಸದುಪಯೋಗಪಡಿಸಿಕೊಳ್ಳಿ: ಸಿರಿಗೆರೆ ಶ್ರೀ
ಕನ್ನಡಪ್ರಭ ವಾರ್ತೆ ದಾವಣಗೆರೆಜೀವನದಿ ತುಂಗಭದ್ರೆಯಲ್ಲಿ ಸಮರ್ಪಕವಾಗಿ ನೀರು ಹರಿದರೆ ಈ ಭಾಗದ ಕೆರೆಗಳನ್ನು ತುಂಬಿಸಲು ಸಾಧ್ಯವಾಗಲಿದ್ದು, ರೈತರು, ಸಾರ್ವಜನಿಕರು ವಿಶಾಲ ಮನೋಭಾವದಿಂದ ನೀರಾವರಿ ಯೋಜನೆಗೆ ಸಹಕರಿಸುವ ಮೂಲಕ ನೀರನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಕಂದನಕೋವಿ ಗ್ರಾಮದಲ್ಲಿ ಭಾನುವಾರ ಶ್ರೀ ಈಶ್ವರ, ಬಸವೇಶ್ವರ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನೀರಿನ ಮಹತ್ವ ಅರಿತು ಅದು ಪೋಲಾಗದಂತೆ ಎಲ್ಲರೂ ಎಚ್ಚರ ವಹಿಸಬೇಕು. ನಮ್ಮ ಊರಿಗೆ ನೀರು ಸಿಗುವ ಜೊತೆಗೆ ನೆರೆಹೊರೆ ಗ್ರಾಮಕ್ಕೂ ನೀರು ತಲುಪಬೇಕೆಂಬ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಲಭ್ಯ ನೀರನ್ನು ತಡೆಯುವುದು ಅಥವಾ ಯೋಜನೆಗೆ ಅಡ್ಡಿಪಡಿಸುವುದು ಒಳ್ಳೆಯದಲ್ಲ. ನೀರಾವರಿ ಯೋಜನೆಯಡಿ ಪೈಪ್‌ಲೈನ್ ಸೋರಿಕೆ, ಮೋಟಾರ್ ದುರಸ್ತಿ ಹಾಗೂ ಹಳೆ ಯಂತ್ರೋಪಕರಣಗಳ ಸಮಸ್ಯೆ ಎದುರಾಗಿವೆ. ಹೊಸ ಪೈಪ್ ಲೈನ್ ಮತ್ತು ಮೋಟಾರ್ ಅಳವಡಿಕೆ ಸೇರಿದಂತೆ ಅಗತ್ಯ ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಲಿ. ಜಿಲ್ಲಾ ಸಚಿವರ ಪ್ರಯತ್ನದಿಂದ ಯೋಜನೆ ಹಾಗೂ ದುರಸ್ತಿ ಕಾರ್ಯಕ್ಕೆ 75 ಕೋಟಿ ರು. ಅನುದಾನ ಮಂಜೂರಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ತುಪ್ಪದಹಳ್ಳಿ ಸೇರಿದಂತೆ ಸುತ್ತಲಿನ ಕೆರೆಗಳನ್ನು ನೀರಾವರಿ ಯೋಜನೆಯಡಿ ಸೇರಿಸಿ ನೀರು ತುಂಬಿಸುವ ಕಾರ್ಯ ನಡೆಯುತ್ತಿದೆ. ಕನಿಷ್ಠ ಒಂದು ಮೋಟಾರ್‌ನಿಂದ ನೀರು ಹರಿದರೂ ಕೆಲವು ಕೆರೆಗಳು ತುಂಬಿ, ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ. ಇದರಿಂದ ಸುತ್ತಲ ಪ್ರದೇಶಕ್ಕೂ ನೀರಿನ ಲಭ್ಯತೆ ಹೆಚ್ಚುತ್ತದೆ. ಕೆರೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಪ್ರತಿಭಟನೆ, ಧರಣಿ ನಡೆಸುವುದಕ್ಕಿಂತ ಸಂಬಂಧಪಟ್ಟ ಎಂಜಿನಿಯರ್ ಹಾಗೂ ತಜ್ಞರಿಗೆ ಸಮಸ್ಯೆ ಮನವರಿಕೆ ಮಾಡಿ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದು ಅವರು ತಿಳಿಸಿದರು.