ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕ್ಷಯ ರೋಗಿಗಳು ನಿರಂತರ 6 ತಿಂಗಳು ಸೂಕ್ತ ಚಿಕತ್ಸೆ ಪಡೆದರೆ ರೋಗದಿಂದ ಮುಕ್ತಿ ಹೊಂದಬಹುದು. ನಿಯಮಿತವಾಗಿ ಔಷಧ ತೆಗೆದುಕೊಳ್ಳದಿದ್ದರೆ ಅಡ್ಡ ಪರಿಣಾಮಗಳು ಉಂಟಾಗಬಹುದು. ಎರಡು ವಾರಕ್ಕೂ ಹೆಚ್ಚು ಕೆಮ್ಮು, ಜ್ವರ ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಕ್ಷಯ ರೋಗ ಪರೀಕ್ಷೆ ಮಾಡಿಸಬೇಕು ಎಂದು ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ತೈಸಿನ್ ಶಿವಣಗಿ ಹೇಳಿದರು.ಕುಂಟೋಜಿ ಗ್ರಾಮದ ಆರೋಗ್ಯ ಉಪಕೇಂದ್ರದಲ್ಲಿ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಲ್ಲಿ 100 ದಿನದ ಕ್ಷಯ ಮುಕ್ತ ಭಾರತ ನಿಮಿತ್ತ ಹಮ್ಮಿಕೊಂಡಿದ್ದ ಉಚಿತ ಎಕ್ಸರೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೋಗ ಯಾರಿಗೆ ಬೇಕಾದರೂ ಬರಬಹುದು. ಅದರಲ್ಲೂ ಎಚ್‌ಐವಿ ಸೋಂಕಿತರು, ಮಧುಮೇಹ ಪೀಡಿತರು ಹಾಗೂ ಧೂಮಪಾನ ಮಾಡುವವರು ಬಹುಬೇಗ ಸೋಂಕಿಗೆ ಒಳಗಾಗುತ್ತಾರೆ. ಕ್ಷಯ ರೋಗಿ ಕೆಮ್ಮಿದಾಗ ಮತ್ತು ಸೀನಿದಾಗ ಹೊರಬರುವ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ ಸೇರಿ ಸೋಂಕು ಉಂಟಾಗುತ್ತದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ರೋಗ ನಿಯಂತ್ರಿಸಬಹುದು. ಕ್ಷಯ ರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದರು.
ಕುಂಟೋಜಿ ಗ್ರಾಮದ ಆರೋಗ್ಯ ಉಪಕೇಂದ್ರದಲ್ಲಿ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಲ್ಲಿ 100 ದಿನದ ಕ್ಷಯ ಮುಕ್ತ ಭಾರತ ನಿಮಿತ್ತ ಹಮ್ಮಿಕೊಂಡಿದ್ದ ಉಚಿತ ಎಕ್ಸರೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಗರ, ಹಳ್ಳಿ, ಪಟ್ಟಣ ಸೇರಿ ಎಲ್ಲ ಕಡೆಗೂ ಕ್ಷಯ ರೋಗಿಗಳ ಪತ್ತೆ ಹಚ್ಚುವ ಕಾರ್ಯ ತಾಲೂಕಿನಾದ್ಯಾoತ ಆಯ್ದ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಕ್ಷಯರೋಗ ಲಕ್ಷಣಗಳು ಇದ್ದವರು ಹಾಗೂ ದುರ್ಬಲ ವರ್ಗದವರು ತಪಾಸಣೆಗೆ ಒಳಪಟ್ಟು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಎಂ.ಎಸ್. ಗೌಡರ ತಿಳಿಸಿದರು.
ಈ ವೇಳೆ ಕುಂಟೋಜಿ ಗ್ರಾಮದ ಒಟ್ಟು 118 ಜನರು ಉಚಿತ ಎಕ್ಸರೇ ಪರೀಕ್ಷೆ ಮಾಡಿಸಿಕೊಂಡರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ಜಿ. ತಾಳಿಕೋಟಿ ಜಿಲ್ಲಾ ಕಾರ್ಯಕ್ರಮ ಕೋರ್ಡಿನೇಟರ್ ಮಂಜುನಾಥ ಮಾಮನೆ ಆರೋಗ್ಯ ನಿರೀಕ್ಷಕ ಎಸ್ ಬಿ ಹೂಗಾರ ಛಾಯಾ ಚಿತ್ರಣಾಧಿಕಾರಿಗಳಾದ ಈರಣ್ಣ ಕಸಬೇಗೌಡರ, ಬಸವರಾಜ್ ಕುಂಟೋಜಿ, ಬಸವರಾಜ ಹವೇರಿ, ಎಸ್,ಟಿ, ಎಸ್, ಶಿವರಾಜ ದೀಕ್ಷಿತ, ವಿ,ಕೆ, ಪಾಟೀಲ, ಝೆಡ್,ಎಂ. ಬೀಳಗಿ, ಮಲ್ಲನಗೌಡ ಬಿರಾದರ, ಗರಸಂಗಿ ಪ್ರಾ ಆ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.