ಸಂವಿಧಾನದ ಮೇಲೆ ನಂಬಿಕೆ ಇದ್ದರೆ ಸಿಎಂ ಸಿದ್ದು 2ಎ ಮೀಸಲಾತಿ ನೀಡಲಿ-ಜಯಬಸವಜಯ ಮೃತ್ಯುಂಜಯ ಶ್ರೀ

| Published : Nov 24 2025, 02:45 AM IST

ಸಂವಿಧಾನದ ಮೇಲೆ ನಂಬಿಕೆ ಇದ್ದರೆ ಸಿಎಂ ಸಿದ್ದು 2ಎ ಮೀಸಲಾತಿ ನೀಡಲಿ-ಜಯಬಸವಜಯ ಮೃತ್ಯುಂಜಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಸರ್ಕಾರ ಮೀಸಲಾತಿಯನ್ನು ಘೋಷಿಸಿತ್ತಾದರೂ ಅದು ಜಾರಿಗೆ ಬರಲಿಲ್ಲ. ಸಿದ್ದರಾಮಯ್ಯ ಅವರಿಗೆ ಸಂವಿಧಾನದ ಮೇಲೆ ನಂಬಿಕೆಯಿದ್ದರೇ ಪಂಚಮಸಾಲಿ ಸಮುದಾಯಕ್ಕೆ ಕೂಡಲೇ 2ಎ ಮೀಸಲಾತಿ ನೀಡುವಂತೆ ಪಂಚಮಸಾಲಿ ಪೀಠದ ಜಗದ್ಗುರು ಜಯಬಸವಜಯ ಮೃತ್ಯುಂಜಯ ಶ್ರೀಗಳು ಆಗ್ರಹಿಸಿದರು.

ಬ್ಯಾಡಗಿ: ಹಿಂದಿನ ಸರ್ಕಾರ ಮೀಸಲಾತಿಯನ್ನು ಘೋಷಿಸಿತ್ತಾದರೂ ಅದು ಜಾರಿಗೆ ಬರಲಿಲ್ಲ. ಸಿದ್ದರಾಮಯ್ಯ ಅವರಿಗೆ ಸಂವಿಧಾನದ ಮೇಲೆ ನಂಬಿಕೆಯಿದ್ದರೇ ಪಂಚಮಸಾಲಿ ಸಮುದಾಯಕ್ಕೆ ಕೂಡಲೇ 2ಎ ಮೀಸಲಾತಿ ನೀಡುವಂತೆ ಪಂಚಮಸಾಲಿ ಪೀಠದ ಜಗದ್ಗುರು ಜಯಬಸವಜಯ ಮೃತ್ಯುಂಜಯ ಶ್ರೀಗಳು ಆಗ್ರಹಿಸಿದರು.

ಕಿತ್ತೂರ ಚೆನ್ನಮ್ಮ ಜಯಂತಿ ಹಿನ್ನೆಲೆಯಲ್ಲಿ ಮೋಟೆಬೆನ್ನೂರ ಗ್ರಾಮಕ್ಕೆ ಭೇಟಿ ನೀಡಿ ಅವರು ಮಾತನಾಡಿದರು,

ಯಾವುದೇ ಸರ್ಕಾರವಿರಲಿ ಹೋರಾಟ: ಲಿಂಗಾಯತರು ಬೀದಿಯಲ್ಲಿ ಕುಳಿತು ಹೋರಾಟ ಮಾಡಿದರೂ ಸರ್ಕಾರಕ್ಕೆ ಕನಿಕರ ಬರುತ್ತಿಲ್ಲ, ಶೋಷಿತರು ಬಡವರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಸಂವಿಧಾನದಲ್ಲೇ ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್, ಬಿಜೆಪಿ ಅಥವಾ ಇನ್ಯಾವುದೇ ಸರ್ಕಾರವಿರಲಿ, ಮೀಸಲಾತಿ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ನ್ಯಾಯಸಮ್ಮತ ಹಕ್ಕುಗಳನ್ನು ಗೌರವಿಸಲಿ: ಲಿಂಗಾಯತ ಪಂಚಮಸಾಲಿ ಸಮುದಾಯ ಮೂಲತಃ ಕೃಷಿಕ ಕುಟುಂಬಗಳು ಶೈಕ್ಷಣಿಕ ಕ್ಷೇತ್ರಕ್ಕೆ ಸಮಾಜದ ಕೊಡುಗೆ ಅತ್ಯಮೂಲ್ಯ, ಪಂಚಮಸಾಲಿಗಳ ನಿಸ್ವಾರ್ಥ ಸೇವೆ ಇಡೀ ರಾಜ್ಯಕ್ಕೆ ಕೊಡುಗೆಯಾಗಿದೆ. ಇದರಿಂದಲೇ ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಇಷ್ಟೊಂದು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗಿದೆ. ನಮ್ಮ ನ್ಯಾಯ ಸಮ್ಮತವಾದ ಹಕ್ಕುಗಳನ್ನು 2ಎ ಮೀಸಲಾತಿ ಪ್ರಕಟಿಸುವ ಮೂಲಕ ಸರ್ಕಾರಗಳು ಗೌರವಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ತಿರಕಮ್ಮ ಮರಬಸಣ್ಣನವರ ಸೇರಿದಂತೆ ಸಮಾಜದ ಮುಖಂಡರಾದ ಶಿವಬಸಪ್ಪ ಕುಳೇನೂರ, ಮಲ್ಲಿಕಾರ್ಜುನ ಬಳ್ಳಾರಿ, ಪುಟ್ಟನಗೌಡ ಪಾಟೀಲ, ವಿಜಯ ಬಳ್ಳಾರಿ, ಎಂ.ಎಸ್. ಪಾಟೀಲ, ಶಂಕರಗೌಡ್ರ ಪಾಟೀಲ, ಶಿವಕುಮಾರ ಪಾಟೀಲ, ಸತೀಶ ಪಾಟೀಲ, ನಾಗನಗೌಡ ಕಲ್ಲಾಪೂರ, ಸಂಜೀವ ಹಿತ್ತಲಮನಿ, ಚಂದ್ರಶೇಖರ ಉಪ್ಪಿನ, ನಿಂಗನಗೌಡ ಕಲ್ಲಾಪೂರ, ನಿಂಗಪ್ಪ ಅಂಗಡಿ ಇನ್ನಿತರರಿದ್ದರು.