ದೂರು ನೀಡಿದರೆ ಸಾಕು ವೃದ್ದರ ಸಮಸ್ಯ ಬಗೆಹರಿಸುವೆ: ಎಸಿ ಅಬೀದ ಗದ್ಯಾಳ

| Published : Oct 04 2024, 01:21 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ನಿವೃತ್ತ ನೌಕರರ ಅಥವಾ ಕೆಲಸದಲ್ಲಿರುವ ಯಾವುದೇ ವೃದ್ದರನ್ನು ಮಕ್ಕಳು ಸರಿಯಾಗಿ ನೋಡದಿದ್ದರೆ, ಪಟ್ಟಣದಲ್ಲಿರುವ ಉಪ ಕಂದಾಯ ವಿಭಾಗಾಧಿಕಾರಿಗಳ ಕಚೇರಿಗೆ ಒಂದು ದೂರು ನೀಡಿದರೆ ಸಾಕು ಅವರ ಸಂರಕ್ಷಣೆ ನಾನು ಮಾಡುತ್ತೇನೆ. ಅವರ ಎಲ್ಲ ಸಮಸ್ಯಗಳಿಗೆ ಪರಿಹಾರ ನೀಡುವುದಾಗಿ ಉಪ ವಿಭಾಗಾಧಿಕಾರಿ ಅಬೀದ ಗದ್ಯಾಳ ಭರವಸೆ ನೀಡಿದರು.ಇಂಡಿ ಪಟ್ಟಣದಲ್ಲಿ ನಿವೃತ್ತ ನೌಕರರ ಸಂಘಕ್ಕೆ ಚಿಕ್ಕ ಸಭಾಭವನ ಮಂಜೂರು ಮಾಡಿ ಅದನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಇಂಡಿ

ನಿವೃತ್ತ ನೌಕರರ ಅಥವಾ ಕೆಲಸದಲ್ಲಿರುವ ಯಾವುದೇ ವೃದ್ದರನ್ನು ಮಕ್ಕಳು ಸರಿಯಾಗಿ ನೋಡದಿದ್ದರೆ, ಪಟ್ಟಣದಲ್ಲಿರುವ ಉಪ ಕಂದಾಯ ವಿಭಾಗಾಧಿಕಾರಿಗಳ ಕಚೇರಿಗೆ ಒಂದು ದೂರು ನೀಡಿದರೆ ಸಾಕು ಅವರ ಸಂರಕ್ಷಣೆ ನಾನು ಮಾಡುತ್ತೇನೆ. ಅವರ ಎಲ್ಲ ಸಮಸ್ಯಗಳಿಗೆ ಪರಿಹಾರ ನೀಡುವುದಾಗಿ ಉಪ ವಿಭಾಗಾಧಿಕಾರಿ ಅಬೀದ ಗದ್ಯಾಳ ಭರವಸೆ ನೀಡಿದರು.ಇಂಡಿ ಪಟ್ಟಣದಲ್ಲಿ ನಿವೃತ್ತ ನೌಕರರ ಸಂಘಕ್ಕೆ ಚಿಕ್ಕ ಸಭಾಭವನ ಮಂಜೂರು ಮಾಡಿ ಅದನ್ನು ಉದ್ಘಾಟಿಸಿ ಮಾತನಾಡಿದರು. ನಿವೃತ್ತರ ಪಿಂಚಣಿ ತೆಗೆದುಕೊಂಡು ಮಕ್ಕಳು ತಮ್ಮ ತಂದೆ ತಾಯಿಗಳ ಯೋಗಕ್ಷೇಮ ಮಾಡದಿದ್ದರೆ, ಇಲ್ಲವೇ ತಂದೆ ತಾಯಿಯ ಆಸ್ತಿ ಕಿತ್ತುಕೊಂಡು ಅವರಿಗೆ ಸರಿಯಾಗಿ ನೋಡದಿದ್ದರೆ ಅಂತವರು ಮುಲಾಜಿಲ್ಲದೇ ಎಸಿ ಕಚೇರಿಗೆ ದೂರು ನೀಡಬಹುದು. ದೂರು ನೀಡಿದ ತಕ್ಷಣವೇ ತಂದೆ ತಾಯಿಯರ ಆಸ್ತಿಯನ್ನು ಮರಳಿ ಅವರಿಗೆ ಸಿಗುವಂತೆ ಮಾಡುತ್ತೇನೆ. ಹಿರಿಯರು ಸಮಾಜದ ಆಸ್ತಿ. ಅವರ ಅನುಭವಗಳು ಪ್ರತೀ ಸಮಾಜಕ್ಕೆ ಅತ್ಯಗತ್ಯ. ಕಾರಣ ವೃದ್ದರನ್ನು ಯಾರೂ ಕಡೆಗಣಿಸಬಾರದು ಎಂದು ಎಚ್ಚರಿಸಿದರು.ಸರ್ಕಾರಿ ನೌಕರರ ಸಂಘದ ನಿವೃತ್ತ ಅಧ್ಯಕ್ಷ ಅಂಬಣ್ಣ ಸುಣಗಾರ, ನಿವೃತ್ತ ಮುಖ್ಯಗುರು ಕೆ.ಡಿ.ಪಾಟೀಲ ಮಾತನಾಡಿದರು. ಶಿವಲಿಂಗಪ್ಪ ಪಟ್ಟದಕಲ್ಲ, ಬಿ.ಬಿ.ಬಿರಾದಾರ, ಎಸ್.ಬಿ.ಹೊಸಮನಿ, ಆರ್.ಎಂ.ಮೇತ್ರಿ, ಕೆ.ವಿ.ಪಾಟೀಲ, ಎಫ್.ಬಿ.ದರ್ಗಾ, ಎಸ್.ಜಿ.ಕಳಾವಂತ, ಸಿ.ಜೆ.ಕಟ್ಟಿಮನಿ, ಬಿ.ಸಿ.ಸಿರಗೂರ ಮೊದಲಾವರು ಇದ್ದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಪೋಳ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಎಸ್.ವಿ.ಹೂಗಾರ ಸ್ವಾಗತಿಸಿದರು.