ಯಾವ ಕೆರೆಗೆ ನೀರು ಬರುತ್ತಿದೆ, ಯಾವ ಕೆರೆಗೆ ಬರುತ್ತಿಲ್ಲ ಎಂಬುದನ್ನು ಪರಿಶೀಲಿಸಿ ಅಧಿಕಾರಿಗಳ ಗಮನಕ್ಕೆ ತನ್ನಿ. ಅಗತ್ಯವಿದ್ದರೆ ಕೆರೆಗಳ ಸ್ಥಿತಿಗತಿಯ 15 ಸೆಕೆಂಡ್ ವಿಡಿಯೋ ಮಾಡಿ ಸಂಬಂಧಪಟ್ಟ ವಾಟ್ಸಾಪ್ ಗುಂಪುಗಳಿಗೆ ಹಂಚಿಕೊಳ್ಳಬಹುದು. ಮಳೆ ಬರಲಿ, ಬಾರದಿರಲಿ ತುಂಗಭದ್ರಾ ನದಿಯಲ್ಲಿ ನೀರು ಸಮೃದ್ಧವಾಗಿ ಹರಿಯಲೆಂದು ದೇವರಲ್ಲಿ ಪ್ರಾರ್ಥಿಸಬೇಕು. ನದಿಯಲ್ಲಿ ನೀರಿದ್ದರೆ ಈ ಭಾಗದ ಕೆರೆಗಳು ತುಂಬಿ, ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎಂದು ಅವರು ವಿವರಿಸಿದರು.
ರೈತರು ಹಠಮಾರಿತನ ಬಿಟ್ಟು, ಲಭ್ಯ ನೀರನ್ನು ಸದುಪಯೋಗಪಡಿಸಿಕೊಳ್ಳಿ. ಭಕ್ತಿಯೆಂದರೆ ಸಂಪೂರ್ಣ ಸಮರ್ಪಣಾ ಭಾವ ಮತ್ತು ಪರಸ್ಪರ ನಂಬಿಕೆ. ನಮ್ಮ ಪಾಲಿಗೆ ಮಾತ್ರ ನೀರು ಬೇಕೆಂಬ ಮನೋಭಾವಕ್ಕಿಂತ, ನಮಗೆ ಸಿಗದಿದ್ದರೂ ಪಕ್ಕದ ಗ್ರಾಮಸ್ಥರಿಗೆ ನೀರು ಸಿಗಲೆಂಬ ವಿಶಾಲ ಮನೋಭಾವವೇ ನಿಜವಾದ ಮಾನವೀಯತೆ. ಗ್ರಾಮಸ್ಥರ ಶ್ರಮ ಮತ್ತು ಭಕ್ತಿಯಿಂದ ನಿರ್ಮಾಣಗೊಂಡ ದೇವಸ್ಥಾನಗಳ ಅಭಿವೃದ್ಧಿಪಡಿಸಿದ್ದು ಶ್ಲಾಘನೀಯ. ಯಾವುದೇ ಅಡೆತಡೆ ಎದುರಾದರೂ ಭಕ್ತಿ ಮತ್ತು ಒಗ್ಗಟ್ಟಿನಲ್ಲಿ ಕೊರತೆಯಾಗದಿರಲಿ. ನೀರಾವರಿ ಯೋಜನೆ ಯಶಸ್ವಿಯಾಗಲು ಜನರು, ರೈತರು ಮತ್ತು ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಿರಿಗೆರೆ ಶ್ರೀಗಳು ಕರೆ ನೀಡಿದರು.ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಮಾತನಾಡಿ, ಕಳೆದ 30-35 ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದು, ಮನೆ ಮಗನಂತೆ ಸೇವೆ ಸಲ್ಲಿಸುತ್ತಿದ್ದೇನೆ. ಜಿಪಂ ಸದಸ್ಯನಾಗಿ, ಶಾಸಕನಾಗಿ ಹಾಗೂ ಈಗ ಸಚಿವನಾಗಿ ಜನರ ಸೇವೆ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯ.
