ಸಾರಾಂಶ
ಜಗಳೂರು: ಜಗತ್ತಿನಲ್ಲಿ ಅನೇಕ ಧರ್ಮಗಳ ಆಚಾರ ವಿಚಾರಗಳು ಭಿನ್ನವಾಗಿರುವಂತ ದೇಶದಲ್ಲಿ ಸಹನೆಯಿಂದ ಜೀವನ ನಡೆಸಲು ಧರ್ಮವೇ ಕಾರಣವಾಗಿದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಜಗಳೂರು: ಜಗತ್ತಿನಲ್ಲಿ ಅನೇಕ ಧರ್ಮಗಳ ಆಚಾರ ವಿಚಾರಗಳು ಭಿನ್ನವಾಗಿರುವಂತ ದೇಶದಲ್ಲಿ ಸಹನೆಯಿಂದ ಜೀವನ ನಡೆಸಲು ಧರ್ಮವೇ ಕಾರಣವಾಗಿದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಶ್ರೀ ಸಾಯಿಬಾಬ ದೇವಸ್ಥಾನದ ಪ್ರಥಮ ವಾರ್ಷಿಕ ಮಹೋತ್ಸವದ ಅಂಗವಾಗಿ ಶ್ರೀ ಸಾಯಿಬಾಬ ದೇವಸ್ಥಾನಕ್ಕೆ ಹಾಗೂ ಪಲ್ಲಕ್ಕಿಗೆ ಬೆಳ್ಳಿಕಿರೀಟ ಸಮರ್ಪಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರೊ.ತಿಪ್ಪೇಸ್ವಾಮಿಯವರು ಸೊಕ್ಕೆ ಗ್ರಾಮದಲ್ಲಿ ಸಾಯಿ ಬಾಬ ದೇವಸ್ಥಾನ ನಿರ್ಮಿಸಿ ಒಂದು ವರ್ಷ ಕಳೆದಿದೆ. ಈ ಭಾಗದ ಜನರ ದರ್ಶನ ಪಡೆಯುವಂತೆ ಮಾಡಿದ್ದಾರೆ. ಕಷ್ಟಗಳನ್ನು ದೂರ ಮಾಡುವಂತ ಬಾಬನ ದರ್ಶನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು. ಸೊಕ್ಕೆ ಗ್ರಾಪಂ ಮಾಜಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಮಾತನಾಡಿ, ಸಾಯಿಬಾಬ ಚಾರಿಟೇಬಲ್ ಟ್ರಸ್ಟ್‌ನಿಂದ ಸಾಯಿಬಾಬ ದೇವಸ್ಥಾನವನ್ನು ನಿರ್ಮಿಸಿಲಾಗಿದ್ದು, ಒಂದು ವರ್ಷವಾಗಿದೆ. ಪ್ರತಿ ನಿತ್ಯ ಭಕ್ತರ ಸಂಖ್ಯೆ ಅಧಿಕವಾಗುತ್ತಿದ್ದು, ಬರುವಂತ ಭಕ್ತರಿಗೆ ದಾಸೋಹದ ವ್ಯೆವಸ್ಥೆ ಮಾಡುವ ಉದ್ದೇಶದಿಂದ ಊಟದ ಹಾಲ್ ನ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲು ಅನುಕೂಲವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಪೊ.ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷ ತಿರುಮಲೇಶ್, ಸರೋಜಮ್ಮ ತಿಪ್ಪೇಸ್ವಾಮಿ, ಗಂಗಾಧರ, ಗ್ರಾ.ಪಂ. ಸದಸ್ಯರಾದ ರಾಜ, ಮಂಜುನಾಥ, ಗಿಡ್ಡನಕಟ್ಟೆ ಕಾಂತರಾಜ್ , ಹನುಮಂತಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಪೀರ್ ಮತ್ತಿತರರಿದ್ದರು.