ಹಣದ ಹಿಂದೆ ಬಿದ್ದರೆ ಆರೋಗ್ಯ ಹಾಳು: ದೊಡ್ಮನಿ

| Published : Dec 27 2023, 01:31 AM IST / Updated: Dec 27 2023, 01:32 AM IST

ಸಾರಾಂಶ

ಇಂದಿನ ದಿನಗಳಲ್ಲಿ ಹಲವಾರು ಜನ ಹಣ ಗಳಿಸುವುದಕ್ಕೆ ಹೆಚ್ಚು ಸಮಯ ನೀಡಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದಕರವಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರತಿಭಾವಂತ ಮಕ್ಕಳಿಗೆ, ಸಾಹಿತಿಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಧಕರಿಗೆ ವೇದಿಕೆ ನೀಡಿ ಬಹುಮುಖ ಪ್ರತಿಭೆಗಳನ್ನು ಹುಟ್ಟುಹಾಕಿ ಸಮಾಜಕ್ಕೆ ಪರಿಚಯಿಸುತ್ತಿರುವ ಬಬಲಾದ ಮಠದ ಕಾರ್ಯ ಶ್ಲಾಘನೀಯ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೀಟ ಶಾಸ್ತ್ರಜ್ಞರಾದ ಚಾಮರಾಜ ದೊಡ್ಮನಿ ಹೇಳಿದರು.

ಕಲಬುರಗಿ ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 190ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಇಂದಿನ ದಿನಗಳಲ್ಲಿ ಹಲವಾರು ಜನ ಹಣ ಗಳಿಸುವುದಕ್ಕೆ ಹೆಚ್ಚು ಸಮಯ ನೀಡಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯವೇ ಭಾಗ್ಯವೆಂಬುದು ಮರೆತಿದ್ದಾರೆ. ಮನುಷ್ಯನ ನಿರ್ಲಕ್ಷತೆಯಿಂದ ಹಲವಾರು ಕ್ರಿಮಿಗಳು ಉತ್ಪತ್ತಿಯಾಗಿ ರೋಗಗಳು ಹರಡುತ್ತಿವೆ. ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಮುಂಜಾಗ್ರತೆ ವಹಿಸಿ ಜೀವನ ಸಾಗಿಸಬೇಕು ಎಂದರು.

ದಂತ ವೈದ್ಯರಾದ ಡಾ. ಪ್ರಜ್ಞಾ ಜೋಶಿ ಯವರು ಹಲ್ಲುಗಳ ಸುರಕ್ಷತೆಯ ಬಗ್ಗೆ ಸಲಹೆ ನೀಡಿದರು. ಯಾದಗಿರಿಯ ಚನ್ನವೀರ ಕೊನೆಕ ನೃತ್ಯ ಮಾಡಿದರು. ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸಂಗಮೇಶ ನಾಗೂರ, ಮಾಣಿಕ ಮಿರ್ಕಲ, ಶರಣು ಮಾಲಿಪಾಟೀಲ ವರನಾಳ, ಗುರುರಾಜ ಹಸರಗುಂಡಗಿ, ಸಿದ್ದಣ್ಣಾ ವಾಡಿ, ಶೋಭಾ ಮಿರ್ಕಲ್, ಅನಿಲಕುಮಾರ ಮೇಳಕುಂದಿ, ಶರಣು ಪ್ಯಾಟಿ, ಶಿವಕುಮಾರ ಸಾವಳಗಿ ನಾಗಣ್ಣಾ ಚೆಂಗಟಿ, ವೆಂಕಟ ಜೋಶಿ ಸಲಗರ, ಚನ್ನವೀರ ಮಠಪತಿ ಇದ್ದರು.