ರೈತರ ಹಿತದೃಷ್ಟಿಯಿಂದ ಶ್ರೀಗಳ ಕನಸಿನ 22 ಕೆರೆ ತುಂಬಿಸುವ ಯೋಜನೆ ಜಾರಿಗೆಗೆ ಸರ್ಕಾರ ಬದ್ಧವಾಗಿದೆ ಎಂದರು.ಅನುದಾನದ ಕೊರತೆ ಹಾಗೂ ಕಾಮಗಾರಿ ವಿಳಂಬದಿಂದ ಹಿಂದೆ ರೈತರಿಗೆ ತೊಂದರೆಯಾಗಿತ್ತು. ಈಗ ಜಿಲ್ಲಾ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಸಮನ್ವಯದಲ್ಲಿ ಬಿಡುಗಡೆಯಾದ ₹18 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಉಳಿದ ₹75 ಕೋಟಿ ರು. ವೆಚ್ಚದ ಕಾಮಗಾರಿಗಳಿಗೂ ಶೀಘ್ರ ಟೆಂಡರ್ ಕರೆದು. ಗುದ್ದಲಿ ಪೂಜೆ ನೆರವೇರಿಸಲಾಗುವುದು.
ಮುಜರಾಯಿ ಸಚಿವನಾಗಿ ಕ್ಷೇತ್ರ, ರಾಜ್ಯದ ವಿವಿಧ ದೇವಾಲಯಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವೆ. ದೇವಸ್ಥಾನ ನಿರ್ಮಾಣದಷ್ಟೇ ಅದರ ಸ್ವಚ್ಛತೆ, ಪಾವಿತ್ರ್ಯ ಹಾಗೂ ಸದ್ಬಳಕೆ ಮಾಡಿಕೊಳ್ಳುವುದೂ ಗ್ರಾಮಸ್ಥರ ಜವಾಬ್ದಾರಿ ಎಂದು ಅವರು ತಿಳಿಸಿದರು.ಬಿಜೆಪಿ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಮಾಯಕೊಂಡ ಜಿ.ಎಸ್.ಶ್ಯಾಮ್, ಎಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಎಸ್.ಕೆ.ಚಂದ್ರಶೇಖರ, ಶಿವಕುಮಾರ ಸ್ವಾಮಿ, ಈಶ್ವರ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು, ಕಂದನಕೋವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
ಪೋಟೊ23ಕೆಡಿವಿಜಿ1-
ದಾವಣಗೆರೆ ತಾ. ಕಂದನಕೋವಿ ಗ್ರಾಮದ ಶ್ರೀ ಈಶ್ವರ, ಬಸವೇಶ್ವರ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ................
23ಕೆಡಿವಿಜಿ2 (ಇದು ಬೇಡ)ದಾವಣಗೆರೆ ತಾ. ಕಂದನಕೋವಿ ಗ್ರಾಮದ ಶ್ರೀ ಈಶ್ವರ, ಬಸವೇಶ್ವರ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳನ್ನು ಸಚಿವ ಕೆ.ಎಸ್.ಬಸವಂತಪ್ಪ ಸನ್ಮಾನಿಸಿದರು.
................23ಕೆಡಿವಿಜಿ3 (ಇದು ಪ್ಯಾನೆಲ್‌ಗೆ....)
ದಾವಣಗೆರೆ ತಾ. ಕಂದನಕೋವಿ ಗ್ರಾಮದ ಶ್ರೀ ಈಶ್ವರ, ಬಸವೇಶ್ವರ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೂತನ ಸಚಿವ ಕೆ.ಎಸ್.ಬಸವಂತಪ್ಪಗೆ ಶುಭ ಹಾರೈಸಿ, ಆಶೀರ್ವದಿಸಿದರು.